ನನ್ನ ಮದುವೆಯಾಗಿಏಳು ವರ್ಷಗಳಾಗಿದೆ. ನನ್ನ ಗಂಡ ಎಂ.ಬಿ.ಎ ಓದಿದ್ದಾರೆ. ಆದರೆ ಸೋಮಾರಿ. ಏನೂ ಕೆಲಸಮಾಡುವುದಿಲ್ಲ. ಇದುವರೆಗೆ ಆರು ವ್ಯಾಪಾರ ಶುರು ಮಾಡಿ ಲಾಸ್‌ ಮಾಡಿದ್ದಾರೆ. ಎಲ್ಲಕ್ಕೂ ನಮ್ಮ ತಂದೆಯೇ ಹಣ ಕೊಟ್ಟಿದ್ದಾರೆ. ಸದಾ ಕಾಲ ಮಸ್ತು ಮಜಾ ಮಾಡುತ್ತಾರೆ ಅಥವಾ ಮಲಗೇ ಇರುತ್ತಾರೆ . ಅವರಿಗೆ ಐಷಾರಾಮ್ಯದ ಜೀವನ ಬೇಕು . ನಾನು ದುಡಿದು ತಂದು ಮನೆ ನಡೆಸುತ್ತಿದ್ದೇನೆ. ನನ್ನನ್ನು ಯಾವಾಗಲೂ ಹೀಯಾಳಿಸುತ್ತಾರೆ. ಕೆಟ್ಟ ಕೆಟ್ಟ ಪದಗಳಿಂದ ಬಯ್ಯುತ್ತಾರೆ.
ಮನೆ ಖರ್ಚಿಗೆ ಒಂದು ರೂಪಾಯಿಯೂ ಕೊಡುವುದಿಲ್ಲ. ನನ್ನ ಕಾರನ್ನೂ ತಾನೇ ಉಪಯೋಗಿಸುತ್ತಾರೆ. ನನ್ನ ಗಂಡನ ಕ್ರೂರತೆ ಸಹಿಸದೆ ನಾನು ನನ್ನ ತೌರಿಗೆ ಬಂದು ಆರು ತಿಂಗಳಾಗಿದೆ. ಈಗ ದಿನಾಗಲೂ “ನೀನು ಬರದೇ ಹೋದರೆ ನಾನು ಆತ್ಮ ಹತ್ಯೆ ಮಾಡಿಕೊಳ್ಳುತ್ತೇನೆ . ನಿನಗೆ ಜೈಲು ಆಗುತ್ತದೆ” ಎಂದು ಹೆದರಿಸುತ್ತಿದ್ದಾರೆ.. ನನ್ನ ವಸ್ತುಗಳನ್ನೂ, ಕಾರನ್ನೂ ವಾಪಸ್‌ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಸಾಲಗಾರರನ್ನು ನನ್ನ ಹತ್ತಿರ ಕಳಿಸುತ್ತಿದ್ದಾರೆ ನಾನು ಈಗ ಏನು ಮಾಡಬೇಕು.
ಉತ್ತರ: ನೀವು ಹೆದರ ಬೇಕಾಗಿಲ್ಲ . ತಕ್ಷಣ ಪೋಲೀಸು ಕಂಪ್ಲೇಂಟು ಕೊಡಿ. ನಿಮ್ಮ ವಸ್ತುಗಳನ್ನೂ ಕಾರನ್ನೂ ವಾಪಸ್‌ ಕೊಡಿಸುವಂತೆ ಕೇಳಿಕೊಳ್ಳಿ. ಕಾರನ್ನಂತೂ ತಕ್ಷಣ ಕೊಡಿಸುತ್ತಾರೆ. ಹಾಗೆಯೇ ನೀವು ಕೌಟುಂಬಿಕ ಹಿಂಸೆಯಿಂದ ರಕ್ಷಣೆ ಪಡೆಯಲು ಪ್ರಕರಣ ದಾಖಲಿಸಿ. ಬೇಕಿದ್ದರೆ ವಿಚ್ಛೇದನಕ್ಕೂ ಪ್ರಕರಣ ದಾಖಲಿಸಿ. ನಿಮ್ಮ ಪತಿಯ ಆತ್ಮ ಹತ್ಯೆಯ ಬೆದರಿಕೆಯ ಮೆಸೇಜುಗಳನ್ನು ಪೋಲೀಸರಿಗೆ ಕೊಡಿ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ.
ಕರೊನಾ ಎರಡನೆಯ ಅಲೆಗೆ ಕಾಲೇಜು ಬಂದ್​ ಆಗಲಿದೆಯೆ? ಇಲ್ಲಿದೆ ನೋಡಿ ಡಿಸಿಎಂ ಸ್ಪಷ್ಟ ಉತ್ತರ…

ಮಿಸ್ಡ್ ಕಾಲ್​ನಿಂದ ಶುರುವಾದ ಪರಿಚಯ ಈಗ ಏನೇನೋ ಆಗಿದೆ… ಇದು ನಿಜವಾದ ಪ್ರೀತಿಯೆ? ಹೇಗೆ ತಿಳಿಯಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 − 2 =
Remember me
