ಬಲ್ಗೇರಿಯಾ:ಕರೊನಾ, ಸುನಾಮಿ, ಪ್ರಳಯ, ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲದಂಥ ಮಹಾನ್‌ ಭವಿಷ್ಯವನ್ನು ನೂರಾರು ವರ್ಷಗಳ ಹಿಂದೆಯೇ ಬರೆದಿಟ್ಟಿದ್ದ ಜಗತ್ಪ್ರಸಿದ್ಧ ಕಾಲಜ್ಞಾನಿ ಬಾಬಾ ವಾಂಗಾ ಅವರು ಇಲ್ಲಿಯವರೆಗೆ ಪ್ರಪಂಚದ ಕುರಿತು ನುಡಿದಿರುವ ಬಹುತೇಕ ಭವಿಷ್ಯಗಳು ನಿಜವಾಗಿವೆ. ಅದರಲ್ಲಿಯೂ ರಾಜಕಾರಣ ಮತ್ತು ಅನಾಹುತಗಳ ಕುರಿತಾಗಿ ಇವರು ಬರೆದಿಟ್ಟಿರುವ ಭವಿಷ್ಯದ ನುಡಿಗಳಂತೆ ಜಗತ್ತಿನಲ್ಲಿ ಘಟನೆಗಳು ಸಂಭವಿಸುತ್ತಿವೆ ಎನ್ನಲಾಗಿದೆ.
ಈಕೆ ಆಧುನಿಕ ನಾಸ್ಟ್ರಡಾಮಸ್ ಎಂದೇ ಹೆಸರಾಗಿದ್ದಾರೆ. 9/11 ದಾಳಿ, ಬ್ರೆಕ್ಸಿಟ್ ಭವಿಷ್ಯ, ಥೈಲ್ಯಾಂಡ್ ಸುನಾಮಿ, ಒಬಾಮಾ ಅಧ್ಯಕ್ಷ ಪದವಿ, ಸೋವಿಯತ್ ಒಕ್ಕೂಟ ಪತನ, ಪ್ರಿನ್ಸ್‌ ಡಯಾನಾ ದುರಂತ ಅಂತ್ಯ, ಚರ್ನೋಬಿಲ್ ದುರಂತ… ಸೇರಿದಂತೆ 2019ರ ಹೊತ್ತಿಗೆ ಭೀಕರ ವೈರಸ್‌ ಇಡೀ ವಿಶ್ವವನ್ನು ಆವರಿಸಲಿದೆ ಎಂಬ ಬಗ್ಗೆಯೂ ಭವಿಷ್ಯ ನುಡಿದಿದ್ದರು.
2022ರ ಕುರಿತು ಅವರು ನುಡಿದಿದ್ದ ಎರಡು ಭವಿಷ್ಯಗಳು ಈ ವರ್ಷ ನಿಜವಾಗಿದ್ದು ಅಚ್ಚರಿ ಮೂಡಿಸಿವೆ. ಇವುಗಳಲ್ಲಿ ಮೊದಲನೆಯದು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ತೀವ್ರ ಪ್ರವಾಹ ಪೀಡಿತವಾಗುತ್ತವೆ ಎಂದಿದ್ದರು. ಮತ್ತೊಂದು, ಅನೇಕ ನಗರಗಳಲ್ಲಿ ಬರ ಮತ್ತು ನೀರಿನ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲಿದೆ ಎಂದಿದ್ದರು.
ಇವೆರಡೂ ನಿಜವಾಗಿದೆ. ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಅಲ್ಲಿ ತೀವ್ರ ಪ್ರವಾಹ ಉಂಟಾಗಿದೆ. ಅದರಂತೆಯೇ, ಯುರೋಪ್​ನ ಕೆಲ ಭಾಗಗಳು ಭೀಕರ ಬರದಿಂದ ತತ್ತರಿಸಿ ಹೋಗಿವೆ. ಬೃಹತ್ ಹಿಮನದಿಗಳು ಮತ್ತು ನೀರಿನಿಂದ ಆವೃತವಾಗಿರುವ ಬ್ರಿಟನ್, ಇಟಲಿ ಮತ್ತು ಪೋರ್ಚುಗಲ್ ಈ ದಿನಗಳಲ್ಲಿ ತೀವ್ರ ಬರಗಾಲದ ಹಿಡಿತದಲ್ಲಿವೆ. ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕಳೆದ ಶುಕ್ರವಾರ ಬ್ರಿಟನ್‌ನಲ್ಲಿ ಬರಗಾಲವನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಇಂಗ್ಲೆಂಡ್‌ನ ನೈಋತ್ಯ, ದಕ್ಷಿಣ, ಮಧ್ಯ ಮತ್ತು ಪೂರ್ವ ಭಾಗಗಳು ನೀರಿನ ಕೊರತೆಯನ್ನು ಎದುರಿಸುತ್ತಿವೆ. ಇಟಲಿಯು 1950ರ ನಂತರದ ಅತ್ಯಂತ ಭೀಕರ ಬರವನ್ನು ಅನುಭವಿಸುತ್ತಿದೆ.
