ಪ್ರಶ್ನೆ: ನಾನೊಬ್ಬ ನಿವೃತ್ತ ರೈಲ್ವೇ ನೌಕರ. ನನಗೆ ತೊಂಬತ್ತು ವರ್ಷ ವಯಸ್ಸಾಗಿದೆ. ನನಗೆ ಐದು ಹೆಣ್ಣು ಮಕ್ಕಳು ಮತ್ತು ಎರಡು ಗಂಡು ಮಕ್ಕಳು ಇದ್ದಾರೆ. ಎಲ್ಲರಿಗೂ ಮದುವೆ ಆಗಿದೆ. ಒಬ್ಬ ಮಗಳು ವಿಧವೆ . ಅವಳು ತನ್ನ ಇಬ್ಬರು ಮಕ್ಕಳೊಂದಿಗೆ ನನ್ನ ಜೊತೆಯೇ ಇದ್ದಾಳೆ. ನನ್ನ ಎರಡನೆಯ ಮಗ ತನ್ನ ಹೆಂಡತಿಯಿಂದ ವಿಚ್ಛೇದನ ಪಡೆದು ನಮ್ಮ ಜೊತೆ ಇದ್ದಾನೆ.
ನನಗೆ ಒಂದು 50-60 ಲಕ್ಷ ಬೆಲೆ ಬಾಳುವ ಮನೆ ಮತ್ತು ಸೈಟು ಇದೆ. ಇದು ನಮ್ಮ ತಂದೆ ತಾತ ಇವರುಗಳಿಂದ ಬಂದ ಸ್ವತ್ತು. ಅದನ್ನು ನವೀಕರಿಸಲು 8-9 ಲಕ್ಷ ನನ್ನ ಸ್ವಂತ ಹಣ ಖರ್ಚು ಮಾಡಿದ್ದೇನೆ. ಈಗ ಈ ಸ್ವತ್ತನ್ನು ಅರ್ಧ ನನ್ನ ಕಿರಿಯ ಮಗನಿಗೂ ಅರ್ಧ ನನ್ನ ವಿಧವೆ ಮಗಳಿಗೂ ವಿಲ್ ಮಾಡಬೇಕೆಂದಿದ್ದೇನೆ. ಹೀಗೆ ಮಾಡುವುದರಿಂದ ಮುಂದೆ ಅವರಿಗೆ ಕಾನೂನಿನ ತೊಡಕು ಬರುತ್ತದೆಯೇ ತಿಳಿಸಿ.ಉತ್ತರ:ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಮತ್ತು ಪ್ರತ್ಯೇಕ ಆಸ್ತಿಯನ್ನು ಯಾರಿಗೆ ಬೇಕಾದರೂ ವಿಲ್ ಮಾಡಬಹುದು. ವಿಲ್ ಮಾಡುವ ವ್ಯಕ್ತಿಗೆ 3-4 ಮಕ್ಕಳು ಇದ್ದು, ಕೆಲವರಿಗೆ ಮಾತ್ರ ವಿಲ್ ಮಾಡುವ ಸಂದರ್ಭದಲ್ಲಿ, ಯಾವ ಕಾರಣದಿಂದ ಕೆಲವರಿಗೆ ಮಾತ್ರ ವಿಲ್ ಮಾಡುತ್ತಿದ್ದೇವೆ ಏಕೆ ಬೇರೆ ಮಕ್ಕಳಿಗೆ ವಿಲ್ ಮಾಡಿಲ್ಲ ಎನ್ನುವುದನ್ನು ಬರೆಯಿಸಿದರೆ ಒಳ್ಳೆಯದು. ನಿಮ್ಮ ಪಿತ್ರಾರ್ಜಿತ ಆಸ್ತಿ ಇದ್ದರೆ , ಅದರಲ್ಲಿ ನಿಮ್ಮ ಭಾಗವನ್ನು ಮಾತ್ರ ನೀವು ವಿಲ್ ಮಾಡಬಹುದು.
ನೀವು ಆಸ್ತಿಗೆ ಸಂಬಂಧಿಸಿದ ಪತ್ರಗಳನ್ನು ತೆಗೆದುಕೊಂಡು ವಕೀಲರನ್ನು ಭೇಟಿ ಮಾಡಿ ಅವರಿಂದ ಸಲಹೆ ಪಡೆಯುವುದು ಒಳ್ಳೆಯದು. ನೀವು ತಿಳಿಸಿರುವ ಆಸ್ತಿ ನಿಮ್ಮ ಪ್ರತ್ಯೇಕ ಆಸ್ತಿ /ಸಪರೇಟ್ ಪ್ರಾಪರ್ಟಿ ಆದರೆ ನೀವು ವಿಲ್ ಮಾಡಬಹುದು. ನಿಮ್ಮ ಪಿತ್ರಾರ್ಜಿತ ಆಸ್ತಿ ಆದರೆ ನಿಮ್ಮ ಭಾಗವನ್ನು ಮಾತ್ರ ವಿಲ್ ಮಾಡಬಹುದು.
ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು[email protected]ಅಥವಾ[email protected]ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)
ಕಾನೂನಿಗೆ ಸಂಬಂಧಿಸಿದ ಇತರ ಪ್ರಶ್ನೋತ್ತರಗಳಿಗಾಗಿ ಈ ಲಿಂಕ್​ ಕ್ಲಿಕ್ಕಿಸಿhttps://www.vijayavani.net/category/%e0%b2%a8%e0%b3%8d%e0%b2%af%e0%b2%be%e0%b2%af%e0%b2%a6%e0%b3%87%e0%b2%b5%e0%b2%a4%e0%b3%86/
ಅಪ್ಪನ ಆಸ್ತಿಯಲ್ಲಿ ತನ್ನಿಚ್ಛೆಯಂತೆ ಭಾಗ ಮಾಡುವ ಅಧಿಕಾರ ಅಮ್ಮನಿಗೆ ಇದೆಯೆ?

ಅನಾರೋಗ್ಯದಿಂದ ಬಳಲುತ್ತಿರುವವರು ವಿಲ್‌ ಬರೆದರೆ ಅದು ಮಾನ್ಯವಾಗುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + five =
Remember me
