ಕೋಲ್ಕತಾ:ಹಾಕಿ ದಂತಕಥೆ ಎಂದೇ ಹೆಸರುವಾಸಿಯಾಗಿದ್ದ, ಒಲಿಂಪಿಕ್‌ನಲ್ಲಿ ಎರಡು ಚಿನ್ನದ ಪದಕವನ್ನು ಭಾರತಕ್ಕೆ ತಂದುಕೊಟ್ಟಿದ ಕೀತಿರ್ ಕೇಶವ್ ದತ್ ಇಂದು ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ಕೋಲ್ಕತಾದ ಸಂತೋಷ್‌ಪುರದಲ್ಲಿರುವ ನಿವಾಸದಲ್ಲಿ ದತ್ ಮಧ್ಯರಾತ್ರಿ 12.30 ರ ಸುಮಾರಿಗೆ ಮೃತಪಟ್ಟಿದ್ದಾರೆ. ವಯೋಸಹಜ ಕಾಯಿಲೆಗಳಿಂದ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆಭಾರತವು ಸ್ವಾತಂತ್ರ್ಯದ ನಂತರ ಒಲಿಂಪಿಕ್‌ನಲ್ಲಿ ಮೊದಲ ಚಿನ್ನದ ಪದಕ ತಂದುಕೊಟ್ಟ ಕೀರ್ತಿ ಅವರಿಗೆ ಸಲ್ಲುತ್ತದೆ. 1948 ರ ಲಂಡನ್ ಕ್ರೀಡಾಕೂಟದಲ್ಲಿ ಇವರ ತಂಡಕ್ಕೆ ಚಿನ್ನ ಲಭಿಸಿತ್ತು. ನಂತರ 1952ರಲ್ಲಿ ಪುನಃ ಚಿನ್ನದ ಪದಕ ಇವರ ತಂಡದ್ದಾಗಿತ್ತು.
ಕೇಶವ್‌ ದತ್‌ ಅವರು 1951-1953ರವರೆಗೆ ಹಾಗೂ 1957-1958ರಲ್ಲಿ ‘ಮೋಹನ್ ಬಗಾನ್ ಹಾಕಿ ತಂಡ’ದ ನಾಯಕರಾಗಿದ್ದರು. ಈ 10 ವರ್ಷಗಳ ಅವಧಿಯಲ್ಲಿ ಆರು ಬಾರಿ ಹಾಕಿ ಲೀಗ್ ಮತ್ತು ಮೂರು ಬಾರಿ ಬೀಟನ್ ಕಪ್ ಗೆದ್ದಿದ್ದರು. 2019ರಲ್ಲಿ ಮೋಹನ್ ಬಗಾನ್ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು, ಈ ಗೌರವವನ್ನು ಪಡೆದ ಮೊದಲ ಫುಟ್ಬಾಲ್ ಹೊರತಾದ ಆಟಗಾರ ಎಂಬ ಹೆಗ್ಗಳಿಕೆ ಕೂಡ ಇವರದ್ದು.ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ಗಣ್ಯರು ದತ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ವಿದ್ಯಾ ಬಾಲನ್‌ಗೆ ಭಾರತೀಯ ಸೇನೆ ಅತ್ಯುನ್ನತ ಗೌರವ: ಫೈರಿಂಗ್‌ ರೇಂಜ್‌ಗೆ ನಟಿಯ ಹೆಸರು

ಕೇಂದ್ರದಲ್ಲಿ ಶೋಭಾಗೆ ಸಚಿವ ಸ್ಥಾನದ ನಿರೀಕ್ಷೆ- ಹುದ್ದೆ ಕಳೆದುಕೊಳ್ತಾರಾ ಸದಾನಂದಗೌಡ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
