ವಾಷಿಂಗ್ಟನ್​:ಅಮೆರಿಕದ ಅರ್ಥಶಾಸ್ತ್ರಜ್ಞ ಪಾಲ್ ಆರ್. ಮಿಲ್​ಗ್ರೋಮ್​ ಮತ್ತು ರಾಬರ್ಟ್ ಬಿ. ವಿಲ್ಸನ್ ಅವರಿಗೆ ಈ ಸಾಲಿನ ಅರ್ಥಶಾಸ್ತ್ರದಲ್ಲಿ ನೊಬೆಲ್​ ಪ್ರಶಸ್ತಿ ಲಭಿಸಿದೆ.
ಸ್ಟಾಕ್ ಹೋಮ್ ಮೂಲದ ನೊಬೆಲ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಗೋರಾನ್ ಹಾನ್ಸನ್ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಘೋಷಣೆ ಮಾಡಿದರು. ಹೊಸ ಹರಾಜು ಸ್ವರೂಪದ ಸಿದ್ಧಾಂತ ಮತ್ತು ಆವಿಷ್ಕಾರಗಳ ಹರಾಜಿನ ಸುಧಾರಣೆಗಳಿಗಾಗಿ ಈ ಪ್ರಶಸ್ತಿ ಲಭಿಸಿದೆ.
ಪಾಲ್ ಆರ್. ಮಿಲ್​ಗ್ರೋಮ್​ ಹರಾಜಿಗೆ ಸಂಬಂಧಪಟ್ಟ ಸಾಮಾನ್ಯ ಸಿದ್ಧಾಂತವನ್ನು ರೂಪಿಸಿದ್ದಾರೆ. ರಾಬರ್ಟ್ ಬಿ. ವಿಲ್ಸನ್ ತರ್ಕಬದ್ಧ ಬಿಡ್​ದಾರರು ಹೇಗೆ ಬಿಡ್​ ಮಾಡುವಾಗ ಚಾಕಚಕ್ಯತೆ ತೋರುತ್ತಾರೆ, ಅಂದಾಜಿಗಿಂತ ಅವರು ಕಡಿಮೆ ಏಕೆ ಬಿಡ್ ಮಾಡುತ್ತಾರೆ ಎಂಬುದರ ಬಗ್ಗೆ ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗಿದೆ.
ಇದನ್ನೂ ಓದಿ:ವರ್ಲ್ಡ್​ ಫುಡ್​ ಪ್ರೋಗ್ರಾಮ್​ಗೆ ನೊಬೆಲ್​ ಶಾಂತಿ ಪುರಸ್ಕಾರ
1969ರಿಂದ ಅರ್ಥಶಾಸ್ತ್ರ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಇದುವರೆಗೂ 51 ಬಾರಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ.
ಕಳೆದ ಬಾರಿ ಜಾಗತಿಕ ಬಡತನದ ಬಗ್ಗೆ ಸಂಶೋಧನೆ ಮಾಡಿದ್ದ ಮ್ಯಾಚಾಸ್ಯುಸೆಟ್ಸ್ ವಿವಿಯ ಇಬ್ಬರು ಹಾಗೂ ಹಾರ್ವಡ್ ವಿವಿಯ ಮೂವರಿಗೆ ಈ ಪ್ರಶಸ್ತಿ ಲಭಿಸಿತ್ತು.
ರಸಾಯನ ಶಾಸ್ತ್ರದ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ

ವರ್ಷಗಳ ಬಳಿಕ ಸಾಹಿತ್ಯ ನೊಬೆಲ್ ಘೋಷಣೆ- ಅಮೆರಿಕದ ಕವಯತ್ರಿಗೆ ಪ್ರಶಸ್ತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight + 10 =
Remember me
