ಪ್ರಶ್ನೆ: ನನ್ನ ಸ್ನೇಹಿತ ಎಂಟು ವರ್ಷಗಳ ಹಿಂದೆ ಅನ್ಯ ಜಾತಿಯ ಹುಡುಗಿಯನ್ನು ರಿಜಿಸ್ಟರ್ ಮದುವೆಯಾಗಿದ್ದಾನೆ. ಸುಮಾರು ವರ್ಷ ಹೊರದೇಶದಲ್ಲಿ ದುಡಿದು ಹಣ ಸಂಪಾದನೆ ಮಾಡಿದ್ದ. ತನ್ನ ತಂದೆ, ತಾಯಿ, ತಂಗಿಯನ್ನೂ ಪ್ರೀತಿಯಿಂದ ನೊಡಿಕೊಳ್ಳುತ್ತಿದ್ದ. ಊರಿನಲ್ಲಿ 15 ಸೆಂಟ್ ಜಾಗವನ್ನು ತನ್ನ ಹೆಸರಿನಲ್ಲಿ ಖರೀದಿ ಮಾಡಿ ಮನೆ ಕಟ್ಟಿಸಿದ್ದ. ಈಗ ಅದರಲ್ಲಿ ಅವನ ತಂದೆ ತಾಯಿ ಇದ್ದಾರೆ.ನನ್ನ ಸ್ನೇಹಿತ ಹೊರದೇಶದಲ್ಲಿ ಇದ್ದಾಗ ಅವನ ಹೆಂಡತಿಗೆ ಅನೈತಿಕ ಸಂಬಂಧ ಇತ್ತು ಎಂದು ತಿಳಿಯಿತು. ಇದರ ವಿಚಾರವಾಗಿ ಇಬ್ಬರಿಗೂ ಜಗಳ ಆಗುತ್ತಿತ್ತು. ಅಲ್ಲದೆ, ಅವಳು ಇದಕ್ಕೂ ಮೊದಲು ಬೇರೆ ಹುಡುಗನನ್ನು ಮದುವೆ ಆಗಿ ಡೈವೋರ್ಸ್ ಪಡೆದ ವಿಚಾರವೂ ಅವನಿಗೆ ತಿಳಿಯಿತು. ಆಸ್ತಿಗಾಗಿ ಮಾತ್ರ ನನ್ನ ಸ್ನೇಹಿತನನ್ನು ಮದುವೆ ಆಗಿದ್ದಳು. ಆದರೆ, ಈಗ ಅವನಿಲ್ಲ. ಕೆಲವರ ಹೇಳಿಕೆಯ ಪ್ರಕಾರ, ಅವಳೇ ತನ್ನ ಲವರ್ ಜತೆ ಸೇರಿ ನನ್ನ ಸ್ನೇಹಿತನನ್ನು ಕೊಲೆ ಮಾಡಿದ್ದಾಳೆ.ಆದರೆ ಅವಳು ನನ್ನ ಸ್ನೇಹಿತನ ಮನೆಯವರಿಗೆ ಅವನು ಕುಡಿದು ಸತ್ತಿದ್ದಾನೆ ಎಂದು ಹೇಳಿದ್ದಾಳೆ. ಪೊಲೀಸರೂ ಬಿ ರಿಪೋರ್ಟ್​ ಹಾಕಿದ್ದಾರೆ. ಈಗ ಅವಳು ನನ್ನ ಗೆಳೆಯನ ಮನೆಗೆ ಬಂದು ಅವನ ಹೆಸರಿನಲ್ಲಿರುವ ಮನೆಯನ್ನು ತನಗೆ ಬಿಟ್ಟುಕೊಡಬೇಕು ಎನ್ನುತ್ತಿದ್ದಾಳೆ. ನನ್ನ ಗೆಳೆಯನ ಜತೆ ಅವಳ ರಿಜಿಸ್ಟರ್ ಮದುವೆ ಸಿಂಧು ಆಗುತ್ತದೆಯೇ?ಅವಳಿಗೂ ಆಸ್ತಿಯಲ್ಲಿ ಭಾಗ ಇದೆಯೇ?
