
ಪ್ರಶ್ನೆ: ನಾನು ನಮ್ಮ ಊರಿನವಳೇ ಆದ ನನ್ನ ಬಾಲ್ಯ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದೇನೆ. ನಮ್ಮಿಬ್ಬರ ಜಾತಿ ಬೇರೆ. ನಾವಿಬ್ಬರೂ ಓಡಿ ಹೋಗಿ ಮದುವೆ ಆಗ ಬಹುದು. ಆದರೆ ಇಬ್ಬರ ಕುಟುಂಬಕ್ಕೂ ಊರಲ್ಲಿ ಮರ್ಯಾದೆ ಇದೆ.
ನಮ್ಮ ಮನೆಯವರು ಒಪ್ಪಿದರೂ ಅವರ ಮನೆಯವರು ಮದುವೆಗೆ ಒಪ್ಪುತ್ತಿಲ್ಲ. ನಾವು ಓಡಿ ಹೋಗಿ ಮದುವೆ ಆದರೆ , ಹುಡುಗಿಯ ಮನೆಯವರು ತಮ್ಮ ರಾಜಕೀಯ ಮತ್ತು ಧನಬಲದಿಂದ ಏನಾದರೂ ಮಾಡಬಹುದು ಎಂದು ನಮಗಿಬ್ಬರಿಗೂ ಭಯವಿದೆ.
ಇಬ್ಬರ ಕುಟುಂಬದವರೂ ಒಪ್ಪಿ ಮದುವೆ ಮಾಡಲಿ ಎನ್ನುವುದು ನಮ್ಮ ಇಬ್ಬರ ಇಷ್ಟ. ಒಂದು ವೇಳೆ ಅವಳನ್ನು ಬೇರೆಯವರಿಗೆ ಕೊಟ್ಟು ಬಲವಂತವಾಗಿ ಮದುವೆ ಮಾಡಿಸಲು ಮುಂದಾದರೆ ನಾವು ಕಾನೂನಿನ ಮೂಲಕ ನಮ್ಮಿಬ್ಬರ ಕುಟುಂಬದ ಸಮ್ಮುಖದಲ್ಲೇ ಮದುವೆ ಆಗಲು ಅವಕಾಶ ಇದೆಯೇ? ಇಬ್ಬರ ಕುಟುಂಬದವರು ಒಪ್ಪದಿದ್ದರೂ ನಾವಿಬ್ಬರೂ ಕಾನೂನಿನ ಪ್ರಕಾರ ಮದುವೆ ಆಗಬಹುದೆ?
ಉತ್ತರ:ಹುಡುಗನಿಗೆ ೨೧ ವರ್ಷ ವಯಸ್ಸು ಆಗಿದ್ದು ಹುಡುಗಿಗೆ ೧೮ ವರ್ಷ ವಯಸ್ಸು ಆಗಿದ್ದರೆ, ಇಬ್ಬರೂ ಒಪ್ಪಿದರೆ ಮದುವೆ ಆಗಬಹುದು. ಇದನ್ನು ಯಾರೂ ತಡೆಯುವಂತಿಲ್ಲ. ಇನ್ನು ನಿಮ್ಮ ಇಬ್ಬರ ಕುಟುಂಬದವರೂ ನಿಂತು ಮದುವೆ ಮಾಡಬೇಕೆಂದು ಆದೇಶ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲ. ನೀವಿಬ್ಬರೂ ಒಪ್ಪಿದ್ದರೆ, ರಿಜಿಸ್ಟರ್ಡ ಮದುವೆ ಮಾಡಿಕೊಳ್ಳಿ. ನೀವು ಯಾರಿಗೂ ಹೆದರಬೇಕಾಗಿಲ್ಲ.
ಬಲವಂತವಾಗಿ ಯಾರಿಗೂ ಯಾರ ಜೊತೆಯೂ ಮದುವೆ ಮಾಡುವ ಹಾಗಿಲ್ಲ. ನಿಮಗೆ ಹೆದರಿಕೆ, ಬೆದರಿಕೆ ಇದ್ದರೆ ಪೋಲೀಸರಿಗೆ ಫಿರ್ಯಾದು ಕೊಡಿ. ಅವರು ಸಹಾಯ ಮಾಡುತ್ತಾರೆ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು[email protected]ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
