ಲಂಡನ್​:ಮಕ್ಕಳ ಹುಟ್ಟುಹಬ್ಬ ಎಂದರೆ ಹಲವು ಮನೆಗಳಲ್ಲಿ ಸಂಭ್ರಮ ಮನೆಮಾಡಿರುತ್ತದೆ. ಮಕ್ಕಳಿಗೆ ಏನು ಸರ್​ಪ್ರೈಸ್​ ಗಿಫ್ಟ್​ ಕೊಡಬೇಕು ಎಂದು ತಿಂಗಳುಗಳ ಮುಂಚೆಯೇ ಚಿಂತೆ ಮಾಡುವವರಿದ್ದಾರೆ. ಯಾರೂ ಕೊಡದ, ಮಕ್ಕಳಿಗೆ ತುಂಬಾ ಇಷ್ಟವಾಗುವ ಡಿಫರೆಂಟ್​ ಗಿಫ್ಟ್​ ಕೊಡಲು ಅನೇಕ ಮಂದಿ ಚಿಂತೆ ಮಾಡುವುದಿದೆ.ಆದರೆ ಲಂಡನ್​ನ ತಾಯಿಯೊಬ್ಬಳು ಮಗನಿಗೆ ನೀಡಿರುವ ಗಿಫ್ಟ್​ ಇಡೀ ವಿಶ್ವಾದ್ಯಂತ ವೈರಲ್​ ಆಗಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದು ಬಂದಿದೆ.
ಅಷ್ಟಕ್ಕೂ ಅಂಥದ್ದೇನು ಗಿಫ್ಟ್​ ಕೊಟ್ಟಿದ್ದಾಳೆಂದರೆ ಅದುವೇ ಕೇಕ್​! ಕೇಕಾ ಎಂದು ಮೂಗುಮುರಿಯಬೇಡಿ. ಕೇಕಿನಲ್ಲೇನು ವಿಶೇಷತೆ ಇದೆ ಎಂದುಕೊಂಡ್ರಾ? ಬಗೆಬಗೆ ವಿನ್ಯಾಸದ, ಬಗೆಬಗೆ ರೂಪದ, ನಾನಾ ವಿಧದ ಕೇಕ್​ಗಳನ್ನು ನೀವು ನೋಡಿರಬಹುದು. ಆದರೆ ಈ ಅಮ್ಮ ಕೊಟ್ಟಿರುವ ಕೇಕ್​ ಇಷ್ಟೆಲ್ಲಾ ಪ್ರಚಾರಕ್ಕೆ ಬರಲು, ಇಷ್ಟೊಂದು ವೈರಲ್​ ಆಗುವುದಕ್ಕೆ ಕಾರಣವಿದೆ.
ನೀನಾ ಎಂಬ ಈ ಅಮ್ಮ ತಮ್ಮ ಮಗ ಇವಾನ್ಸ್​ಗೆ ನೀಡಿರುವ ಕೇಕ್​ ತುಂಬಾ ವಿಶೇಷವಾಗಿದೆ. ಅದೇನೆಂದರೆ, ಇವಾನ್ಸ್​ ಆನ್​ಲೈನ್ ಗೀಳು ಹಚ್ಚಿಕೊಂಡವ. ಸದಾ ಆನ್​ಲೈನ್​ನಲ್ಲಿಯೇ ಶಾಪಿಂಗ್​ ಮಾಡುತ್ತಿರುತ್ತಾನಂತೆ. ಆನ್​ಲೈನ್​ ಮೂಲಕ ತನಗೆ ಬೇಕಾದ ತಿನಿಸು ತರಿಸಿಕೊಳ್ಳುವುದು ಎಂದರೆ ಈತನಿಗೆ ಬಲು ಇಷ್ಟ.ಇದೇ ಕಾರಣಕ್ಕೆ ನೀನಾ ಮಗನ ಇದೇ ಪ್ರೀತಿಯನ್ನು ತಮ್ಮ ಕೇಕ್​ನಲ್ಲಿಯೂ ತೋರಿಸಿದ್ದಾರೆ. ಅದೇನೆಂದರೆ ಅಮೇಜಾನ್​ ಆನ್​ಲೈನ್​ ಮೂಲಕ ಪಾರ್ಸೆಲ್​ ಬಂದರೆ ಅದು ಯಾವ ರೀತಿಯಲ್ಲಿ ಕಾಣಿಸುವುದೋ, ಥೇಟ್​ ಅದೇ ರೀತಿಯ ಕೇಕ್​ ತಯಾರಿಸಿದ್ದಾರೆ. ​
