ಹರಿಯಾಣ:ಆನ್‌ಲೈನ್‌ನಲ್ಲಿ ಲುಡೋ ಆಡುತ್ತಿದ್ದ ಬಾಲಕ- ಬಾಲಕಿಯರ ನಡುವೆ ಲವ್‌ ಆಗಿ ಮದುವೆಯಾಗುವ ನಿರ್ಧಾರಕ್ಕೆ ಬಂದು ಓಡಿಹೋಗಿರುವ ಘಟನೆ ನಡೆದಿದೆ. ಒಡಿಶಾದ ಬಾಲಕಿ ಹಾಗೂ ಹರಿಯಾಣದ ಬಾಲಕನ ನಡುವೆ ಹುಟ್ಟಿರುವ ಪ್ರೀತಿ ಇದು!
ಇವರ ಲುಡೋ ಆಟದಿಂದ ಲವ್‌ ಎಷ್ಟರಮಟ್ಟಿಗೆ ಆಯಿತು ಎಂದರೆ ಹುಡುಗಿ ಹುಡುಗನನ್ನು ವಿಪರೀತವಾಗಿ ಪ್ರೀತಿಸಲು ಶುರು ಮಾಡಿ, ನಂತರ ಮನೆಯಲ್ಲಿ ಯಾರಿಗೂ ತಿಳಿಸದೇ ಹುಡುಗ ಇದ್ದಲ್ಲಿಗೆ ಹೋಗಿದ್ದಾಳೆ. ಇಬ್ಬರೂ ಮದುವೆಯ ಪ್ಲ್ಯಾನ್‌ ಹಾಕಿಕೊಂಡಿದ್ದರು. ಆದ್ದರಿಂದ ಪಾಣಿಪತ್‌ನ ದೇವಾಲಯದಲ್ಲಿ ಮದುವೆಯಾಗುವ ನಿರ್ಧಾರಕ್ಕೆ ಬಂದರು.
ಬಾಲಕಿ 9ನೇ ಕ್ಲಾಸಿನಲ್ಲಿ ಓದುತ್ತಿದ್ದರೆ ಬಾಲಕ ಶಾಲೆಗೆ ಹೋಗುತ್ತಿರಲಿಲ್ಲ. ಪಾಣಿಪತ್‌ನ ಸೋನಾಲಿ ರಸ್ತೆಯ ಕೊಳಚೆ ಪ್ರದೇಶದಲ್ಲಿ ಈತ ವಾಸಿಸುತ್ತಿದ್ದ. ತಮ್ಮ ಮಗಳು ಲವ್‌ನಲ್ಲಿ ಬಿದ್ದಿರೋ ಸುದ್ದಿ ಬಾಲಕಿಯ ತಾಯಿಗೆ ತಿಳಿದಿತ್ತು. ಆದ್ದರಿಂದ ಅವರು ತುಂಬಾ ಸ್ಟ್ರಿಕ್ಟ್‌ ಮಾಡತೊಡಗಿದರು. ಒಂದು ದಿನ ಅಕ್ಕನ ಮನೆಗೆ ಹೋಗಿಬರುವುದಾಗಿ ಹೇಳಿದ ಬಾಲಕಿ ಅಲ್ಲಿಂದ ಓಡಿಹೋಗಿದ್ದಳು.
ಈ ಮದುವೆಯ ಸುದ್ದಿ ಅಲ್ಲಿನ ಅಧಿಕಾರಿ ರಜನಿ ಗುಪ್ತಾ ಅವರಿಗೆ ಸಿಕ್ಕಿತು. ಬಾಲಕನ ಮನೆಯವರು ಮದುವೆಗೆ ಸಿದ್ಧತೆಗೊಳಿಸಿದ್ದರು. ನಂತರ ಅಲ್ಲಿ ದಾಳಿಇಟ್ಟ ಅಧಿಕಾರಿಗಳು ಮದುವೆಯನ್ನು ನಿಲ್ಲಿಸಲು ಬಂದಾಗ ಬಾಲಕನ ಮನೆಯವರು ಪ್ರತಿರೋಧ ಒಡ್ಡಿದರು. ಇಬ್ಬರೂ ಪ್ರಾಪ್ತರು ಎಂದರು. ಆದರೆ ಆ ಬಗ್ಗೆ ಅವರಲ್ಲಿ ದಾಖಲೆ ಇರಲಿಲ್ಲ. ಆದ್ದರಿಂದ ಮದುವೆಯನ್ನು ನಿಲ್ಲಿಸಿ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾರೆ.
‘ಎರಡು ವರ್ಷಗಳಿಂದ ಇವರ ನಡುವೆ ಲವ್‌ ಶುರುವಾಗಿದೆ. ಲುಡೋ ಆಟದಿಂದ ಇಲ್ಲಿಯವರೆಗೆ ವಿಷಯ ಬಂದು ಮುಟ್ಟಿದೆ. ಮಕ್ಕಳು ಏನು ಮಾಡುತ್ತಿದ್ದಾರೆ ಎಂಬ ಬಗ್ಗೆ ಪಾಲಕರು ಸ್ವಲ್ಪ ಗಮನ ಹರಿಸುತ್ತಿರಬೇಕು. ಇಲ್ಲದಿದ್ದರೆ ಮಕ್ಕಳ ಅದರಲ್ಲಿಯೂ ಹೆಣ್ಣುಮಕ್ಕಳ ಭವಿಷ್ಯ ಏನಾದರೂ ಆಗಬಹುದು, ಈಗ ಎಂತೆಂಥ ನೀಚ ಕೃತ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅಮಾನಕ ಹೆಣ್ಣುಮಕ್ಕಳ ಮನಸ್ಸನ್ನು ಕೆಡಿಸಿ ಅವರನ್ನು ಬೇಡದ ಕೃತ್ಯಕ್ಕೂ ನೂಕಲಾಗುತ್ತದೆ. ಆದ್ದರಿಂದ ಪಾಲಕರು ಅತೀ ಎಚ್ಚರದಿಂದ ಇರಬೇಕು’ ಎಂದು ಶಾಲಿನಿ ಗುಪ್ತಾ ಎಚ್ಚರಿಸಿದ್ದಾರೆ.
ಚಿಂದಿ ಆಯುವವನಿಂದಾಗಿ ಮರುಜನ್ಮ ಪಡೆದ ಬೆಂಗಳೂರು ಮಕ್ಕಳು! ಸಾಧನೆ ಮಾಡಲು ಮನೆಬಿಟ್ಟವರು ಸಿಕ್ಕಿದ್ದೇ ರೋಚಕ

ವಿಟಮಿನ್‌ಗಾಗಿ ಕುಡಿದ ಸೋರೆಕಾಯಿ ಜ್ಯೂಸ್ ವಿಷವಾಯ್ತು! ಐಸಿಯುನಲ್ಲಿ ನಟಿ: ಜನರಿಗೆ ನೀಡಿದ್ದಾರೆ ಎಚ್ಚರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − nine =
Remember me
