ಸ್ಟಾಕ್‌ಹೋಮ್‌:ಪ್ರಸಕ್ತ ಸಾಲಿನ ವೈದ್ಯಕೀಯ ನೊಬೆಲ್‌ ಪ್ರಶಸ್ತಿಗೆ ಹಾರ್ವೆ ಜೆ.ಆಲ್ಟರ್‌, ಚಾರ್ಲ್ಸ್‌ ಎಂ.ರೈಸ್ ಹಾಗೂ ಮೈಕೆಲ್ ಹೋವನ್ ಹಾಗೂ ಭಾಜನರಾಗಿದ್ದಾರೆ. ಹೆಪಟೈಟಿಸ್ ಸಿ ವೈರಸ್‌ ಪತ್ತೆಗಾಗಿ ಈ ಮೂವರಿಗೆ ಜಂಟಿಯಾಗಿ ಪ್ರಶಸ್ತಿ ಘೋಷಿಸಲಾಗಿದೆ.
ಹಾರ್ವೆ ಜೆ.ಆಲ್ಟರ್‌, ಚಾರ್ಲ್ಸ್‌ ಎಂ.ರೈಸ್ ಅವರು ಅಮೆರಿಕ ಮೂಲದವರಾಗಿದ್ದು, ಮೈಕೆಲ್​ ಹೋವನ್​ ಬ್ರಿಟನ್​ನವರು. ಹೆಪಟೈಟಿಸ್ ಸಿ ಸೋಂಕಿನ ಉಪಶಮನವು ಈ ವಿಜ್ಞಾನಿಗಳ ಸಂಶೋಧನೆಗಳಿಂದ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ನೊಬೆಲ್​ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಶಸ್ತಿಯು ಚಿನ್ನದ ಪದಕ ಮತ್ತು 10 ಮಿಲಿಯನ್‌ ಸ್ಪೀಡಿಶ್ ಕ್ರೊನಾ (ಅಂದಾಜು ರೂ. 8.22 ಕೋಟಿ) ಒಳಗೊಂಡಿರುತ್ತದೆ.
For the first time in history, the Hepatitis C virus can now be cured. The 2020 Medicine Laureates’ discoveries revealed the cause of the remaining cases of chronic hepatitis and made possible blood tests and new medicines that have saved millions of lives.#NobelPrizepic.twitter.com/hqJK1uWX3u
— The Nobel Prize (@NobelPrize)October 5, 2020

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು 7 ಕೋಟಿ ಹೆಪಟೈಟಿಸ್‌ ಪ್ರಕರಣಗಳಿದ್ದು, ಪ್ರತಿ ವರ್ಷ ಹೆಪಟೈಟಿಸ್‌ ಸೋಂಕಿನಿಂದಾಗಿ ಸುಮಾರು 4 ಲಕ್ಷ ಜನರು ಬಲಿಯಾಗುತ್ತಿದ್ದಾರೆ. ದೀರ್ಘಾವಧಿ ಅವರೆಗೂ ಕಾಡುವ ಹೆಪಟೈಟಿಸ್‌ ಕಾಯಿಲೆಯು ಕ್ಯಾನ್ಸರ್‌ ಮತ್ತು ಯಕೃತ್ತಿನ ಸಮಸ್ಯೆ ಉಂಟು ಮಾಡುತ್ತದೆ.
ಹೆಪಟೈಟಿಸ್‌ ಎ ಮತ್ತು ಬಿ ಸಂಶೋಧನೆಗಳ ನಂತರವೂ ದೀರ್ಘಕಾಲದವರೆಗೂ ಕಾಡುವ ಯಕೃತಿನ ಸಮಸ್ಯೆಗೆ ಇದುವರೆಗೆ ಸಂಪೂರ್ಣ ಪರಿಹಾರ ದೊರೆತಿರಲಿಲ್ಲ. ಹೆಪಟೈಟಿಸ್ ಸಿ ವೈರಸ್ ಕುರಿತು ಪತ್ತೆಯಾದ ನಂತರದಲ್ಲಿ ಅದಕ್ಕೆ ಅಗತ್ಯವಿರುವ ರಕ್ತ ಪರೀಕ್ಷೆಗಳು ಹಾಗೂ ಹೊಸ ಔಷಧಿಗಳ ಅಭಿವೃದ್ಧಿಯಿಂದಾಗಿ ಲಕ್ಷಾಂತರ ಜನರ ಜೀವ ಉಳಿದಿದೆ.
ಇದನ್ನೂ ಓದಿ:ಉಗ್ರರ ದಾಳಿಗೆ ಇಬ್ಬರು ಭದ್ರತಾ ಸಿಬ್ಬಂದಿ ಹುತಾತ್ಮ: ಮೂವರಿಗೆ ಗಾಯ
ಅಕ್ಟೋಬರ್‌ 12ರ ವರೆಗೂ ಆರು ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿರುವವರಿಗೆ ನೊಬೆಲ್‌ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ವೈದ್ಯಕೀಯ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಸಾಧನೆ ತೋರಿರುವವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಈ ಬಾರಿ ಕರೊನಾ ಸೋಂಕಿನಿಂದ ಇಡೀ ವಿಶ್ವವೇ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಸೋಂಕಿನ ಕುರಿತಂತೆ (ವೈದ್ಯಕೀಯ ಕ್ಷೇತ್ರ) ನಡೆಸಿರುವ ಸಂಶೋಧನೆಗೆ ಪ್ರಶಸ್ತಿ ಬಂದಿದೆ.
ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಕಾರಣವೇನು? ₹50 ಲಕ್ಷ ಸೀಜ್​, ಕೆಪಿಸಿಸಿ ಅಧ್ಯಕ್ಷ ಅರೆಸ್ಟ್​?

ನೋಟು ಮುಟ್ಟುವಿರಾ? ಹುಷಾರ್​! ಹುಷಾರ್​! ಆರ್​ಬಿಐನಿಂದ ಬಂದಿದೆ ಆತಂಕದ ವರದಿ

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ: ದುಷ್ಟತನದ ಪರಮಾವಧಿ ಎಂದ ಸಿದ್ದುಗೆ ಕಮೆಂಟಿಗರಿಂದ ಗುದ್ದೋ ಗುದ್ದು!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:2 × one =
Remember me
