ಭುವನೇಶ್ವರ:ಕೆಲವರ ಬಳಿ ಇರುವ ಹೈಫೈ ಮೊಬೈಲ್‌ ಫೋನ್‌ ನೋಡಿ ತಾನೂ ಅವರಂತೆಯೇ ಮೊಬೈಲ್‌ ಖರೀದಿ ಮಾಡಬೇಕೆಂದು ಅಂದುಕೊಂಡು 17 ವರ್ಷದ ಅಪ್ರಾಪ್ತನೊಬ್ಬ, ದುಡ್ಡಿಲ್ಲದಾಗ ಮಾಡಿದ್ದು ಮದುವೆಯಾಗುವ ಪ್ಲ್ಯಾನ್‌! 26 ವರ್ಷದ ಯುವತಿಯನ್ನು ಗಾಳಕ್ಕೆ ಬೀಳಿಸಿಕೊಂಡ ಈತ ಆಕೆಯನ್ನು ಮದುವೆಯಾಗಿದ್ದಾನೆ, ಮದುವೆಯಾದ ಒಂದೇ ತಿಂಗಳಿಗೆ 55 ವರ್ಷದ ವ್ಯಕ್ತಿಯೊಬ್ಬನಿಗೆ ಪತ್ನಿಯನ್ನು ಮಾರಾಟ ಮಾಡಿ ತನ್ನ ಮೊಬೈಲ್‌ ಆಸೆಯನ್ನು ಈಡೇರಿಸಿಕೊಂಡಿದ್ದಾನೆ!
ಇಂಥದ್ದೊಂದು ಭಯಾನಕ ಘಟನೆ ನಡೆದಿರುವುದು ಒಡಿಶಾದಲ್ಲಿ. ಈ ಬಾಲಕ ಮೊದಲು ಮದುವೆಯಾಗಿ ನಂತರ ರಾಜಸ್ಥಾನಕ್ಕೆ ಕೆಲಸ ಹುಡುಕಿಕೊಂಡು ಬಂದಿದ್ದರು. ಒಂದು ಇಟ್ಟಿಗೆ ಫ್ಯಾಕ್ಟರಿಯಲ್ಲಿ ಬಾಲಕನಿಗೆ ಕೆಲಸ ಸಿಕ್ಕಿತ್ತು. ಆದರೆ ಅಸಲಿಗೆ ಆತ ಬಂದಿರುವ ಉದ್ದೇಶ ಬೇರೆಯದ್ದೇ ಆಗಿತ್ತು. ಅಲ್ಲಿ ಯಾರಾದರೂ ಸೂಕ್ತ ವ್ಯಕ್ತಿ ಸಿಕ್ಕರೆ ಪತ್ನಿಯನ್ನು ಮಾರಾಟ ಮಾಡುವ ಯೋಚನೆ ಅವನದ್ದಾಗಿತ್ತು.
ಕೆಲಸ ಸಿಕ್ಕ ನಂತರ ಪ್ರತಿದಿನ ಕುಡಿದು ಬಂದು ಹೆಂಡತಿಗೆ ಕಿರುಕುಳ ನೀಡತೊಡಗಿದ. ನಂತರ ಆಕೆಯನ್ನು ಮಾರಾಟ ಮಾಡಲು ಯೋಚಿಸುತ್ತಿರುವಾಗಲೇ ಬರನ್ ಜಿಲ್ಲೆಯ 55 ವರ್ಷದ ವ್ಯಕ್ತಿ ಸಿಕ್ಕಿದ್ದಾನೆ. ಆತನಿಗೆ ಪತ್ನಿಯನ್ನು ಮಾರಾಟ ಮಾಡಿದ್ದಾನೆ ಈ ಭೂಪ. ಕೊನೆಗೆ ಮೊಬೈಲ್ ಖರೀದಿಸಿದ್ದಾನೆ. ಮಿಕ್ಕ ಹಣದಲ್ಲಿ ಪಾರ್ಟಿ ಮಾಡಿದ್ದಾನೆ.
ಪತ್ನಿ ಮಾರಾಟ ಮಾಡಿರುವ ಹಣ ಖಾಲಿಯಾದ ಬಳಿಕ ಮರಳಿ ಊರಿಗೆ ವಾಪಸ್ ಬಂದಿದ್ದ. ಆದರೆ ಯುವತಿ ಕಾಣದಾಗ ಎಲ್ಲರೂ ಭಯಪಟ್ಟಿದ್ದಾರೆ. ಆಕೆಯ ಪಾಲಕರು ತಮ್ಮ ಮಗಳು ಎಲ್ಲಿ ಎಂದು ಕೇಳಿದಾಗ, ಯಾವನದ್ದೊ ಜತೆ ಆಕೆ ಓಡಿಹೋದಳು, ನನಗೆ ಮೋಸ ಮಾಡಿದಳು ಎಂದಿದ್ದಾನೆ. ಆದರೆ ಏನೋ ಎಡವಟ್ಟಾಗಿದೆ ಎಂದು ಅರಿತ ಯುವತಿಯ ಪಾಲಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಂತರ ಈತನನ್ನು ಬಂಧಿಸಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾನೆ.
ಯುವತಿಯ ಪತ್ತೆ ಹಚ್ಚಿ ವಾಪಸ್‌ ಕರೆತರಲು ಹೋದಾಗ ಖರೀದಿ ಮಾಡಿದ ವ್ಯಕ್ತಿ ಹಣ ಕೊಟ್ಟರೆ ಮಾತ್ರ ಯುವತಿಯನ್ನು ಕೊಡುವುದಾಗಿ ಹೇಳಿದ್ದಾನೆ. ಕೊನೆಗೆ ಆತ ಕೊಟ್ಟ ಹಣವನ್ನು ವಾಪಸ್‌ ಕೊಟ್ಟು ಆಕೆಯನ್ನು ಪಾವಸ್‌ ಕರೆತರಲಾಗಿದೆ.
ಮೂರೂವರೆ ಕೋಟಿ ರೂ. ತೆರಿಗೆ ಪಾವತಿಗೆ ಜಟಕಾವಾಲನಿಗೆ ನೋಟಿಸ್‌! ಈತನ ಹೆಸರಲ್ಲಿ 43 ಕೋಟಿ ವಹಿವಾಟು!

10 ಗರ್ಲ್‌ಫ್ರೆಂಡ್‌ಗಳ ತೃಪ್ತಿಪಡಿಸಲು ಹೋಗಿ ಸಿಕ್ಕಿಬಿದ್ದ ಖದೀಮ: ಈತನ ಕಥೆ ಕೇಳಿ ಪೊಲೀಸರೇ ಸುಸ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + eight =
Remember me
