ಉದಯಪುರ (ಆಂಧ್ರಪ್ರದೇಶ):ಪಬ್​ಜಿ ಆಟ ಭಾರತದಲ್ಲಿ ಬ್ಯಾನ್​ ಆಗಿದ್ದರೂ, ಅದನ್ನು ಬ್ಯಾನ್​ ಆಗುವ ಮೊದಲೇ ಡೌನ್​ಲೋಡ್​ ಮಾಡಿಕೊಂಡವರು ಆಡಲು ಅವಕಾಶ ಇರುವುದರಿಂದ ಅನಾಹುತಗಳು ಸಂಭವಿಸುತ್ತಲೇ ಇವೆ. ಇದೇ ಆಟ ಈಗ ಕಾಂಗ್ರೆಸ್​ ಮುಖಂಡನ ಪುತ್ರನೊಬ್ಬನ ಬಲಿ ಪಡೆದಿದೆ.
ಪಬ್​ಜಿ ಆಡುವ ಸಮಯದಲ್ಲಿ ಆತ ಅದರಲ್ಲಿ ಸೋತಿದ್ದ. ಇದಕ್ಕೆ ಆತನ ಸ್ನೇಹಿತರು ಗೇಲಿ ಮಾಡಿದ್ದರು. ಇದರಿಂದ ನೊಂದುಕೊಂಡ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡ, ಉದಯಪುರದ ಜಿಲ್ಲಾ ಪರಿಷತ್​ ಸದಸ್ಯ ಶಾಂತಿರಾಜ್​ ಎನ್ನುವವರ 16 ವರ್ಷ ಮಗ ಇಂಥದ್ದೊಂದು ದುರಂತ ಸಾವು ಕಂಡಿದ್ದಾನೆ.
ಮನೆಯಲ್ಲಿ ಇದ್ದ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಲಕ ಸದಾ ಪಬ್​ಜಿ ಆಟವಾಡುತ್ತಿದ್ದ. ಸ್ನೇಹಿತರ ಜತೆ ಆಡುವಾಗ ಆತ ಸೋತಿದ್ದಾನೆ. ಅದಕ್ಕೆ ಸ್ನೇಹಿತರು ಅಪಹಾಸ್ಯ ಮಾಡಿದ್ದರು ಎನ್ನಲಾಗಿದೆ.
ಕೂಡಲೇ ಕೋಣೆಗೆ ಹೋದ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತನಿಖೆ ನಡೆದಿದೆ.
‘ನಿಮ್ಮ ದೇವರ ನಿಂದಿಸುವವರ ಸಮರ್ಥಿಸಿ, ಸತ್ಯವಂತರಿಗೆ ಬೆದರಿಕೆ ಹಾಕೋದು ಜಾತ್ಯತೀತದ ಅರ್ಥವೆ?’

ಚಾಮರಾಜನಗರದ ದರ್ಗಾದಲ್ಲಿ ನಡೆದ ಕೊಲೆ ಹಿಂದಿರೋದು ಮಹಿಳೆ! ರಹಸ್ಯ ಭೇದಿಸಿದ ಪೊಲೀಸರು

ಬೆಂಗಳೂರಿನ ಹೋಟೆಲ್​ನಲ್ಲಿ ಡ್ರಗ್ಸ್​ ನಶೆಯಲ್ಲಿ ಸಿಕ್ಕಿಬಿದ್ದು ಅರೆಸ್ಟ್​ ಆದ ಖ್ಯಾತ ನಟ ಇವರೇ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
