ನಾನು ನನ್ನ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ನನ್ನ ಪೂರ್ವ ಪತಿ ಅಪೀಲು ಹಾಕುವುದಿಲ್ಲ ಎನ್ನುವ ನಂಬಿಕೆ ನನಗಿದೆ.ಈಗ ನನಗೆ ಮತ್ತೊಬ್ಬರ ಜೊತೆ ಮದುವೆ ಆಗ ಬೇಕಿದೆ. ನಾನು ಎಷ್ಟು ದಿನ ಕಾಯ ಬೇಕು?ಉತ್ತರ:- ಹಿಂದೂ ವಿವಾಹ ಕಾಯ್ದೆಯ ಕಲಂ 15ರಂತೆ , ವಿಚ್ಛೇದನದ ಆದೇಶ ಆದ ನಂತರ , ಆ ಆದೇಶದ ಮೇಲೆ ಮೇಲ್ಮನವಿ (ಅಪೀಲ್​) ಹಾಕಲು ಇರುವ, ಅಪೀಲಿನ ಗಡುವು ತೀರುವವರೆಗೆ ನೀವು ಮರುಮದುವೆ ಆಗುವಂತಿಲ್ಲ.
ಹಾಗೂ ಒಂದು ವೇಳೆ ನಿಮ್ಮ ಪೂರ್ವ ಪತಿ ಅಪೀಲು ದಾಖಲು ಮಾಡಿದರೆ, ಆ ಅಪೀಲು ವಜಾ ಆಗುವವರೆಗೆ ನೀವುಮರುಮದುವೆ ಆಗುವಂತಿಲ್ಲ. ಒಂದುವೇಳೆ ನಿಮ್ಮ ಪತಿ ನಿಗದಿತ ಕಾಲಮಿತಿಯ ಒಳಗೆ ಅಪೀಲೇ ದಾಖಲು ಮಾಡದೇ ಇದ್ದರೆ, ಆಗ ನೀವು ಮರುಮದುವೆ ಆಗಬಹುದು.
ಯಾವುದಕ್ಕೂ ನೀವು ನಿಮ್ಮ ವಿಚ್ಛೇದನದ ಪ್ರಕರಣದ ಸಂಖ್ಯೆಯನ್ನು ಹಾಕಿ, ಆ ಪ್ರಕರಣದ ಆದೇಶದ ಮೇಲೆ ಅಪೀಲು ದಾಖಲಾಗಿದೆಯೇ ಇಲ್ಲವೇ ಎನ್ನುವುದನ್ನು ಕಂಪ್ಯೂಟರಿನ ಸಹಾಯದಿಂದ ಪರೀಕ್ಷಿಸಿ , ಆ ನಂತರ ಮರುಮದುವೆಯ ಬಗ್ಗೆ ತೀರ್ಮಾನ ತೆಗೆದುಕೊಳ್ಳುವುದು ಒಳ್ಳೆಯದು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು[email protected]ಅಥವಾ[email protected]ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು ಕ್ಲಿಕ್ಕಿಸಿ.
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ಮದುವೆ ಸಾಕುಸಾಕಾಗಿದೆ, ಒಬ್ಬರ ಮೇಲೊಬ್ಬರಿಗೆ ಅಸಹ್ಯ ಹುಟ್ಟಿದೆ- ವಿಚ್ಛೇದನಕ್ಕೆ ಕಾಯಲೇಬೇಕಾ?

ಗಂಡ ಸಂಶಯ ಪಿಶಾಚಿ- ಡಿವೋರ್ಸ್​ ಪಡೆದರೆ ನನ್ನ ವಸ್ತುಗಳು ವಾಪಸ್​ ಸಿಗುತ್ತವೆಯೆ?

https://www.vijayavani.net/s-nyayadevate-05-01-2021-samsarakke-oppada/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 12 =
Remember me
