ಕೋಲ್ಕತಾ:ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಸಂಸದೆ, ನಟಿ ನುಸ್ರತ್‌ ಜಹಾನ್‌ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಆರು ತಿಂಗಳ ಮಗುವನ್ನು ಗರ್ಭದಲ್ಲಿ ಹೊತ್ತಿರುವ ನುಸ್ರತ್‌ ಪತಿ ಆ ಮಗು ತನ್ನದಲ್ಲ ಎನ್ನುವ ಮೂಲಕ ಇದೀಗ ಒಂದೊಂದೇ ಬಂಡವಾಳಗಳು ಹೊರಬರುತ್ತಿದ್ದು, ಜಾಲತಾಣದಲ್ಲಿ ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದೆ.
ಮುಸ್ಲಿಂ ಸಮುದಾಯಕ್ಕೆ ಸೇರಿರುವ ನುಸ್ರತ್‌ ಅವರು, 2019ರಲ್ಲಿ ಟರ್ಕಿಯಲ್ಲಿ ಹೋಗಿ ಉದ್ಯಮಿ ನಿಖಿಲ್‌ ಜೈನ್‌ ಅವರನ್ನು ಮದುವೆಯಾಗಿದ್ದರು. ಆದರೆ ಭಾರತಕ್ಕೆ ಬಂದು ಎಷ್ಟೇ ಹೇಳಿದರೂ ಈ ವಿವಾಹವನ್ನು ನೋಂದಣಿ ಮಾಡಲು ಆಕೆ ತಯಾರು ಇರಲಿಲ್ಲ ಎಂಬ ಅಂಶವನ್ನು ಜೈನ್‌ ಇದೀಗ ಹೇಳುತ್ತಿದ್ದಾರೆ. ಈ ನಡುವೆಯೇ ಆರೇಳು ತಿಂಗಳಿನಿಂದ ದೈಹಿಕ ಸಂಪರ್ಕವೇ ಇಲ್ಲ, ಆದರೂ ಆಕೆ ಗರ್ಭ ಧರಿಸಿದ್ದಾಳೆ ಎಂದು ಜೈನ್‌ ಹೇಳಿದ್ದು, ಈ ಮಗು ತಮ್ಮದಲ್ಲ ಎಂದಿದ್ದಾರೆ.ಪಶ್ಚಿಮ ಬಂಗಾಳದ ಟಿಎಂಸಿ ಅಭ್ಯರ್ಥಿಯಾಗಿದ್ದ ಯಶ್‌ ದಾಸ್ ಗುಪ್ತಾ ಜತೆ ಹಲವಾರು ಕಡೆಗಳಲ್ಲಿ ಸುತ್ತಾಡುತ್ತ ಡೇಟಿಂಗ್‌ ಮಾಡುತ್ತಿರುವ ನುಸ್ರತ್‌ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಎಂದಿದ್ದಾರೆ. ಜೈನ್‌ ಜತೆಗಿನ ವಿವಾಹ ಭಾರತದಲ್ಲಿ ಮಾನ್ಯತೆ ಇಲ್ಲ ಎಂದಿದ್ದಾರೆ. ಮಗುವಿನ ಬಗ್ಗೆಯೂ ಮಾತನಾಡುವುದಿಲ್ಲ ಎಂದಿದ್ದಾರೆ.
