ನವದೆಹಲಿ:ಇಡೀ ಜಗತ್ತಿನಲ್ಲಿ ಕರೊನಾ ಅಬ್ಬರ ಜೋರಾಗಿಯೇ ಇದೆ. ಅದರಲ್ಲಿಯೂ ಹಲವು ಕಡೆಗಳಲ್ಲಿ ಇದರ ಎರಡನೆಯ ಅಲೆಯೂ ಶುರುವಾಗಿದ್ದು, ಕ್ಷಣ ಕ್ಷಣಕ್ಕೂ ಆತಂಕ ಸೃಷ್ಟಿಸುತ್ತಲೇ ಇದೆ. ಹೆಚ್ಚಿನ ದೇಶಗಳಲ್ಲಿ ದಿನನಿತ್ಯವೂ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದೆ.
ಆದರೆ ಅಚ್ಚರಿಯ ಬೆಳವಣಿಯೊಂದರಲ್ಲಿ ಈ ಒಂದು ದೇಶದಲ್ಲಿ ಕಳೆದ 200 ದಿನಗಳಿಂದ ಒಂದೇ ಒಂದು ಹೊಸ ಸೋಂಕು ಪ್ರಕರಣವೇ ದಾಖಲಾಗಿಲ್ಲವಂತೆ. ಅದಕ್ಕೂ ಅಚ್ಚರಿಯ ಸಂಗತಿ ಎಂದರೆ ಈ ದೇಶ ಇರುವುದು ಕರೊನಾದ ತವರು ಚೀನಾದ ಪಕ್ಕದಲ್ಲಿ!
ಹೌದು. ಈ ದೇಶವೇ ತೈವಾನ್. ಸುಮಾರು 2.38 ಕೋಟಿಯಷ್ಟು ಜನಸಂಖ್ಯೆ ಹೊಂದಿರುವ ತೈವಾನ್​ನಲ್ಲಿ ಕಳೆದ 200 ದಿನಗಳ ಅಂದರೆ ಸುಮಾರು ಆರು ಮುಕ್ಕಾಲು ತಿಂಗಳು ಕರೊನಾ ಹೊಸ ಪ್ರಕರಣಗಳು ದಾಖಲಾಗಿಲ್ಲ!
ಏಪ್ರಿಲ್ 12ರಂದು ಕೊನೆಯ ಬಾರಿಗೆ ತೈವಾನ್‌ನಲ್ಲಿ ಸೋಂಕು ಪತ್ತೆಯಾಗಿತ್ತು. ಅಂದಿನಿಂದ ಇಂದಿನವರೆಗೂ ಯಾವುದೇ ಹೊಸ ಕೇಸ್​ ಇಲ್ಲ. ಈಗಾಗಲೇ ಸೋಂಕಿತರಾಗಿದ್ದವರ ಪೈಕಿ 553 ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರಂಭ ದಿನದಿಂದ ಇಲ್ಲಿಯವರೆಗೆ ಕೇವಲ ಏಳು ಸಾವಿನ ಪ್ರಕರಣಗಳು ವರದಿಯಾಗಿದ್ದು, ಅತ್ಯಂತ ಕಡಿಮೆ ಸೋಂಕಿತರನ್ನು ಹೊಂದಿರುವ ದೇಶ ಎಂಬ ಕೀರ್ತಿಯೂ ಇದಕ್ಕೆ ಲಭಿಸಿದೆ.
ಇದನ್ನೂ ಓದಿ:ಶ್ರೀರಾಮುಲು ಆಪ್ತನ ಮಗಳ ಅದ್ದೂರಿ ಮದುವೆ: ಮಾಸ್ಕ್​ ಇಲ್ಲ… ಅಂತರವಿಲ್ಲ..?
ಈ ಹಿಂದೆ ಸಾರ್ಸ್ ವೈರಸ್ ಸೋಂಕು ಹರಡಿದ್ದಾಗ ತೈವಾನ್ ಅತ್ಯಂತ ಭೀಕರ ಸ್ಥಿತಿ ಅನುಭವಿಸಿತ್ತು. ಅದರಿಂದ ಕಲಿತಿರುವ ಪಾಠವೇ ಇದು. ಈ ಹಿನ್ನೆಲೆಯಲ್ಲಿ ಕರೊನಾ ಆರಂಭವಾದಾಗಲೇ ತನ್ನ ಗಡಿಗಳನ್ನು ಮುಚ್ಚಿತ್ತು. ಪ್ರಯಾಣ ಚಟುವಟಿಕೆಗಳ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿತ್ತು. ಗಡಿಯಲ್ಲಿನ ಓಡಾಟಕ್ಕೂ ನಿರ್ಬಂಧ ಹೇರಿದೆ.
