ಪ್ರಶ್ನೆ: ನನ್ನ ನಾನು ನನ್ನ ಸ್ವಯಾರ್ಜಿತ ಆಸ್ತಿಯನ್ನು ನನ್ನ ಹೆಂಡತಿ ಮತ್ತು ಮಕ್ಕಳಿಗೆ ಎಂಟು ವರ್ಷಗಳ ಹಿಂದೆ ನನ್ನ ಇಷ್ಟದಂತೆ ಹಂಚಿ ರಿಜಿಸ್ಟರ್ಡ್ ವಿಲ್ ಮಾಡಿದ್ದೆ. ನನ್ನ ಹೆಂಡತಿ ಕಳೆದ ವರ್ಷ ತೀರಿಕೊಂಡಿದ್ದಾಳೆ. ಈ ಮಧ್ಯೆ ನಾನು ಒಂದು ಆಸ್ತಿಯನ್ನು ಮಾರಿ ಇಬ್ಬರು ಮಕ್ಕಳಿಗೆ ಮಾತ್ರ ಹಣ ಕೊಟ್ಟೆ. ಈಗ ನಾನು ವಿಲ್ ಬದಲಾವಣೆ ಮಾಡಬೇಕಿದೆ. ಕೋಡಿಸಲ್ ಮಾಡಲೇ ಅಥವಾ ಬೇರೆ ವಿಲ್ ಮಾಡಲೇ ತಿಳಿಸಿ. ಹಳೆಯ ವಿಲ್‍ನಂತೆಯೇ ಆಗಬೇಕೆಂದು ನನ್ನ ಬೇರೆ ಮಕ್ಕಳು ಮುಂದೆ ಗಲಾಟೆ ಮಾಡಿದರೆ ಎನ್ನುವ ಚಿಂತೆ ಆಗುತ್ತಿದೆ.
ಉತ್ತರ:ಈ ಹಿಂದೆ ಮಾಡಿದ್ದ ವಿಲ್ಲನ್ನು ರದ್ದು ಮಾಡಿ ಹೊಸದಾಗಿ ವಿಲ್ ಮಾಡಿಸಿ ನೋಂದಾಯಿಸುವುದು ಒಳ್ಳೆಯದು. ಹೊಸದಾಗಿ ವಿಲ್ ಮಾಡುವಾಗ ಬದಲಾದ ಸಂದರ್ಭಗಳನ್ನು ವಿವರವಾಗಿ ತಿಳಿಸಿ. ಹಳೆಯ ವಿಲ್ಲನ್ನು ರದ್ದು ಮಾಡಿರುವುದಾಗಿ ಖಚಿತವಾಗಿ ತಿಳಿಸಿ.
ಯಾವುದೇ ವ್ಯಕ್ತಿ ಹಿಂದೆ ಮಾಡಿದ್ದ ವಿಲ್ನಲ್ಲಿ ಹಲವಾರು ಮಾರ್ಪಾಟುಗಳನ್ನು ತರುವ ಸಂದರ್ಭದಲ್ಲಿ ಕೋಡಿಸಿಲ್ ಮಾಡುವುದಕ್ಕಿಂತ ಹೊಸ ವಿಲ್ ಬರೆಸುವುದೇ ಉತ್ತಮ. ಏನೇ ಅಗಲಿ ನಿಮ್ಮ ಅಂತಿಮವಾದ ವಿಲ್ ಮಾತ್ರ ಊರ್ಜಿತವಾಗುತ್ತದೆ.
ನೀವು ಹಳೆಯ ವಿಲ್ ಬಗ್ಗೆ ಚಿಂತಿಸಬೇಕಾಗಿಲ್ಲ.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು[email protected]ಅಥವಾ[email protected]ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ https://www.vijayavani.net/ ಗೆ ಭೇಟಿ ಕೊಟ್ಟು ಅಂಕಣ ವಿಭಾಗದಲ್ಲಿ ನ್ಯಾಯದೇವತೆ ಸೆಕ್ಷನ್​ ಮೇಲೆ ಕ್ಲಿಕ್​ ಮಾಡಿ.
ಮಕ್ಕಳು ನೋಡಿಕೊಳ್ಳದಿದ್ರೆ ಪಿತ್ರಾರ್ಜಿತ ಆಸ್ತಿ ಮಾರಬಹುದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 − 5 =
Remember me