ಇಷ್ಟೇ ಆಗಿದ್ದರೆ ಈಕೆ ಇಷ್ಟು ಸುದ್ದಿಯಾಗುತ್ತಿರಲಿಲ್ಲ. ಬದಲಿಗೆ ಸಂಸದೆಯಾಗಿ ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ನಿಖಿಲ್‌ ಜೈನ್‌ ತಮ್ಮ ಪತಿ ಎಂದಿದ್ದ ಇವರೀಗ ಅವರು ಕಾನೂನುಬದ್ಧವಾಗಿ ಪತಿಯೇ ಅಲ್ಲ ಎನ್ನುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.  ಈ ಮದುವೆಯ ಆಳಕ್ಕೆ ಹೋಗಿರುವ ಕೆಲವರು, ಮುಸ್ಲಿಂ ಸಮಯದಾಯದ ಮತದ ಜತೆಗೆ ಚುನಾವಣೆಯಲ್ಲಿ ಹಿಂದೂ ಸಮುದಾಯದವರ ಮತವನ್ನು ಪಡೆಯುವುದಕ್ಕಾಗಿ ಜೈನ್‌ ಜೀವನದ ಜತೆ ಚೆಲ್ಲಾಟವಾಡಿದ್ದಾರೆ, ತಮ್ಮ ಹೆಸರಿನ ಮುಂದೆ ಹಿಂದೂ ಹೆಸರನ್ನು ಸೇರಿಸಿಕೊಂಡು ಹಿಂದೂಗಳ ವಿಶ್ವಾಸವನ್ನು ಗಳಿಸುವುದಕ್ಕಾಗಿ ಈ ರೀತಿ ಮಾಡಿದ್ದಾರೆ, ಸಂಸದೆಯಾಗಿ ಆಯ್ಕೆಯಾದ ಮೇಲೆ ಗಂಡನನ್ನು ಹೊರಕ್ಕೆ ಅಟ್ಟಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಹೀಗೆ ಮಾಡುವ ಉದ್ದೇಶವಿಲ್ಲದೇ ಸರಿಯಾಗಿ ದಾಂಪತ್ಯ ನಡೆಸುವುದೇ ಆಗಿದ್ದರೆ ಟರ್ಕಿಯಲ್ಲಿ ಹೋಗಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ಸಂಪ್ರದಾಯಗಳಂತೆ ಮದುವೆಯಾಗಿದ್ದು ಏಕೆ? ಭಾರತಕ್ಕೆ ವಾಪಸಾದ ಮೇಲೆ ಟರ್ಕಿಯ ಮದುವೆಗೆ ಭಾರತದಲ್ಲಿ ಮಾನ್ಯತೆ ಇಲ್ಲ ಎಂದದ್ದೇಕೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಹಚ್ಚಿದ ಮೆಹಂದಿ ಮಾಸಿತು, ಮಾಡಿಕೊಂಡ ಮೇಕಪ್‌ ಕಳಚಿತು, ತಲಾಕ್‌ ನೀಡಲಾಯಿತು ಎಂಬ ಶೀರ್ಷಿಕೆಯಲ್ಲಿ ಜಾಲತಾಣದಲ್ಲಿ ಆರೋಪಗಳ ಸುರಿಮಳೆಯೇ ಹರಿದಾಡುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಚುನಾವಣಾ ನೀತಿ ನಿರೂಪಕರಾಗಿದ್ದ ಪ್ರಶಾಂತ್ ಕಿಶೋರ್ ಅವರ ತಲೆ ಇದರ ಹಿಂದಿದೆ ಎಂಬ ಆರೋಪಗಳೂ ಜಾಲತಾಣದಲ್ಲಿ ಹರಿದಾಡುತ್ತಿದೆ. ಸತ್ಯಾಂಶ ಇನ್ನಷ್ಟೇ ಹೊರಬರಬೇಕಿದೆ.
ಅವಳ ಜತೆ ದೈಹಿಕ ಸಂಪರ್ಕವೇ ಆಗಿಲ್ಲ, ಮಗು ನನ್ನದ್ಹೇಗಾಗುತ್ತೆ ಎಂದ ಸಂಸದೆ ಪತಿ!

121 ವರ್ಷದಲ್ಲಿಯೇ ಎರಡನೆಯ ಬಾರಿ ಅತ್ಯಧಿಕ ಮಳೆ ದಾಖಲು- ಶತಮಾನದ ನಂತರ ಕಡಿಮೆ ತಾಪಮಾನ!

ವಿವಿಧ ಫಲಾನುಭವಿಗಳಿಗೆ ಗುಡ್‌ನ್ಯೂಸ್‌: ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಹಣ ನೇರ ಬ್ಯಾಂಕ್‌ಗೆ, ಇಲ್ಲಿದೆ ನೋಡಿ ಡಿಟೇಲ್ಸ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