ತೈವಾನ್‌ನಲ್ಲಿ ಆರಂಭದಿಂದಲೂ ಪ್ರತಿಯೊಬ್ಬರಿಗೂ ಮಾಸ್ಕ್ ಹಂಚಿಕೆ ಮಾಡಲಾಗಿತ್ತು. ಹಾಗೆಯೇ ಪ್ರತಿಯೊಬ್ಬರೂ ಅದನ್ನು ಕಡ್ಡಾಯವಾಗಿ ಧರಿಸುವಂತೆ ನೋಡಿಕೊಳ್ಳಲಾಯಿತು. ದೇಶದೊಳಗೆ ಮಾಸ್ಕ್‌ಗಳ ಲಭ್ಯತೆ ಹೆಚ್ಚಾಗಿರುವಂತೆ ನೋಡಿಕೊಳ್ಳಲು ಮಾಸ್ಕ್‌ಗಳ ರಫ್ತನ್ನು ನಿಷೇಧಿಸಿತು. ನಾಲ್ಕು ತಿಂಗಳೊಳಗೆ ದೇಶದಲ್ಲಿನ ಕಂಪೆನಿಗಳು ಪ್ರತಿ ದಿನಕ್ಕೆ 2 ಮಿಲಿಯನ್‌ನಿಂದ 20 ಮಿಲಿಯನ್‌ಗೆ ಮಾಸ್ಕ್ ಉತ್ಪಾದನೆಯನ್ನು ಹೆಚ್ಚಿಸಿದವು.
ತೈವಾನ್‌ ಸರ್ಕಾರ ಪ್ರತಿ ಒಂದು ಪ್ರಕರಣಕ್ಕೆ ಕನಿಷ್ಠ 150 ಮಂದಿ ಸಂಪರ್ಕಿತರನ್ನು ಪತ್ತೆ ಹಚ್ಚಿದೆ. ಸೋಂಕಿತರೊಂದಿಗೆ ಯಾವುದೇ ರೀತಿ ಪ್ರಾಥಮಿಕ ಸಂಪರ್ಕಕ್ಕೆ ಬಂದವರನ್ನು ಕಠಿಣ 14 ದಿನಗಳ ಕ್ವಾರೆಂಟೈನ್‌ಗೆ ಒಳಪಡಿಸಿದೆ. ಅವರಲ್ಲಿ ನೆಗೆಟಿವ್ ಇದ್ದರೂ ಹೊರಗೆ ಬರಲು ಅವಕಾಶ ನೀಡಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿಯ ಜನರು ಸರ್ಕಾರ ಸೂಚಿಸಿರುವ ಮಾರ್ಗದರ್ಶನಗಳನ್ನು ಚಾಚೂತಪ್ಪದೇ ಪಾಲಿಸುತ್ತಿದ್ದಾರೆ. ಟೀಕೆ-ಟಿಪ್ಪಣೆಗಳಿಗೆ ಆಸ್ಪದ ಇಲ್ಲದಂತೆ ಜನರು ಎಲ್ಲವನ್ನೂ ಪಾಲನೆ ಮಾಡುತ್ತಿದ್ದಾರೆ.
ಭಾರತ ವಿರೋಧಿ ಮೀಟಿಂಗ್​ ಮಧ್ಯೆ ಶ್ರೀರಾಮ, ಹನುಮಾನ್​- ಪಾಕ್​ ಗಣ್ಯರು ಸುಸ್ತೋ ಸುಸ್ತು!

ಅಂದು ಅವನೆಲ್ಲಿ ತಪ್ಪಿದ..? ಇಂದು ನಾವೆಲ್ಲಿ ತಪ್ಪುತ್ತಿದ್ದೇವೆ..?

ಬ್ಯಾನ್​ ಆದ್ರೂ ಸಿಗ್ತಿದ್ದ ಪಬ್​ಜಿಗೆ ಫುಲ್​ಸ್ಟಾಪ್​: ಇಂದಿನಿಂದ ಭಾರತದಲ್ಲಿ ನೋ ಎಂಟ್ರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + twelve =
Remember me