ಇವೆರಡೂ ಭವಿಷ್ಯ ನಿಜವಾದ ನಂತರ ಇದೀಗ ಭಾರತದ ಸರದಿ. 2022ರ ಭಾರತದ ಕುರಿತು ಬಾಬಾ ವಾಂಗಾ ಭವಿಷ್ಯ ನುಡಿದಿದ್ದಾರೆ. ಅವರ ಪ್ರಕಾರ, ಭಾರತದಲ್ಲಿ ತಾಪಮಾನ 50 ಡಿಗ್ರಿಗೂ ಹೆಚ್ಚು ಏರಿಕೆಯಾಗಲಿದೆ. ಇದರಿಂದ ಬರಗಾಲ ಕಾಣಿಸಿಕೊಳ್ಳಲಿದೆ. ಪರಿಣಾಮವಾಗಿ ಭಾರತದಲ್ಲಿ ಮಿಡತೆ ದಾಳಿ ಹೆಚ್ಚಲಿದ್ದು, ಬೆಳೆಗಳ ಹಾನಿಯಿಂದ ರೈತರು ಕಂಗಾಲಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದಾಗಲೇ ಕಳೆದ ವರ್ಷ ಮಿಡತೆಗಳು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯ ಪ್ರದೇಶದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವುದು ಎಲ್ಲರಿಗೂ ತಿಳಿದದ್ದೇ.
ಹಸಿರು ಮತ್ತು ಆಹಾರಕ್ಕಾಗಿ, ಮಿಡತೆ ಹಿಂಡುಗಳು ಭಾರತದ ಮೇಲೆ ದಾಳಿ ಮಾಡುತ್ತದೆ, ಬೆಳೆಗಳಿಗೆ ಗಂಭೀರ ಹಾನಿ ಉಂಟುಮಾಡುತ್ತದೆ ಮತ್ತು ದೇಶದಲ್ಲಿ ಕ್ಷಾಮವನ್ನು ಉಂಟುಮಾಡುತ್ತದೆ ಎಂದು ಅವರು ಹೇಳಿದ್ದಾರೆ. 2022 ಮುಗಿಯಲು ಇನ್ನು ಕೆಲವೇ ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಭವಿಷ್ಯ ಎಷ್ಟು ನಿಜವಾಗುತ್ತದೆ ಎಂದು ಕಾದು ನೋಡಬೇಕಿದೆ.
ಯಾರೀ ಬಾಬಾ ವಾಂಗಾ?‌ಬಲ್ಗೇರಿಯಾ ಮೂಲದ ಬಾಬಾ ವಾಂಗಾ 12ನೇ ವರ್ಷಕ್ಕೆ ದೃಷ್ಟಿ ಕಳೆದುಕೊಂಡಿದ್ದರು. ಬಿರುಗಾಳಿಯ ಸಮಯದಲ್ಲಿ ಧೂಳಿನ ಕಣಗಳು ಕಣ್ಣಿಗೆ ಬಡಿದ ಕಾರಣ, ದೃಷ್ಟಿ ಹೋಗಿತ್ತು. ಆಗಿನಿಂದ ದೇವರು ತನಗೆ ದಿವ್ಯದೃಷ್ಟಿ ನೀಡಿದ ಎನ್ನುವ ಅವರಿಗೆ ಎಲ್ಲ ವರ್ಷದ ಭವಿಷ್ಯ ಕಾಣಸಿಗುತ್ತಿತ್ತಂತೆ. ಈಕೆ ಆಧುನಿಕ ನಾಸ್ಟ್ರಡಾಮಸ್ ಎಂದೇ ಹೆಸರಾಗಿದ್ದಾರೆ.
1996ರಲ್ಲೇ ವಾಂಗಾ ಮೃತಪಟ್ಟಿದ್ದರೂ 5079ನೇ ಇಸವಿಯವರೆಗೆ ಆಕೆ ಭವಿಷ್ಯ ನುಡಿದಿದ್ದಾರೆ. 5079ರಲ್ಲಿ ಜಗತ್ತು ಕೊನೆಯಾಗುತ್ತದೆ ಎಂಬುದು ಆಕೆಯ ಮಾತು. ಇದೀಗ ಅವರು ನುಡಿದಿರುವ 2022ರ ಭವಿಷ್ಯ ವೈರಲ್‌ ಆಗಿದೆ.