ಬೆಳಗ್ಗೆ ಎದ್ದೊಡನೆಯೇ ಮಗನ ಎದುರು ಈ ಕೇಕ್​ ಇಟ್ಟಿದ್ದಾರೆ. ಅದನ್ನು ನೋಡಿದ ಮಗ, ಇದು ಅಮೆಜಾನ್​ ಪಾರ್ಸಲ್​ ಇರಬಹುದೆಂದೇ ಭಾವಿಸಿದ್ದಾನೆ. ಇದರನ್ನೇನು ವಿಶೇಷ ಎನ್ನಿಸಲಿಲ್ಲ ಆತನಿಗೆ. ಆದರೆ ಸೂಕ್ಷ್ಮವಾಗಿ ಗಮನಿಸಿದ ಬಳಿಕ ಆತನೇ ಶಾಕ್​ ಆಗಿದ್ದಾನೆ. ಏಕೆಂದರೆ ಮೇಲಿನದ್ದು ರಟ್ಟಿನ ಬಾಕ್ಸ್​ ಆಗಿರದೇ, ಅದು ರಟ್ಟಿನ ರೂಪದ ಕೇಕ್​ ಆಗಿತ್ತು. ಮೇಲೆ ಅಮೇಜಾನ್​ ಎಂದು ಬರೆದಿದ್ದು ಅದು ಕೂಡ ಕೇಕೇ ಆಗಿದ್ದು ಕಂಡು ಸಿಕ್ಕಾಪಟ್ಟೆ ಖುಷಿಯಾಗಿದ್ದಾನೆ.
ಅಂದ ಹಾಗೆ ನೀನಾ ವೃತ್ತಿಪರ ಕೇಕ್​ ಡಿಸೈನರ್​ ಆಗಿದ್ದು, ಕ್ಯಾಬಿನ್​ ಎಂಬ ಬೇಕರಿಯನ್ನೂ ನಡೆಸುತ್ತಿದ್ದಾರೆ. ಮಗನ 24ನೇ ವರ್ಷದ ಜನ್ಮ ದಿನಕ್ಕೆ ಏನಾದರೊಂದು ವಿಶೇಷವಾದ ಸಪ್ರೈಸ್​ ನೀಡಬೇಕು ಎಂದಿಕೊಂಡಿದ್ದ ತಾನು ಮಗನ ಆನ್​ಲೈನ್​ ಹುಚ್ಚಿಗೆ ಅಂಥದ್ದೇ ಏನಾದರೂ ಉಡುಗೊರೆ ನೀಡಬೇಕು ಎಂದು ಹೀಗೆ ಮಾಡಿದೆ ಎನ್ನುತ್ತಾರೆ ನೀನಾ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ಪತಿಗೆ ಗೊತ್ತಿಲ್ಲದಂತೆ ಆಗಾಗ್ಗೆ ನನ್ನನ್ನು ಸೇರಲು ಒಪ್ಪಿದ್ದಾಳೆ- ಇದು ತಪ್ಪೋ, ಸರಿಯೊ?

ನಂಗೆ ಬಿಟ್ಟು ನೀನ್ಯಾಕೆ ಬಂದ್ಯಲೆ… ನಾ ಬಂದ್ರೆ ನಿಂಗೆ ಏನಾಯ್ತಲೇ… ಇಬ್ಬರು ಚಾಲಕರ ಜಗಳದಲ್ಲಿ ಬಸ್ಸಾಯ್ತು ಸೀಜ್​!

ಏನು ಬೇಕಾದ್ರೂ ಕೊಡ್ತೀನಿ, ಮಜಾ ಮಾಡೋಣ ಬಾ ಎಂದ ಸರ್ಕಾರಿ ಆಸ್ಪತ್ರೆ ನೌಕರ- ದೂರು ದಾಖಲು

ತಾಳಿ ಕಟ್ಟುವ ಮೊದಲು ಬಾಲಕಿಗೆ ಜೀವದಾನ- ಮದುಮಗನಿಂದ ನಡೆಯಿತು ಒಂದು ಅಪೂರ್ವ ಕಾರ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
