ನಾಗೌರ್ (ರಾಜಸ್ಥಾನ):ಒಂದೆಡೆ ಹೆಣ್ಣು ಎಲ್ಲಾ ಕ್ಷೇತ್ರಗಳಲ್ಲಿಯೂ ಛಾಪು ಮೂಡಿಸುತ್ತಿರುವಾಗ ಇನ್ನೆಲ್ಲೋ ಗೊಡ್ಡು ಸಂಪ್ರದಾಯವೆಂಬುದು ಇಡೀ ಸ್ತ್ರೀಕುಲಕ್ಕೇ ಸಂಚಕಾರ ತರುವಂತಿದೆ. ಹೆಣ್ಣುಮಗು ಹುಟ್ಟಿದ ತಕ್ಷಣ ಕರುಳಕುಡಿಯನ್ನೇ ಹೊಸಕಿ ಹಾಕುವ ಎಲ್ಲವೇ ಬರೀ ಹೆಣ್ಣು ಹುಟ್ಟಿತು ಎಂದರೆ ಸೊಸೆಯನ್ನೇ ಕೊಂದುಹಾಕುವ ಘಟನೆಗಳು ನಡೆಯುತ್ತಿರುವ ನಡುವೆಯೇ ಇಲ್ಲೊಬ್ಬ ಹೆಣ್ಣುಮಗಳು ತನ್ನ ಜೀವವನ್ನೇ ಬಲಿ ಕೊಟ್ಟಿದ್ದಾಳೆ.
ಸುಮನ್ ಚೌಧರಿ ಎಂಬ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಯುವ ಮುನ್ನ ಬರೆದಿರುವ ಹೇಳಿಕೆಯಲ್ಲಿ ಸಮಾಜದ ಅನಿಷ್ಠ ಪದ್ಧತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ರಾಜಸ್ಥಾನದ ನಾಗೌರ್ ಜಿಲ್ಲೆಯ ನವಾ ಪಟ್ಟಣದ ಸುಮನ್‌ ಈ ದುರದೃಷ್ಟ ಹೆಣ್ಣುಮಗಳು. ಇಲ್ಲೊಂದು ತಲೆತಲಾಂತರಗಳಿಂದ ಬಂದಿರುವ ಸಂಪ್ರದಾಯವಿದೆ. ಅದೇ ಆಟಾ-ಸಾಟಾ. ಎಂದರೆ ಸಾಮಾನ್ಯವಾಗಿ ಇಲ್ಲಿ ಬಳಕೆಯಲ್ಲಿ ಇರುವಂತೆ ಒಂದು ಕೊಟ್ಟು, ಒಂದು ತರುವುದು, ಒಂದು ಮನೆಯ ಮಗಳನ್ನು ಇನ್ನೊಂದು ಮನೆಗೆ ಕೊಟ್ಟರೆ, ಆ ಮನೆಯ ಹೆಣ್ಣುಮಗಳನ್ನು ಈ ಮನೆಯ ಮಗನಿಗೆ ಕೊಡುವ ಸಂಪ್ರದಾಯವಿದು.
ಈ ಸಂಪ್ರದಾಯಕ್ಕೆ ಬಲಿಯಾಗಿದ್ದಾಳೆ ಸುಮನ್‌. ಈಕೆಯ ಸಹೋದರನಿಗೆ ಇನ್ನೊಂದು ಮನೆಯ ಹುಡುಗಿ ಇಷ್ಟವಾಗಿರುವ ಕಾರಣಕ್ಕೆ, ಸುಮನ್‌ಳಿಗೆ ಇಷ್ಟವಿಲ್ಲದಿದ್ದರೂ ಆ ಮನೆಯ ಹುಡುಗನ ಜತೆ ಮದುವೆ ಮಾಡಲಾಗಿತ್ತು. ಮದುವೆಯ ನಂತರ ಪಡಬಾರದ ಪಾಡು ಪಟ್ಟಿದ್ದಾಳೆ ಈ ಯುವತಿ. ಆದರೆ ವಿಚ್ಛೇದನಕ್ಕೂ ಈ ಸಂಪ್ರದಾಯದಲ್ಲಿ ಆಸ್ಪದವಿಲ್ಲ. ಇದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಾಯುವ ಮುನ್ನ ಈಕೆ ಇಷ್ಟವಿಲ್ಲದ ಮದುವೆ, ವಿಚ್ಛೇದನಕ್ಕೂ ಅವಕಾಶವಿಲ್ಲದ ಸಂಸಾರ ಇರುವ ಆಟಾ-ಸಾಟಾ ಸಂಪ್ರದಾಯ ಏಕೆ ಬೇಕು? ಈ ಸಂಪ್ರದಾಯವನ್ನು ನಡೆಸಿಕೊಂಡು ಬಂದಿರುವ ಈ ಸಮಾಜಕ್ಕೆ ಧಿಕ್ಕಾರ. ಪ್ರತಿಯೊಬ್ಬರಿಗೂ ಒಳ್ಳೆಯ ಹೆಣ್ಣು ಬೇಕು, ತಮ್ಮ ಮಗನಿಗೆ ಒಳ್ಳೆಯ ಹೆಣ್ಣನ್ನು ನೋಡುತ್ತಾರೆ, ಆದರೆ ಅದೇ ಆ ಹೆಣ್ಣಿಗೆ ಒಳ್ಳೆಯ ಗಂಡನ್ನು ಆಯ್ಕೆ ಮಾಡುವ ಅವಕಾಶವೇ ಇಲ್ಲ. ನಮಗೂ ಆಸೆ ಇರುವುದಿಲ್ಲವಾ? 17 ವರ್ಷದಾಕೆಯನ್ನೂ 70 ವರ್ಷದ ಮುದುಕನಿಗೆ ಆಟಾ-ಸಾಟಾ ಸಂಪ್ರದಾಯಕ್ಕಾಗಿ ಮದುವೆ ಮಾಡಿಕೊಟ್ಟಿರುವುದನ್ನು ಕಂಡಿದ್ದೇನೆ. ಇಡೀ ಹೆಣ್ಣುಕುಲಕ್ಕೆ ಕಳಂಕವಾಗಿರುವ ಈ ಸಂಪ್ರದಾಯಕ್ಕೆ ಧಿಕ್ಕಾರ, ಇನ್ನು ನಾನು ಬದುಕಿರಲಾರೆ ಎಂದು ಡೆತ್‌ನೋಟ್‌ನಲ್ಲಿ ಸುಮನ್‌ ಬರೆದಿದ್ದಾಳೆ.
ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸುಮನ್‌ ಮಾನಸಿಕವಾಗಿ ಅಸ್ವಸ್ಥಳಾಗಿದ್ದು, ಅದೇ ಕಾರಣಕ್ಕೆ ಬಾವಿಗೆ ಹಾರಿದ್ದಾಳೆ, ಇನ್ನೇನೂ ಇಲ್ಲ ಎಂದು ಆಕೆಯ ಪಾಲಕರು ಪೊಲೀಸರಿಗೆ ತಿಳಿಸಿದ್ದಾರೆ!
ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!

ವರ್ಲ್ಡ್‌ ಕಪ್‌ ಆಟಕ್ಕೂ ಮುನ್ನ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಿ ಎಂದಿದ್ದೆ: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತರಬೇತುದಾರ

ಪತ್ನಿಯ ಜತೆ ಮೂರೇ ತಿಂಗಳು ಇದ್ದು ಪ್ರತ್ಯೇಕ ಆದವನನ್ನು ಮದುವೆಯಾಗಬಹುದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two + nine =
Remember me
