ಚೆನ್ನೈ:1995ರ ನೈಜ ಘಟನೆ ಆದರಿಸಿದ ಕಥೆಯಿದು. ಇಲಿ, ಹಾವು ಹಿಡಿದು, ಇಟ್ಟಂಗಿ ಬಡೆದು ಬದುಕುವ ಇರುಳರು ಎಂಬ ಮುಗ್ದ ಬುಡಕಟ್ಟು ಜನಾಂಗ ಪೋಲಿಸರ ಕಪಿಮುಷ್ಟಿಗೆ ಸಿಲುಕಿ ನರಳಿದ ಇತಿಹಾಸ ಇರುವ ತಮಿಳಿನ ’ಜೈ ಭೀಮ್‌’ ಚಿತ್ರ ಇದಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದು ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾದಂದಿನಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿ ಮಾಡುತ್ತಲೇ ಇದೆ.
ಜ್ಞಾನವೇಲ್ ನಿರ್ದೇಶನದ, ಸೂರ್ಯ ಅವರು ನಿರ್ಮಾಣ ಮಾಡಿ ನಟಿಸಿರುವ ಈ ಚಿತ್ರದ ವಿರುದ್ಧ ಇದೀಗ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಅದೇನೆಂದರೆ ಚಿತ್ರದ ಖಳನಾಯಕನ ಪಾತ್ರಕ್ಕೆ ಪಿಎಂಕೆ (Pattali Makkal Katchi) ನಾಯಕರಾಗಿದ್ದ ಕಾಡುವೆಟ್ಟಿ ಗುರು ಹೆಸರು ಇಟ್ಟಿರುವುದು.
ಈ ಸಂಬಂಧ ಪಿಎಂಕೆ ಜಿಲ್ಲಾ ಕಾರ್ಯದರ್ಶಿ ಸೀತಮಲ್ಲಿ ಪಝನಿ ಸಾಮಿ ಅವರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ನಟ ಸೂರ್ಯ ಮೇಲೆ ಹಲ್ಲೆ ಮಾಡಿದವರಿಗೆ 1 ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಗುವುದು ಎಂದು ಘೋಷಿಸಿದ್ದಾರೆ. ಜತೆಗೆ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರ ಮೇಲೆ ಕ್ರಮ ಕೈಗೊಳ್ಳುವಂತೆ ಮೈಲಾಡುತುರೈ ಪೊಲೀಸ್ ವರಿಷ್ಠಾಧಿಕಾರಿ ಸುಗುಣಾ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಆರೋಪವೇನು?ನಿಧನರಾಗಿರುವ ತಮ್ಮ ಪಕ್ಷದ ವರಿಷ್ಠ ಕಾಡುವೆಟ್ಟಿ ಗುರು ಅವರ ಹೆಸರನ್ನು ಉದ್ದೇಶಪೂರ್ವಕವಾಗಿ ಇಡಲಾಗಿದೆ. ಈ ಮೂಲಕ ವನ್ನಿಯರ್ ಜಾತಿಯನ್ನು ನಕಾರಾತ್ಮಕವಾಗಿ ಬಿಂಬಿಸಲು ಪ್ರಯತ್ನಿಸಲಾಗಿದೆ. ಈ ಹೆಸರಿನಿಂದ ವನ್ನಿಯರ್ ಮತ್ತು ಇತರ ಜಾತಿಗಳ ಜನರ ನಡುವಿನ ಸಾಮರಸ್ಯ ಹಾಳಾಗುವಂತೆ ಮಾಡಲಾಗಿದೆ. ಜಾತಿ ಗಲಭೆ ಹೆಚ್ಚಿಸುವ ಸಲುವಾಗಿ ಸೂರ್ಯ ಈ ರೀತಿ ಮಾಡಿದ್ದಾರೆ ಎನ್ನುವುದು ಅವರ ಆರೋಪ.
ಇದೀಗ ಸೂರ್ಯ ಅವರು ನಟಿಸಿರುವ ’ವೆಲ್‌’ ಚಿತ್ರವನ್ನೂ ಬ್ಯಾನ್‌ ಮಾಡಲಾಗಿದ್ದು, ಪಿಎಂಕೆ ಪಕ್ಷದ ಸದಸ್ಯರು ಚಿತ್ರಮಂದಿರಕ್ಕೆ ಮುತ್ತಿಗೆ ಹಾಕಿ ಪ್ರದರ್ಶನಗಳನ್ನು ನಿಲ್ಲಿಸಿದ್ದಾರೆ. ಈ ಜಿಲ್ಲೆಯಲ್ಲಿ ಸೂರ್ಯನ ಯಾವುದೇ ಚಿತ್ರ ಪ್ರದರ್ಶನಗೊಳ್ಳುವುದಿಲ್ಲ ಎಂದಿದ್ದಾರೆ.
‘ಈಜೋದನ್ನು, ಮೀನು ಹಿಡಿಯೋದನ್ನು ಚಡ್ಡಿದೋಸ್ತ್‌ಗೆ ಕಲಿಸಿದ್ದೆ… 30ಕ್ಕೆ ಬರ್ತೇನೆ, ನಾಟಿಕೋಳಿ ಸಾಂಬಾರ್‌ ಮಾಡು ಎಂದಿದ್ರು… ’

ಪತಿ ಕ್ಯಾಚ್‌ ಬಿಟ್ಟಿದ್ದಕ್ಕೆ ಕೊಲ್ಲುವ ಬೆದರಿಕೆ, ಪ್ಲೀಸ್‌ ರಕ್ಷಣೆ ಕೊಡಿ ಎಂದು ಮೋದಿಗೆ ಪತ್ರ ಬರೆದ ಪಾಕ್‌ ಕ್ರಿಕೆಟಿಗನ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + ten =
Remember me
