ಪ್ರಶ್ನೆ: ನಾನು ಮೇ 2019ರಲ್ಲಿ ಮದುವೆ ಆದೆ. ಆರು ತಿಂಗಳು ಮಾತ್ರ ನನ್ನ ಹೆಂಡತಿ ನನ್ನ ಜೊತೆ ಇದ್ದಳು. ಆಮೇಲೆ ತವರಿಗೆ ಹೋದವಳು ಬರಲೇ ಇಲ್ಲ. ಕೇಳಿದರೆ ‘ನನಗೆ ನೀನು ಇಷ್ಟ ಇಲ್ಲ . ಒತ್ತಾಯ ಮಾಡಿ ಕರೆದುಕೊಂಡು ಹೋದರೆ ಸಾಯುತ್ತೇನೆ’ ಅಂತ ಹೆದರಿಸುತ್ತಾಳೆ.ಅವಳಿಗೆ ಬೇರೆಯವರ ಜೊತೆ ಅನೈತಿಕ ಸಂಬಂಧ ಇದೆ. ಅವರ ತಂದೆ ತಾಯಿಯೂ ನನ್ನ ಸಮಸ್ಯೆ ತಿಳಿಯುತ್ತಿಲ್ಲ. ಹೋಗಲಿ ವಿಚ್ಛೇದನ ಕೊಡು ಅಂದರೆ ಅದಕ್ಕೂ ಒಪ್ಪುತ್ತಿಲ್ಲ. ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರುಕೊಟ್ಟರೆ ಅಲ್ಲಿಗೂ ಬರಲಿಲ್ಲ. ಈಗ ಸುಮ್ಮ ಸುಮ್ಮನೆ ವರದಕ್ಷಿಣೆ ಬೇಡಿಕೆ ಮಾಡಿದೆ ಎಂದು ಹೇಳಿ ಲಾಯರ್ ನೋಟೀಸು ಕೊಟ್ಟಿದ್ದಾಳೆ. ನಾನು ಏನು ಮಾಡಬೇಕು ತಿಳಿಸಿ
ಉತ್ತರ:* ಮೊದಲಿಗೆ ಲಾಯರ್ ನೋಟಿಸಿಗೆ ಸರಿಯಾದ ಪ್ರತ್ಯುತ್ತರ ಕಳಿಸಿ.
* ನಂತರ ನಿಮ್ಮ ತಾಲ್ಲೂಕಿನ ಮಧ್ಯಸ್ಥಿಕೆ ಕೇಂದ್ರಕ್ಕೆ ಹೋಗಿ, ನಿಮ್ಮ ಸಮಸ್ಯೆಯನ್ನು ಸಂಕ್ಷಿಪ್ತವಾಗಿ ಬರೆದು , ನಿಮ್ಮಿಬ್ಬರ ಮಧ್ಯೆ ವ್ಯಾಜ್ಯ ಪೂರ್ವ ಮಧ್ಯಸ್ಥಿಕೆಗೆ ವ್ಯವಸ್ಥೆ ಮಾಡಲು ಕೇಳಿಕೊಳ್ಳಿ. ಕೇಂದ್ರದವರು ಇಬ್ಬರನ್ನೂ ಕರೆಯಿಸಿ , ಮಧ್ಯಸ್ಥಿಕೆಗಾರರ ಮೂಲಕ ಮಾತಾಡಲು ಅವಕಾಶ ಮಾಡಿಕೊಡುತ್ತಾರೆ. ಆಗ ರಾಜೀ ಸೂತ್ರಕ್ಕೆ ಬರಬಹುದು.
* ಒಂದು ವೇಳೆ ನಿಮ್ಮ ಪತ್ನಿ ಯಾವುದಕ್ಕೂ ಒಪ್ಪದಿದ್ದರೆ, ನಿಮಗೆ ಹಂಡತಿ ಬೇಕು ಎನ್ನುವುದಾದರೆ ಆಗ ನೀವು ಅವಳ ವಿರುದ್ಧ “ ದಾಂಪತ್ಯ ಜೀವನದ ಹಕ್ಕುಗಳ ಪುನರ್ ಸ್ಥಾಪನೆಗೆ” ಪ್ರಕರಣ ದಾಖಲಿಸಿ. ಅಥವಾ, ನಿಮಗೆ ಆಕೆಯಿಂದ ವಿಚ್ಛೇದನ ಬೇಕಿದ್ದರೆ, ವಿಚ್ಛೇದನಕ್ಕೆ ಪ್ರಕರಣ ದಾಖಲಿಸಿ.
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿ:
https://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ಗಂಡ ಗಿಫ್ಟ್‌ ಕೊಡಿಸ್ತಾರೆ, ಸುತ್ತಾಡಿಸ್ತಾರೆ… ಆದ್ರೆ ಅಸಲಿ ಮುಖ ಭಯಾನಕ- ಅವರಿಂದ ಹೇಗೆ ಮುಕ್ತಿ ಪಡೆಯಲಿ?

ಸ್ವಯಾರ್ಜಿತ ಆಸ್ತಿಯನ್ನು ಹೆಣ್ಣುಮಕ್ಕಳಿಗೆ ಕೊಡಲು ತಂದೆಗೆ ಇಷ್ಟವಿಲ್ಲ, ಇದಕ್ಕೆ ಅವಕಾಶವಿದೆಯಾ?

ನನ್ ತಂಗಿಯ ಮೇಲೆ ಗಂಡನ ಕಣ್ಣುಬಿದ್ದಿದೆ, ಬೇರೆ ಮದ್ವೆಯಾಗಲೂ ಬಿಡುತ್ತಿಲ್ಲ- ಕಾನೂನಡಿ ಪರಿಹಾರವೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 5 =
Remember me
