ಮುಂಬೈ:ಅಡುಗೆ ಮಾಡುವುದು ಕೂಡ ಒಂದು ಅತ್ಯದ್ಭುತ ಕಲೆ. ಇದೇ ಕಾರಣಕ್ಕೆ ಉನ್ನತ ಹುದ್ದೆಯಲ್ಲಿ ಇರುವವರೂ, ಗಣ್ಯ ವ್ಯಕ್ತಿಗಳು, ನಟ-ನಟಿಯರು ಎಷ್ಟೇ ಬಿಜಿ ಷೆಡ್ಯೂಲ್​ ಇದ್ದರೂ ಅಡುಗೆ ಪ್ರಿಯರಾಗಿದ್ದರೆ ಸ್ವಲ್ಪ ಸಮಯವನ್ನಾದರೂ ಇದಕ್ಕಾಗಿ ವಿನಿಯೋಗ ಮಾಡುತ್ತಾರೆ.
ಇನ್ನು, ನಟ-ನಟಿಯರ ವಿಷಯಕ್ಕೆ ಮಾತ್ರ ಬರುವುದಾದರೆ ತಮ್ಮ ಅಭಿಮಾನಿಗಳನ್ನು ಓಲೈಸಿಕೊಳ್ಳಲು, ತಮ್ಮ ಟಿಆರ್​ಪಿ ಹೆಚ್ಚಿಸಿಕೊಳ್ಳಲು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುವಲ್ಲಿ ಇವರದ್ದು ಎತ್ತಿದ ಕೈ. ತಮ್ಮ ಜನಪ್ರಿಯತೆ ತುಸು ಕಮ್ಮಿಯಾಗುತ್ತಿದೆ ಎಂದುಕೊಂಡರಂತೂ ಸಾಮಾಜಿಕ ಜಾಲತಾಣದಲ್ಲಿ ಹೊಸ ಹೊಸ ಅವತಾರಗಳಲ್ಲಿ ಅವರು ಕಾಣಿಸಿಕೊಳ್ಳುತ್ತಾರೆ.
ಇದೀಗ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಸರದಿ. ಅವರು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಅಭಿಮಾನಿಗಳಿಗಾಗಿ ಈರುಳ್ಳಿ ಉಪ್ಪಿನಕಾಯಿಯನ್ನು ಮಾಡಿ ತೋರಿಸಿದ್ದಾರೆ. ಇವರ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಕಪ್ಪು ಟೀಶರ್ಟ್ ಹಾಗೂ ಕೆಂಪು ಪ್ಯಾಂಟ್ ಧರಿಸಿರುವ ಸಲ್ಮಾನ್, ಫ್ರೆಂಚ್‌ ಗಡ್ಡ ಬಿಟ್ಟುಕೊಂಡು ಬಾಣಸಿಗನಾಗಿ ಕಾಣಿಸಿಕೊಂಡಿದ್ದಾರೆ.
ಹಸಿ ಈರುಳ್ಳಿಯ ಉಪ್ಪಿನಕಾಯಿಯನ್ನು ಹೇಗೆ ಮಾಡಿದ್ದಾರೆ ಎಂದು ನೀವೇ ನೋಡಿ, ಇಷ್ಟವಾದ್ರೆ ಟ್ರೈ ಮಾಡಿ…


A post shared by Bina Kak (@kakbina)

VIDEO: ಯುವಕರೇ ಹುಷಾರ್​! ಈಗಲೇ ಡಾನ್ಸ್​ ಕಲಿತುಬಿಡಿ- ಇಲ್ಲದಿದ್ದರೆ ಕಾದಿದೆ ಅಪಾಯ

ಜಸ್ಟ್​ ಎಸ್ಕೇಪ್​: ಭಯಾನಕ ಆಪತ್ತಿನಿಂದ ಬದುಕುಳಿದ ಪತಿರಾಯ- ಇಲ್ಲದಿದ್ದರೆ ಹರೋಹರ!

ಎದುರಿಗಿದ್ದರೆ ಪಾನೀಪುರಿ ಡಯೆಟ್​ ಯಾರಿಗೆ ಬೇಕ್ರಿ? ನೀಲಿತಾರೆಯ ವಿಡಿಯೋ ವೈರಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 4 =
Remember me