ಸೈಬೀರಿಯಾದಲ್ಲಿ ಇದುವರೆಗೂ ಹಿಮಗಟ್ಟಿದಂತಿದ್ದ ಹೊಸ ವೈರಸ್‌ ಸಂಶೋಧಕರಿಗೆ ಸಿಗಲಿದೆ. ತಾಪಮಾನ ಏರಿಕೆಯಿಂದ ಬಿಡುಗಡೆಯಾಗಲಿರುವ ಈ ವೈರಸ್, ನಿಯಂತ್ರಣ ತಪ್ಪಿ ಜಗತ್ತಿನಾದ್ಯಂತ ಹರಡಲಿದೆ ಎಂದಿದ್ದಾರೆ. ಇದನ್ನು ನಿಯಂತ್ರಿಸುವಲ್ಲಿ ವ್ಯವಸ್ಥೆ ವಿಫಲವಾಗಲಿದೆ ಎಂದು ಬಾಬಾ ವಾಂಗಾ 2022ರ ಬಗ್ಗೆ ನುಡಿದಿದ್ದಾರೆ.
2022ರಲ್ಲಿ ಏಷ್ಯನ್ ದೇಶಗಳು ಹಾಗೂ ಆಸ್ಟ್ರೇಲಿಯಾ ಬಹಳಷ್ಟು ಬಾರಿ ಪ್ರವಾಹಕ್ಕೆ ನಲುಗುತ್ತವೆ. ಮತ್ತೆ ಮತ್ತೆ ಬರುವ ಪ್ರವಾಹಕ್ಕೆ ಚೇತರಿಸಿಕೊಳ್ಳಲು ಒದ್ದಾಡಬೇಕಾಗುತ್ತದೆ. ಬಹಳಷ್ಟು ಜನರ ಬದುಕು ಅಸ್ತವ್ಯಸ್ತವಾಗುತ್ತದೆ ಎಂಬ ಬಾಬಾ ವಾಂಗಾ ಹೇಳಿದ್ದಾರೆ.
ಏಲಿಯನ್‌ಗಳ ಬಗ್ಗೆ ಇನ್ನೂ ನಿಗೂಢವಾಗಿರುವ ಈ ಹೊತ್ತಿನಲ್ಲಿ ಬಾಬಾ ವಾಂಗಾ ಅನ್ಯಗ್ರಹ ಜೀವಿಗಳು ನಮ್ಮ ಮೇಲೆ 2002ರಲ್ಲಿ ದಾಳಿ ಮಾಡಲಿವೆ ಎಂದಿದ್ದಾರೆ. 2022ರಲ್ಲಿ ಔಮುಮ ಹೆಸರಿನ ಆಸ್ಟೆರಾಯ್ಡ್‌ನ್ನು ಅನ್ಯಗ್ರಹ ಜೀವಿಗಳು ಭೂಮಿಗೆ ಕಳಿಸಿ ಆಕ್ರಮಣ ನಡೆಸಲಿವೆ ಎನ್ನುವುದು ಅವರ ಭವಿಷ್ಯವಾಣಿ.(ಏಜೆನ್ಸೀಸ್​)
ಮಮತಾ ಬ್ಯಾನರ್ಜಿಗೆ ಏಕಕಾಲದಲ್ಲಿ ಶಾಕ್​ ಕೊಟ್ಟ ಐಟಿ, ಇಡಿ ಅಧಿಕಾರಿಗಳು: ಆಪ್ತನಿಗೆ ಬಂತು ಗ್ರಹಚಾರ!

VIDEO: ಗಾಡಿ ಸ್ಟಾರ್ಟ್​ ಮಾಡುವಾಗ ಇರಲಿ ಎಚ್ಚರ! ಮೈಸೂರು, ತುಮಕೂರಿನಲ್ಲಿ ಬೈಕ್​ ಒಳಗೆ ಕುಳಿತ ಬೃಹತ್​ ನಾಗರ…

ಶಿವಮೊಗ್ಗದ ಗಲಭೆಗೆ ಕಾರಣನಾದವ ಎಸ್​ಡಿಪಿಐ ಕಾರ್ಯಕರ್ತ, ಹೆಂಡ್ತಿ ಪಾಲಿಕೆಯ ಕಾಂಗ್ರೆಸ್​ ಸದಸ್ಯೆ- ಇಷ್ಟೇ ಸಾಕಲ್ಲ: ಈಶ್ವರಪ್ಪ ಗರಂ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 + 10 =
Remember me
