ಒಕ್ಲಹೋಮ (ಅಮೆರಿಕ):ಈ ಜಗತ್ತಿನಲ್ಲಿ ಅದೆಂಥ ವಿಚಿತ್ರ ಜನರು ಬದುಕಿದ್ದಾರೆ ಎಂದು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಜೀವ ಇರುವ ಎಲ್ಲಾ ಕ್ರಿಮಿ-ಕೀಟ, ಪಶು-ಪಕ್ಷಿಗಳನ್ನು ತಿನ್ನುವ ಚೀನಿಯರಿಂದ ಹಿಡಿದು ಮನುಷ್ಯರನ್ನೇ ಹಸಿಹಸಿಯಾಗಿ ತಿನ್ನುವವರೂ ಇಲ್ಲಿದ್ದಾರೆ.
ಅದೇ ರೀತಿ ಈ ಚಿತ್ರದಲ್ಲಿ ಕಾಣುತ್ತಿರುವವರು ಘನಘೋರ ಮನುಷ್ಯರು. ಇವರು ಮನುಷ್ಯರ ವೃಷಣವನ್ನು ಕತ್ತರಿಸಿ ಅದನ್ನು ತಿನ್ನುವವರು!
ನಂಬಲು ತುಂಬಾ ಕಷ್ಟ ಎನಿಸುವ ಹಾಗೂ ಕೇಳಿದರೆನೇ ಕರ್ಣಕಠೋರ ಎನಿಸುವ ಈ ಸತ್ಯ ನಡೆಯುತ್ತಿರುವುದು ಅಮೆರಿಕದ ಒಕ್ಲಹೋಮ ನಗರದಲ್ಲಿ.
ಇಲ್ಲಿಯ ಸುಮಾರು 28 ವರ್ಷದ ಯುವಕನೊಬ್ಬ ವಿಪರೀತ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗುಪ್ತಾಂಗದಲ್ಲಿ ರಕ್ತ ಸುರಿಯುತ್ತಿತ್ತು. ವೈದ್ಯರು ಈ ಬಗ್ಗೆ ವಿಚಾರಿಸಿದಾಗ ಆತ ಹೇಳಿದ್ದು ಕೇಳಿ, ಆ ವೈದ್ಯರೇ ಬೆಚ್ಚಿ ಬಿದ್ದಿದ್ದಾರೆ. ಆಗಲೇ ಈ ಇಬ್ಬರು ಪಾತಕಿಗಳ ಕೃತ್ಯ ಬೆಳಕಿಗೆ ಬಂದದ್ದು.
ಇದನ್ನೂ ಓದಿ:ಬೀ ಕೇರ್​ಫುಲ್​: ಮಾಸ್ಕ್​ ಮೇಲೀಗ ಹದ್ದಿನ ಕಣ್ಣು- ಮಾರ್ಷಲ್​ಗಳಿಗೆ ನೀಡಲಾಗಿದೆ ಟಾರ್ಗೆಟ್​!
53 ವರ್ಷದ ಬಾಬ್ ಲೆ ಅಲೇನ್ ಮತ್ತು 42 ವರ್ಷದ ಥಾಮಸ್ ಗೆಟ್ಸ್ ಎಂಬುವವರು ತಮ್ಮನ್ನು ತಾವು ಲಿಂಗ ಬದಲಾವಣೆ ಮಾಡುವ ವೈದ್ಯರು ಎಂದು ಬಿಂಬಿಸಿಕೊಂಡಿದ್ದಾರೆ. ವೆಬ್​ಸೈಟ್​ಗಳಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಅವರು, ತಮಗೆ ಲಿಂಗ ಪರಿವರ್ತನೆಯಲ್ಲಿ 15 ವರ್ಷಗಳ ಅನುಭವವಿದೆ ಎಂದು ಬರೆದುಕೊಂಡಿದ್ದಾರೆ.
