ಮುಂಬೈ:ಕರೊನಾದ ಈ ಸಮಯದಲ್ಲಿ ಎಷ್ಟೋ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಶಿಕ್ಷಕರ ಸಂಖ್ಯೆಯೂ ಹೆಚ್ಚಿದೆ. ಅಂಥದ್ದೇ ಒಂದು ಸಂಕಷ್ಟಕ್ಕೆ ಸಿಲುಕಿದ್ದ ಶಿಕ್ಷಕಿಯೊಬ್ಬರು ಇದೀಗ ಕೋಟಿ ರೂಪಾಯಿ ಒಡತಿ. ಅದಕ್ಕೆ ಕಾರಣ, ಪರಮವೀರ ಚಕ್ರ!
ನಟ ಅಮಿತಾಭ್​ ಬಚ್ಚನ್​ ನಡೆಸಿಕೊಡುವ ಕೌನ್​ ಬನೇಗಾ ಕರೋರ್​ಪತಿಯ ಸೀಜನ್​ 12ರಲ್ಲಿ ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ ಛತ್ತೀಸ್‍ಗಡದ ಶಿಕ್ಷಕಿ ಅನುಪಾ ದಾಸ್ . ಈ 12ನೆಯ ಆವೃತ್ತಿಯಲ್ಲಿ ಕೋಟಿ ರೂಪಾಯಿ ಗೆದ್ದಿರುವ ಮೂರನೆಯ ಸ್ಪರ್ಧಿ ಇವರು. ಇದಾಗಲೇ ಇಬ್ಬರು ಕೋಟಿ ರೂಪಾಯಿ ಗೆದ್ದಿದ್ದು ಅವರು ಕೂಡ ಮಹಿಳೆಯರೇ ಎನ್ನುವುದು ವಿಶೇಷ.
ದೆಹಲಿಯ ನಾಜಿಯಾ ನಜೀಮ್ ಹಾಗೂ ಐಪಿಎಸ್ ಅಧಿಕಾರಿ ಮೋಹಿತಾ ಶರ್ಮಾ ಈ ಹಿಂದೆ ಕೋಟಿ ರೂಪಾಯಿ ಗೆದ್ದಿದ್ದರು. ‘
ಇದನ್ನೂ ಓದಿ:ಕಾಶ್ಮೀರ ತೆರೆದ ಜೈಲಾಗಿದೆ- ಮಾಜಿ ಸಿಎಂ ಮೆಹಬೂಬಾ ಗುಡುಗು
ಆಟದಲ್ಲಿ ಇರುವ ಮೂರು ಲೈಫ್​ಲೈನ್​ಗಳ ಪೈಕಿ ಒಂದು ಕೋಟಿಯ ಪ್ರಶ್ನೆಯವರೆಗೂ ಒಂದು ಲೈಫ್​ಲೈನ್​ ಉಳಿಸಿಕೊಂಡಿದ್ದರು ಶಿಕ್ಷಕಿ. ನಂತರ, ಕೊನೆಯ ಪ್ರಶ್ನೆ ಅಂದರೆ ಒಂದು ಕೋಟಿ ರೂಪಾಯಿ ಪ್ರಶ್ನೆಗೆ ಇವರಿಗೆ ಕೇಳಿದ್ದ ಪ್ರಶ್ನೆ, ನವೆಂಬರ್ 18, 1962ರಂದು ಯಾರಿಗೆ ಪರಮವೀರ ಚಕ್ರ ನೀಡಿ ಗೌರವಿಸಲಾಯಿತು? ಎಂದು. ಇದೇ ಪ್ರಶ್ನೆ ಇವರನ್ನು ಕೋಟ್ಯಧಿಪತಿ ಮಾಡಿದೆ. ಮೇಜರ್ ಶೈತಾನ್ ಸಿಂಗ್ ಎಂದು ಸರಿಯುತ್ತರ ನೀಡುವ ಮೂಲಕ ಕೋಟಿ ರೂಪಾಯಿ ಗೆದ್ದರು. ಇದಕ್ಕೆ ತಮ್ಮ ಬಳಿ ಇದ್ದ ಕೊನೆಯ ಲೈಫ್​ಲೈನ್​ ಬಳಸಿಕೊಂಡರು.
ಮುಂದಿನದ್ದು 7 ಕೋಟಿ ರೂಪಾಯಿ ಪ್ರಶ್ನೆಯಾಗಿತ್ತು. ಆದರೆ ಅಷ್ಟರಲ್ಲಿಯೇ ಅನುಪಾ ಅವರು ಕ್ವಿಟ್​ ಆದರು. ಆ ಪ್ರಶ್ನೆ ರಜಿಯಾಪೂನಾವಲ ಹಾಗೂ ಶೌಕತ್ ದುಕನ್ವಾಲಾ ಅವರು ಕ್ರಿಕೆಟ್ ಲೋಕದಲ್ಲಿ ಯಾವ ತಂಡವನ್ನು ಪ್ರತಿನಿಧಿಸುತ್ತಾರೆ ಎಂಬುದಾಗಿತ್ತು. ಆದರೆ ಅದಾಗಲೇ ಅವರು ಕ್ವಿಟ್​ ಆಗಿದ್ದ ಹಿನ್ನೆಲೆಯಲ್ಲಿ ಅಮಿತಾಭ್​ ಅವರೇ ಉತ್ತರಿಸಿ ಯುಎಇ ಎಂದರು.(ಏಜೆನ್ಸೀಸ್​)
ಅರಿವಿಗೆ ಬಾರದೇ ಮೋಸದಿಂದ ದಾನಪತ್ರ ಮಾಡಿಸಿಬಿಟ್ಟರೆ ಕಾನೂನಿನಡಿ ಪರಿಹಾರವೇನು?

ಮಹಾರಾಷ್ಟ್ರ ಸರ್ಕಾರಕ್ಕೆ ಮುಖಭಂಗ- ಹೈಕೋರ್ಟ್​ನಿಂದ ಕಂಗನಾಗೆ ಸಿಕ್ಕಿತು ರಿಲೀಫ್​

ದೀದಿಗೆ ಶಾಕ್​ ಮೇಲೆ ಶಾಕ್​: ಸಾರಿಗೆ ಸಚಿವ ಸ್ಥಾನಕ್ಕೆ ಸುವೇಂದು ರಾಜೀನಾಮೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
