ನೋಯ್ಡಾ (ಉತ್ತರ ಪ್ರದೇಶ):ಈ ಚಿತ್ರದಲ್ಲಿ ಕಾಣಿಸುತ್ತಿರುವುದು ಉತ್ತರ ಪ್ರದೇಶದ ನೋಯ್ಡಾದಲ್ಲಿರುವ ಬೃಹತ್​ ಅವಳಿ ಗೋಪುರ. ಸೂಪರ್​ ಟೆಕ್​ ಅಪೆಕ್ಸ್​ ಮತ್ತು ಸಿಯಾನಿ ಎಂಬುದು ಈ ಕಟ್ಟಡಗಳ ಹೆಸರು. 2004ರಲ್ಲಿ ನಿರ್ಮಾಣ ಆಗಿರುವ ಈ ಗೋಪುರದ ನಿರ್ಮಾಣ ಕಾರ್ಯಕ್ಕೆ ತಗುಲಿದ್ದು ಸುಮಾರು 70 ಕೋಟಿ ರೂಪಾಯಿ. ಇನ್ನು ಕೆಲವೇ ಗಂಟೆಗಳಲ್ಲಿ ಈ ಬೃಹತ್​ ಗೋಪುರ ಇತಿಹಾಸದ ಪುಟ ಸೇರಲಿದೆ. ಇದಕ್ಕಾಗಿ ಖರ್ಚು ಮಾಡುತ್ತಿರುವುದು 20 ಕೋಟಿ ರೂಪಾಯಿ! ವರ್ಷಗಟ್ಟಲೆ ನಿರ್ಮಾಣ ಆಗಿರುವ ಈ ಕಟ್ಟಡ ಕೇವಲ 12 ಸೆಕೆಂಡ್​ಗಳಲ್ಲಿ ಧರೆಗೆ ಉರುಳಲಿದೆ! ಇದಕ್ಕಾಗಿ ಮಧ್ಯಾಹ್ನ 2.30ರ ಮುಹೂರ್ತ ಫಿಕ್ಸ್​ ಮಾಡಲಾಗಿದೆ.
ಅಷ್ಟಕ್ಕೂ ಇಂಥದ್ದೊಂದು ಕಾರ್ಯ ನಡೆಯುತ್ತಿರುವುದಕ್ಕೆ ಕಾರಣ ಸುಪ್ರೀಂಕೋರ್ಟ್​ ಆದೇಶ. ಈ ಅವಳಿ ಕಟ್ಟಡಗಳ ಒಂದು ಕಟ್ಟಡ 103 ಮೀಟರ್ ಹಾಗೂ ಇನ್ನೊಂದು 97 ಮೀಟರ್ ಎತ್ತರವಿದೆ. ಈ ಗೋಪುರದಲ್ಲಿ ಒಟ್ಟು 915 ಫ್ಲ್ಯಾಟ್​​​ಗಳು, 20 ಕಮರ್ಷಿಯಲ್ ಅಂಗಡಿಗಳಿವೆ.
ಈ ಗೋಪುರಗಳನ್ನು ಅಕ್ರಮವಾಗಿ ಕಟ್ಟಿರುವ ಕಾರಣ ನೆಲಸಮಕ್ಕೆ ಸುಪ್ರೀಂಕೋರ್ಟ್​ ಆದೇಶಿಸಿದೆ. ಸೂಪರ್‌ ಟೆಕ್ ಎಮರಾಲ್ಡ್ ಸಂಸ್ಥೆ ನಿಯಮಾವಳಿ ಉಲ್ಲಂಘಿಸಿ ನಿರ್ಮಿಸಿದ್ದರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಬಂಧನೆಗಳಿಗೆ ವಿರುದ್ಧವಾಗಿ ನಿರ್ಮಿಸುತ್ತಿದ್ದ ಅವಳಿ ಗೋಪುರಗಳನ್ನು ಕೆಡವಲು ಆಗಸ್ಟ್​ 31, 2021ರಂದು ಆದೇಶಿಸಿತ್ತು.
ಹೀಗಿದೆ ಸಿದ್ಧತೆ:ಇದಾಗಲೇ ಗೋಪುರ ನೆಲಸಮಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ನಡೆಸಿಕೊಂಡಿದೆ. ನೆಲಸಮಕ್ಕಿಂತ ಮುಂಚಿನ ಪ್ರಕ್ರಿಯೆ ನಸುಕಿನಲ್ಲಿಯೇ ಶುರುವಾಗಿದೆ. ಈ ಕಾರ್ಯಾಚರಣೆಗೋಸ್ಕರ 3,700 ಕೆಜಿ ಸ್ಫೋಟಕ ಬಳಕೆ ಮಾಡಿಕೊಳ್ಳುತ್ತಿದೆ.
