ಬ್ರಹ್ಮನಗರ (ಒಡಿಶಾ):ನಿವೃತ್ತ ಪೊಲೀಸ್ ಅಧಿಕಾರಿ ಮಗಳೊಬ್ಬಳು ತನ್ನ ಭಾವಿ ಪತಿ, ಮದುವೆಗೆ ಗೈರು ಆದ್ದರಿಂದ ಅವರ ಮನೆಯ ಎದುರೇ ಧರಣಿಗೆ ಕುಳಿತಿರುವ ಘಟನೆ ಒಡಿಶಾದ ಬ್ರಹ್ಮನಗರದಲ್ಲಿ ನಡೆದಿದೆ.
ಡಾಕ್ಟರ್‌ ಆಗಿರುವ ಯುವಕ ಹಾಗೂ ಈ ಯುವತಿ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಆರಂಭದಲ್ಲಿ ಇಬ್ಬರ ಕುಟುಂಬದವರೂ ಇದನ್ನು ವಿರೋಧಿಸಿದ್ದರು. ಆದರೆ ಎರಡೂ ಕುಟುಂಬದವರು ಮಾತುಕತೆ ನಡೆಸಿ ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಎರಡೂ ಮನೆಯವರು ಕುಳಿತು ಮದುವೆಗೆ ಮುಹೂರ್ತ ಕೂಡ ಫಿಕ್ಸ್‌ ಮಾಡಿದ್ದರು.
ಮದುವೆಯ ಖುಷಿಯಲ್ಲಿದ್ದ ವಧು ಮಂಟಪಕ್ಕೆ ಹೋಗಿದ್ದಾಳೆ. ಆಕೆ ಹಾಗೂ ಆಕೆಯ ಕುಟುಂಬದವರು ಎಷ್ಟು ಕಾದರೂ ವರನಾಗಲೀ, ಆತನ ಕುಟುಂಬದವರಾಗಲೀ ಪತ್ತೆಯೇ ಇಲ್ಲ. ವಧು ನೇರವಾಗಿ ವರನ ಮನೆಗೆ ಹೋಗಿ ವಿಚಾರಿಸಿದರೆ ಅವರು ಧಪ್‌ ಎಂದು ಬಾಗಿಲು ಹಾಕಿದ್ದಾರೆ.
ಈ ಹಿನ್ನೆಲೆಯಲ್ಲಿ, ವಧು ಸಾಮಾಜಿಕ ಕಾರ್ಯಕರ್ತೆ ಪ್ರಮೀಳಾ ತ್ರಿಪಾಠಿ ಅವರನ್ನು ಸಂಪರ್ಕಿಸಿ ವರದ ಮನೆ ಮುಂದೆ ಧರಣಿ ಕುಳಿತಿದ್ದಾಳೆ. ಇಂದು ಈ ಧರಣಿ ನಡೆಯುತ್ತಿರುವುದು ಎರಡನೆಯ ದಿನ. ಪ್ರಕರಣ ಪೊಲೀಸ್‌ ಠಾಣೆಗೆ ಹೋಗಿ ನಂತರ ಕೋರ್ಟ್‌ನಲ್ಲಿಯೂ ಕೇಸ್‌ ದಾಖಲಾಗಿದೆ. ಆದ್ದರಿಂದ ಸದ್ಯ ನಾವೇನೂ ಮಾಡಲು ಆಗುವುದಿಲ್ಲ ಎಂದಿರುವ ಇನ್ಸ್‌ಪೆಕ್ಟರ್‌ ರಾಮ್ ಕುಮಾರ್ ಈ ಕುರಿತು ಮಾತನಾಡಿದ್ದು, ಸದ್ಯ ಕೋರ್ಟ್‌ ಏನು ಹೇಳುತ್ತದೋ ಅದನ್ನು ಮಾಡುತ್ತೇವೆ. ಧರಣಿ ಸ್ಥಳದಲ್ಲಿ ಶಾಂತಿಯನ್ನು ಕಾಪಾಡಲು ಮ್ಯಾಜಿಸ್ಟ್ರೇಟ್ ನಿರ್ದೇಶನದಂತೆ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದಿದ್ದಾರೆ.
‘ಘಟನೆ ನೆನೆದರೆ ಮೈನಡಗುತ್ತಿದೆ… ರೇಪ್‌ಗೆ ಒಳಗಾದವಳು ನಾನೇ ಕೊನೆಯವಳಾಗಲಿ… ಬದುಕುವ ಆಸೆ ಇತ್ತು… ಆದರೆ…’

ತಂದೆಯ ಶವದೊಂದಿಗೆ ಮೂರು ತಿಂಗಳು ಕಳೆದ ಮಗ: ಮನೆಯಲ್ಲಿದ್ದ ಪತ್ನಿಗೂ ತಿಳಿಯಲಿಲ್ಲ ಸಾವಿನ ವಿಷಯ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eight + 18 =
Remember me
