ನ್ಯೂಯಾರ್ಕ್‌:ಅಮೆರಿಕ ಮೂಲಕ ಅತ್ಯಂತ ದೊಡ್ಡ ಆನ್​ಲೈನ್​ ಶಾಪಿಂಗ್ ಸಂಸ್ಥೆ ಅಮೇಜಾನ್​ 2017 ಮತ್ತು 2019ರಲ್ಲಿ ಭಾರತವನ್ನು ಅವಮಾನ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿತ್ತು. 2017ರಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರವಿರುವ ಬಾಗಿಲಿಗೆ ಹಾಕುವ ಮ್ಯಾಟ್​ಗಳು ವೆಬ್​ಸೈಟ್​​ನಲ್ಲಿ ಮಾರಾಟಕ್ಕೆ ಇದ್ದವು. ನಂತರ 2019ರಲ್ಲಿ ಹಿಂದೂ ದೇವತೆಗಳು, ದೇವರ ಚಿತ್ರ ಮುದ್ರಿಸಲಾದ ಟಾಯ್ಲೆಟ್​ ಸೀಟ್​ ಕವರ್​ಗಳು, ಬಾಗಿಲು ಮ್ಯಾಟ್​​ಗಳನ್ನು ಮಾರಾಟಕ್ಕಿಟ್ಟಿತ್ತು. ಆಗ ದೊಡ್ಡಮಟ್ಟದಲ್ಲಿ ವಿರೋಧ ಶುರುವಾದ ಕಾರಣ, ಅಮೆಜಾನ್‌ ಕ್ಷಮೆ ಕೋರಿತ್ತು.
ಆದರೆ ಈ ಚಾಳಿಯನ್ನು ಅದು ಬಿಟ್ಟಿಲ್ಲ. ಈಗ ಗಣರಾಜ್ಯೋತ್ಸವ ಬರುತ್ತಿರುವ ಬೆನ್ನಲ್ಲೇ ಮತ್ತೆ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ರಾಷ್ಟ್ರಧ್ವಜದ ಮುದ್ರೆ, ಚಿತ್ರವುಳ್ಳ ವಸ್ತುಗಳನ್ನು ಅಮೆಜಾನ್‌ ಮಾರಾಟದಲ್ಲಿ ಇಟ್ಟಿದೆ. ಧ್ವಜದ ಚಿತ್ರ ಮುದ್ರಿಸಲಾದ ಟಿ-ಶರ್ಟ್​ಗಳು, ಮಾಸ್ಕ್​ಗಳು, ಕೀ ಚೈನ್​​ಗಳು, ಚಾಕಲೇಟ್ ಕವರ್​​ಗಳು ​, ಸೆರಾಮಿಕ್ ಮಗ್​​ಗಳು, ಮಕ್ಕಳ ಬಟ್ಟೆಗಳನ್ನು ಮಾರಾಟಕ್ಕೆ ಇಡಲಾಗಿದೆ.
ಇದರಿಂದ ಗರಂ ಆಗಿರುವ ಭಾರತೀಯರು ಬೈಕಾಟ್‌ ಹ್ಯಾಷ್‌ಟ್ಯಾಗ್‌ ಮೂಲಕ ಅಮೆಜಾನ್‌ ವಸ್ತು ಖರೀದಿ ಮಾಡಬೇಡಿ ಎಂದು ಸಾರುತ್ತಿದ್ದಾರೆ. ಧ್ವಜ ಸಂಹಿತೆ 2022ರ ಪ್ರಕಾರ ಯಾವುದೇ ಉಡುಪಿನ ಭಾಗದಲ್ಲಿ ರಾಷ್ಟ್ರಧ್ವಜ ಮುದ್ರಿಸುವಂತಿಲ್ಲ. ಕುಶನ್​ಗಳು, ಕರವಸ್ತ್ರಗಳು, ನ್ಯಾಪ್​ಕಿನ್​ ಅಥವಾ ಪೆಟ್ಟಿಗೆಗಳ ಮೇಲೆಲ್ಲ ಪ್ರಿಂಟ್​ ಅಥವಾ ಕಸೂತಿ ಮಾಡುವಂತಿಲ್ಲ. ಆದರೆ ಅಮೇಜಾನ್​ ತನ್ನ ಮಾರಾಟ ಪ್ರಮಾಣ ಹೆಚ್ಚಿಸಿಕೊಳ್ಳಲು, ಮಾರ್ಕೆಟಿಂಗ್​ ಪ್ರಚಾರಕ್ಕಾಗಿ ಭಾರತದ ಧ್ವಜದ ಚಿತ್ರ ಬಳಸಿಕೊಳ್ಳುತ್ತಿದೆ ಎಂದು ಅನೇಕರು ತಮ್ಮ ಟ್ವಿಟರ್​ನಲ್ಲಿ ಆರೋಪಿಸಿದ್ದಾರೆ.
ಮಾಸ್ಕ್​​ನ್ನು ಬಳಸಿ ಸುಡುತ್ತಾರೆ ಇಲ್ಲವೇ ಬಿಸಾಡುತ್ತಾರೆ. ಇದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡುವ ಅವಮಾನ. ಆದ್ದರಿಂದ ಅಮೆಜಾನ್‌ ಎಲ್ಲ ಉತ್ಪನ್ನಗಳನ್ನೂ ಹಿಂಪಡೆಯಬೇಕು. ಬೇಷರತ್ತು ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ. ರಾಷ್ಟ್ರ ಧ್ವಜ ಸಂಹಿತೆಯನ್ನು ಅವಮಾನಿಸಿದ ಅಮೆಜಾನ್​ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದೂ ಅನೇಕರು ಆಗ್ರಹಿಸಿದ್ದಾರೆ.
ಚಿನ್ನ ಕೊಡ್ಸಿ, ಒಳ್ಳೊಳ್ಳೆ ಬಟ್ಟೆ ಕೊಡ್ಸಿ… ಹೊರಗೆಲ್ಲಾ ಸುತ್ತಾಡಿಸಿ… ಅಂತಿದ್ದ ಪತ್ನಿಯ ಮಾತು ಕೇಳಿ ಕೇಳಿ ಪತಿ ಆತ್ಮಹತ್ಯೆ!

VIDEO: ಪ್ರತಿಭಟನೆಯ ರಹಸ್ಯ ಬಿಚ್ಚಿಟ್ಟ ಟಿಕಾಯತ್‌! ಅವರ ಬಾಯಿಯಿಂದ್ಲೇ ‘ಸತ್ಯ’ ಕೇಳಿ ಅಭಿಮಾನಿಗಳಿಗೂ ಮುಜುಗರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