ಮಧ್ಯಾಹ್ನ 2:30ಕ್ಕೆ 12 ಸೆಂಕೆಡ್​​​ಗಳಲ್ಲಿ ಗೋಪುರ ಧರೆಗೆ ಉರುಳಲಿದೆ. ಈ ವೇಳೆ ಎನ್​​ಡಿಆರ್​​ಎಫ್​, ಸಿಬಿಆರ್​​ಐ ಸೇರಿದಂತೆ ಇತರೆ ಅಧಿಕಾರಿಗಳು ಸ್ಥಳದಲ್ಲಿ ಹಾಜರು ಇರಲಿದ್ದಾರೆ. ಈ ಗೋಪುರಗಳ ಸುತ್ತಮುತ್ತ ಸುಮಾರು 7 ಸಾವಿರ ಜನರು ವಾಸವಾಗಿದ್ದು, ಇದಾಗಲೇ ಅವರನ್ನು ಸ್ಥಳಾಂತರ ಮಾಡಲಾಗಿದೆ. ಸಂಜೆ 5 ಗಂಟೆಗೆ ಎಲ್ಲ ಸೇವೆ ಪುನಾರಂಭಗೊಳ್ಳಲಿವೆ. ನಂತರ ಎಲ್ಲ ನಿವಾಸಿಗಳು ತಮ್ಮ ಮನೆಗಳಿಗೆ ತೆರಳಬಹುದು ಎಂದು ಸೂಚನೆ ನೀಡಲಾಗಿದೆ. ಈ ಪ್ರದೇಶದಲ್ಲಿ ವಿದ್ಯುತ್​, ಅನಿಲ್​ ಸೇರಿದಂತೆ ಎಲ್ಲ ಸೇವೆಗಳು ಬಂದ್​ ಆಗಿವೆ.
ಅವಳಿ ಕಟ್ಟಡ ಬ್ಲಾಸ್ಟ್ ಮಾಡಲಿರುವ ಚೇತನ್​ ದತ್ತಾ: ಎಡಿಫೈಸ್ ಇಂಜಿನಿಯರಿಂಗ್ ಮಾಡಿರುವ ಚೇತನ್​ ದತ್ತಾ ಬ್ಲಾಸ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅವರು ಬಟನ್​ ಒತ್ತುವ ಮೂಲಕ ಬಿಲ್ಡಿಂಗ್​​ ಧ್ವಂಸ ಮಾಡಲಿದ್ದಾರೆ. ಬಿಲ್ಡಿಂಗ್ ನೆಲಸಮಗೊಂಡ ನಂತರ ಈ ಪ್ರದೇಶದಲ್ಲಿ ಪರಿಶೀಲನೆ ಕಾರ್ಯ ಸಹ ನಡೆಯಲಿದೆ.(ಏಜೆನ್ಸೀಸ್​)
ಕಾರವಾರದಲ್ಲೊಂದು ಇಂಟರೆಸ್ಟಿಂಗ್​ ಲವ್​ ಸ್ಟೋರಿ: ಎರಡು ಮಕ್ಕಳ ಅಮ್ಮನಿಗೂ ಬಿಡದ ಸೆಳೆತ- ಪ್ರೇಯಸಿಗಾಗಿ ಗಾರೆ ಮಾಡಿದ ಇಂಜಿನಿಯರ್​!

ಪತ್ನಿ ಕಾಟ ಸಹಿಸದೇ ತಿಂಗಳಿನಿಂದ ಮರದ ಮೇಲೆ ಪತಿರಾಯ: ಅಕ್ಕ-ಪಕ್ಕದ ಮಹಿಳೆಯರಿಗೆ ಶುರುವಾಯ್ತು ಗ್ರಹಚಾರ!

ದೇವರ ಸನ್ನಿಧಿಯಲ್ಲಿಯೇ ಚಿತ್ರಹಿಂಸೆ ಅನುಭವಿಸಿದ ಸುಂದರ್​ ಇನ್ನಿಲ್ಲ: ಈತನ ಕರಾಳ ಬದುಕಿನ ಕಣ್ಣೀರ ಕಥೆಯಿದು…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 4 =
Remember me