ಉತ್ತರ: ನಿಮ್ಮ ಗೆಳೆಯನ ವಿವಾಹ ಸಿಂದೂವಾದ ವಿವಾಹವೇ ಆಗಿರುತ್ತದೆ. ನಿಮ್ಮ ಗೆಳೆಯನ ಹೆಂಡತಿ ತನ್ನ ಮೊದಲಿನ ಪತಿಯಿಂದ ಡೈವೋರ್ಸ್ ಪಡೆದ ನಂತರ ನಿಮ್ಮ ಗೆಳೆಯನನ್ನು ವಿವಾಹ ಆಗಿರುವುದರಿಂದ ಆ ವಿವಾಹ ಕಾನೂನಿನಲ್ಲಿ ಮಾನ್ಯತೆ ಪಡೆಯುತ್ತದೆ.
ನಿಮ್ಮ ಗೆಳೆಯನ ಹೆಸರಿನಲ್ಲಿರುವ ಎಲ್ಲಾ ಆಸ್ತಿಯಲ್ಲಿ ನಿಮ್ಮ ಗೆಳೆಯನ ಹೆಂಡತಿಗೆ ಮತ್ತು ಆತನ ತಾಯಿಗೆ ಸಮಪಾಲು ಇರುತ್ತದೆ. ನಿಮ್ಮ ಗೆಳೆಯನಿಗೆ ಮಕ್ಕಳು ಇದ್ದರೆ ಅವರಿಗೂ ಸಮಪಾಲು ಸಿಗುತ್ತದೆ. ಕೊಲೆಯ ಆರೋಪ ಒಬ್ಬ ವ್ಯಕ್ತಿಯ ಮೇಲೆ ಅಂತಿಮವಾಗಿ ನ್ಯಾಯಾಲಯದ ತೀರ್ಪಿನ ಮೂಲಕ ಸಾಬೀತಾದಾಗ ಮಾತ್ರ ಅಂತಹ ವ್ಯಕ್ತಿಗೆ ಕೊಲೆಯಾದ ವ್ಯಕ್ತಿಯ ಆಸ್ತಿಯಲ್ಲಿ ಪಾಲಿ ಸಿಗುವುದಿಲ್ಲ.
ನಿಮ್ಮ ಗೆಳೆಯನ ವಿಷಯದಲ್ಲಿ ಆತನ ಹೆಂಡತಿಯ ಮೇಲೆ ದೋಷಾರೋಪಣೆ ಸಹ ಆಗಿಲ್ಲ. ಹೀಗಾಗಿ, ಆಕೆಯ ಮೃತ ಗಂಡನ ಆಸ್ತಿಯಲ್ಲಿ ಆಕೆಯ ಹಕ್ಕನ್ನು ಯಾರೂ ಚ್ಯುತಿ ಮಾಡುವಂತಿಲ್ಲ.
ಸಾಧ್ಯವಾದರೆ ನಿಮ್ಮ ಗೆಳೆಯನ ತಂದೆ ತಾಯಿ ಇರುವ ತಾಲೂಕಿನ ಮಧ್ಯಸ್ಥಿಕೆ ಕೇಂದ್ರದಲ್ಲಿ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ಅರ್ಜಿ ಕೊಡಲು ತಿಳಿಸಿ. ಅವರು ನಿಮ್ಮ ಗೆಳೆಯನ ಹೆಂಡತಿಯನ್ನು ಕರೆಯಿಸಿ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಸಹಾಯ ಮಾಡಬಹುದು. ಇದಕ್ಕೆ ಹಣ ಖರ್ಚು ಆಗುವುದಿಲ್ಲ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿhttps://www.vijayavani.net/ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.
https://www.vijayavani.net/s-nyayadevate-14-12-2020/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 19 =
Remember me
