ಲಖನೌ:ಸ್ಮಾರ್ಟ್​ಫೋನ್​ ಬಂದ ಮೇಲೆ ಅದರಲ್ಲಿಯೇ ಬಹುತೇಕ ಮಕ್ಕಳು ಮುಳುಗಿರುವುದು ಹೊಸ ವಿಷಯವಲ್ಲ. ಆರಂಭದಲ್ಲಿ ಇಂಥ ಚಟಕ್ಕೆ ಮಕ್ಕಳು ಬಲಿಯಾಗುವುದರಲ್ಲಿ ಪಾಲಕರದ್ದು ಬಹುದೊಡ್ಡ ಪಾತ್ರವಿದ್ದರೂ, ನಂತರ ಮಕ್ಕಳು ಇದರ ಬೆನ್ನಹಿಂದೆ ಬಿದ್ದಾಗ ಅವರನ್ನು ಹೊಡೆದು, ಬಡಿಯುವುದು ನಡೆಯುತ್ತದೆ.ಕಾರಣ ಏನೇ ಇರಲಿ. ಇಲ್ಲೊಬ್ಬರು ಮಾತ್ರ ಆನ್​ಲೈನ್​ ಗೇಮಿಂಟ್​ ಚಟಕ್ಕೆ ಬಿದ್ದಿರುವ ತಮ್ಮ 13 ವರ್ಷದ ಮಗನನ್ನು ನಿಯಂತ್ರಿಸಲು ಸಾಧ್ಯವಾಗದೇ ಆತನ ವಿರುದ್ಧ ಪೊಲೀಸ್​ ಕಂಪ್ಲೇಂಟ್​ ದಾಖಲಿಸಿದ್ದಾರೆ!
ಇಂಥದ್ದೊಂದು ಘಟನೆ ನಡೆದಿರುವ ನೊಯ್ಡಾದಲ್ಲಿ. ಶಾಲೆಯಲ್ಲಿ ಶುರುವಾಗಿರುವ ಆನ್​ಲೈನ್​ ಕ್ಲಾಸ್​ಗೆ ಚಕ್ಕರ್​ ಹಾಕಿ, ಸದಾ ಆನ್​ಲೈನ್​ ಗೇಮ್​ನಲ್ಲಿಯೇ ಮಗ ಮುಳುಗಿರುತ್ತಾನೆ ಎನ್ನುವುದು ನೋಯ್ಡಾದ ಡಂಕೌರ್ ರಾಮ್‍ಪುರ ಗ್ರಾಮದ ನಿವಾಸಿಯದ್ದು.
ಆನ್​ಲೈನ್​ ಗೇಮಿಂಗ್​ ಹುಚ್ಚು ಎಷ್ಟರಮಟ್ಟಿಗೆ ಇದೆ ಎಂದರೆ ಅದಕ್ಕೆ ದುಡ್ಡು ತುಂಬಲು ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಬಾಲಕ ಕದ್ದು ಮಾರಾಟ ಮಾಡುತ್ತಿದ್ದಾನಂತೆ. ಮಗನಿಗೆ ಎಷ್ಟೇ ಬುದ್ಧಿ ಹೇಳಿದರೂ ಅದನ್ನು ಆತ ಕೇಳದ ಹಿನ್ನೆಲೆಯಲ್ಲಿ ಇದೀಗ ಪೊಲೀಸ್​ ಠಾಣೆಗೆ ದೂರು ದಾಖಲಿಸಿರುವ ತಂದೆ, ಮಗನ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿಕೊಂಡಿದ್ದಾರೆ.
ಇದನ್ನೂ ಓದಿ:ಇಸ್ಲಾಮಾಬಾದ್​ನ 10 ಲಕ್ಷ ಜನಸಂಖ್ಯೆಯಲ್ಲಿ ಹಿಂದುಗಳು 3,000- ಅವರ ದೇಗುಲ ನಿರ್ಮಾಣಕ್ಕೆ ನೂರು ಅಡ್ಡಿ!
ಘಟನೆ ಕುರಿತು ಅಳಲು ತೋಡಿಕೊಂಡಿರುವ ಬಾಲಕನ ತಂದೆ, ಆನ್‍ಲೈನ್ ತರಗತಿಗಳನ್ನು ನಿರ್ಲಕ್ಷಿಸಿ ಯಾವಾಗಲೂ ಗೇಮ್ ಆಡುತ್ತಿರುತ್ತಾನೆ. ಮೊಬೈಲ್‍ನಲ್ಲಿ ಗೇಮ್ ಆಡದೇ, ಅಧ್ಯಯನದತ್ತ ಗಮನಹರಿಸುವಂತೆ ಮಗನನ್ನು ಹೆದರಿಸಿ ಎಂದು ತಂದೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. ಗೇಮ್ ಆಡಬೇಡ ಎಂದು ನಾನು ಬೈದರೆ, ಪಕ್ಕದ ಮನೆಗೆ ಹೋಗಿ ಅಲ್ಲಿ ಗೇಮ್ ಆಡುತ್ತಾನೆ ಎಂದು ದೂರಿದ್ದಾರೆ.
ಮಗನ ಆನ್‍ಲೈನ್ ತರಗತಿಗಳಿಗಾಗಿ ಸ್ಮಾರ್ಟ್​ಫೋನ್​ ಕೊಡಿಸಿದೆ. ಆದರೆ ಇದೀಗ ಗೇಮ್ ಆಡುವ ಮೂಲಕ ನನ್ನ ಮಾತನ್ನೇ ಕೇಳುತ್ತಿಲ್ಲ. ಅವನಿಗೆ ಹೆದರಿಸಿ, ಸಣ್ಣ ಪ್ರಮಾಣದ ಶಿಕ್ಷೆ ನೀಡಿ ಎಂದು ಹೇಳಿದ್ದಾರೆ.
ಸದ್ಯ ಪೊಲೀಸರು ಮಗನನ್ನು ಕರೆಸಿ ಕೌನ್ಸೆಲಿಂಗ್​ ಕೇಂದ್ರಕ್ಕೆ ಕಳುಹಿಸಿರುವುದಾಗಿ ವರದಿಯಾಗಿದೆ.
ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…

ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!

ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × 1 =
Remember me