ಹಿಜಡಾಗಳಾಗಲು ಬಯಸುತ್ತಿದ್ದ ಅನೇಕ ಮಂದಿ, ಇವರ ಬಳಿ ಶಸ್ತ್ರಚಿಕಿತ್ಸೆಗೆ ಬರುತ್ತಿದ್ದಾರೆ. ಅದರಂತೆ ಈ 28ರ ಯುವಕ ಲಿಂಗ ಬದಲಾವಣೆ ಮಾಡಿಸಿಕೊಳ್ಳಲು ಇವರ ಬಳಿ ಬಂದಿದ್ದಾನೆ. ಶಸ್ತ್ರಚಿಕಿತ್ಸೆಗೆಂದು ಆತನನ್ನು ಮಲಗಿಸಿ, ನೋವು ನಿಯಂತ್ರಕ ಇಂಜೆಕ್ಷನ್​ ನೀಡಲಾಗಿದೆ.
ನಂತರ ಶಸ್ತ್ರಚಿಕಿತ್ಸೆಯ ಹೆಸರಿನಲ್ಲಿ ಆತನ ವೃಷಣವನ್ನೇ ಕಟ್​ ಮಾಡಲಾಗಿದೆ. ಎಚ್ಚರಿಕೆಗೊಂಡ ಯುವಕನಿಗೆ ಸಹಿಸಲಾರದಷ್ಟು ನೋವಾಗಿದೆ. ಚಿಕಿತ್ಸೆ ಮುಗಿದಿರುವುದಾಗಿ ಹೇಳಿ ಆತನನ್ನು ಮನೆಗೆ ಕಳುಹಿಸಲಾಗಿದೆ.
ನಂತರ ಅವನು ಸಂದೇಹಗೊಂಡು ಬೇರೆಯ ವೈದ್ಯರ ಬಳಿ ಬಂದಿದ್ದಾನೆ. ನಂತರ ಇವರ ಬಗ್ಗೆ ಪೊಲೀಸರಲ್ಲಿ ದೂರು ದಾಖಲು ಮಾಡಲಾಗಿದೆ.
ಪೊಲೀಸರು ಬಲೆ ಬೀಸಿ ಈ ಇಬ್ಬರು ಇರುವ ಜಾಗಕ್ಕೆ ಹೋಗಿ ನೋಡಿದಾಗ, ಬ್ಲೇಡ್​ನಿಂದ ಕತ್ತರಿಸಿಟ್ಟ ವೃಷಣಗಳು ಫ್ರೀಜರ್​ನಲ್ಲಿ ಸಿಕ್ಕಿವೆ. ತನಿಖೆ ಕೈಗೊಂಡಾಗ ಪೊಲೀಸರಿಗೆ ತಿಳಿದದ್ದು, ಇವರಿಗೆ ಯುವಕರ ಗುಪ್ತಾಂಗಗಳನ್ನು ಬೇಯಿಸದೆ ತಿನ್ನುವುದು ಎಂದರೆ ಬಲು ಇಷ್ಟ ಎಂದಿದ್ದಾನೆ! ಇದಾಗಲೇ ಹಲವಾರು ಯುವಕರ ಗುಪ್ತಾಂಗಗಳನ್ನು ತಿಂದು ತೇಗಿರುವುದು ಕೂಡ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಸದ್ಯ ಇಬ್ಬರನ್ನೂ ಪೊಲೀಸರು ಬಂಧಿಸಿ ಕೇಸ್​ ದಾಖಲು ಮಾಡಿಕೊಂಡಿದ್ದಾರೆ. ಈವರೆಗೆ ಶಸ್ತ್ರಚಿಕತ್ಸೆ ಮಾಡಿಕೊಂಡಿರುವವರ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
ಫ್ಲ್ಯಾಟ್ ಲಭ್ಯವಿದೆ… ಮುಸ್ಲಿಮರು, ಪ್ರಾಣಿಗಳಿಗೆ ಪ್ರವೇಶವಿಲ್ಲ…

ಮದರಸಾದ ಮೇಲೆ ಬಾಂಬ್​ ದಾಳಿ: ಏಳು ಮಕ್ಕಳು ಬಲಿ- ಉಳಿದವರ ಸ್ಥಿತಿ ಚಿಂತಾಜನಕ

ಬಿಜೆಪಿ ನಾಯಕಿ ಖುಷ್ಬೂ ಅರೆಸ್ಟ್​… ನಾನು ಹೆದರಲ್ಲ, ಮಹಿಳೆಯರಿಗಾಗಿ ಕೊನೆವರೆಗೂ ಹೋರಾಟ ಎಂದ ನಟಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five − 4 =
Remember me
