ಕೋಲ್ಕತಾ:ಕೋಲ್ಕತಾದಲ್ಲಿ ಚುನಾವಣೆ ಅಬ್ಬರ ಜೋರಾಗಿದೆ. ಇದಾಗಲೇ 4 ಹಂತಗಳ ಚುನಾವಣೆ ಮುಗಿದಿದ್ದು ಐದನೇ ಹಂತದ ಚುನಾವಣೆಗೆ ಭರ್ಜರಿ ಮತಬೇಟೆ ಮುಂದುವರೆದಿದೆ. ಜತೆಗೆ ಆರೋಪ, ಪ್ರತ್ಯಾರೋಪಗಳೂ ಮಾಮೂಲಾಗಿವೆ.
ಇದರ ಜತೆಗೆ ಒಂದು ಪಕ್ಷದ ಮೇಲೆ ಇನ್ನೊಂದು ಪಕ್ಷ ಗೂಬೆ ಕೂರಿಸುವುದು, ಪೋಸ್ಟ್​ ಮಾಡುವುದು ಇವೆಲ್ಲವೂ ಮಾಮೂಲಿನಂತೆ ನಡೆದೇ ಇವೆ. ಇದರ ನಡುವೆ ಕೆಲ ದಿನಗಳಿಂದ ಬಿಜೆಪಿ ನಾಯಕನ ಮನೆಯಲ್ಲಿ ರಾಶಿ ರಾಶಿ ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ.
ಯಾವ ನಾಯಕ ಎನ್ನುವ ಹೆಸರು ಇಲ್ಲದ ಈ ಪೋಸ್ಟ್​ನಲ್ಲಿ ರಾಶಿ ರಾಶಿ ಹಣದ ಫೋಟೋ ಇದೆ. ಈ ಕಂತುಗಟ್ಟಲೆ ಹಣವನ್ನು ಚುನಾವಣೆಯಲ್ಲಿ ಹಂಚುವ ಸಲುವಾಗಿ ಬಿಜೆಪಿ ಈ ನಾಯಕನ ಮನೆಯಲ್ಲಿ ಹಣವನ್ನು ಇಟ್ಟಿರುವುದಾಗಿ ಸುದ್ದಿ ಹರಡಿದ್ದು, ಇದು ಉಳಿದ ಪಕ್ಷಗಳಿಗೆ ಆಹಾರವಾಗಿದೆ. ಜತೆಗೆ ಭಾರಿ ಚರ್ಚೆಗೂ ಗ್ರಾಸವಾಗಿದೆ.
ಇಷ್ಟೇ ಅಲ್ಲದೇ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರೇ ಸುದ್ದಿಗೋಷ್ಠಿಯಲ್ಲಿ ಹೇಳುತ್ತಿರುವ ಫೋಟೋ ಕೂಡ ಇದೆ.ಆದರೆ ಫ್ಯಾಕ್ಟ್​ ಫೈಂಡಿಂಗ್​ ಸಮಿತಿಯು ಇದರ ಅಸಲಿಯತ್ತನ್ನು ಬಹಿರಂಗಪಡಿಸಿದೆ. ನಿಜವಾದ ಸುದ್ದಿ ಏನೆಂದರೆ ಈ ಫೋಟೋ ತೆಗೆದಿರುವುದು 2019ರ ನವೆಂಬರ್​ 2ರಲ್ಲಿ. ತೆಲಂಗಾಣ ಪೊಲೀಸರು ಖಮ್ಮಮ್‍ನಲ್ಲಿ ನಕಲಿ ನೋಟು ಜಾಲವನ್ನು ಭೇದಿಸಿ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಇದು ಅದರ ಫೋಟೋವಾಗಿದೆ.
ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್​ ಅವರ ಪುತ್ರಿಯ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿ ಆರು ಕೋಟಿಗೂ ಮಿಕ್ಕಿದ ಹಣವನ್ನು ವಶಪಡಿಸಿಕೊಂಡಿತ್ತು ಎಂದು ಹೇಳಿದಾಗಲೂ ಇದೇ ನೋಟುಗಳು ಜಾಲತಾಣದಲ್ಲಿ ಶೇರ್​ ಆಗಿದ್ದವು. .
ಯಾವುದೇ ಫೋಟೋಗಳ ಅಸಲಿಯತ್ತನ್ನು ಖಚಿತಪಡಿಸಿಕೊಳ್ಳಲು ಬಳಸುವ ಗೂಗಲ್ ರೆವರ್ಸ್ ಸರ್ಚ್ ಇಂಜಿನ್ ಬಳಸಿ ಇದರ ಅಸಲಿಯತ್ತನ್ನು ಬಹಿರಂಗಪಡಿಸಲಾಗಿದೆ.
ಮದ್ವೆ ಮಾಡಿದ್ರೆ ಮಕ್ಳು ಸರಿಯಾಗಲ್ಲ ತಾಯಿ…ಆಗಿದ್ದಾಯ್ತು… ಮೊದ್ಲು ಸೊಸೆಯನ್ನು ಗಟ್ಟಿಗೊಳಿಸಿ…

ಎರಡು ಷರ್ಟ್​ ಕದ್ದಿದ್ದಕ್ಕೆ 20 ವರ್ಷ ಜೈಲುವಾಸ! ಬಿಡುಗಡೆಯಾಗುವಷ್ಟರಲ್ಲೇ ಮೃತ್ಯುಕೂಪವಾಗಿದ್ದ ಮನೆ…

ಮದುವೆ ಡ್ರೆಸ್​ ಬದಲು ಮೈತುಂಬಾ ಬ್ಯಾಂಡೇಜ್​ ಹಾಕ್ಕೊಂಡು ಬಂದ ಮದುಮಗ- ವಧು ನೀಡಿದಳು ಸಮಜಾಯಿಷಿ

ವಿವಿಧ ಪದವೀಧರರಿಗೆ ಎಣ್ಣೆಬೀಜ ಬೆಳೆಗಾರರ ಸಹಕಾರಿ ಸಂಘಕ್ಕೆ ಆಹ್ವಾನ: ₹70 ಸಾವಿರದವರೆಗೂ ವೇತನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 11 =
Remember me
