ನವದೆಹಲಿ:ಕರೊನಾ ವೈರಸ್​ ಹಿನ್ನೆಲೆಯಲ್ಲಿ ಎಲ್ಲೆಡೆ ಈಗ ವರ್ಕ್​ ಫ್ರಂ ಹೋಮ್​ದೇ ಕಾರುಬಾರು. ಬಹುತೇಕ ಎಲ್ಲಾ ಸಾಫ್ಟ್​ವೇರ್​ ಕಂಪೆನಿಗಳು ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ನಿರ್ವಹಿಸಲು ಹೇಳಿವೆ.
ಈ ಹಿನ್ನೆಲೆಯಲ್ಲಿ ಮೀಟಿಂಗ್​ಗಳು ಕೂಡ ವಿಡಿಯೋ ಕಾನ್ಫರೆನ್ಸ್​ ಮೂಲಕವೇ ನಡೆಯುತ್ತಿವೆ. ವಿಡಿಯೋ ಕಾನ್ಫರೆನ್ಸ್​ ಸಮಯದಲ್ಲಿ ಆಗಿರುವ ಅನಾಹುತಗಳ ಬಗ್ಗೆ ಇದಾಗಲೇ ಸಾಕಷ್ಟು ಸುದ್ದಿಯಾಗಿವೆ.
https://www.facebook.com/VVani4U/videos/316186579438388
ಅಂಥದ್ದೇ ಒಂದು ಘಟನೆ ಇಲ್ಲಿ ಸಂಭವಿಸಿದ್ದು, ಇದರ ವಿಡಿಯೋ  ಸಕತ್ ವೈರಲ್​ ಆಗುತ್ತಿದೆ.
ಸಾಮಾನ್ಯವಾಗಿ ಮೀಟಿಂಗ್​ಗಳಲ್ಲಿ ಮೀಟಿಂಗ್​ ಅಟೆಂಡ್​ ಆದವರ ಮೇಲಿನ ಭಾಗವಷ್ಟೇ ಕಾಣಿಸುತ್ತದೆ. ಆದ್ದರಿಂದ ಮೀಟಿಂಗ್​ ಅಟೆಂಡ್​ ಆಗುವವರು ಸೂಟ್​, ಟೈ ಧರಿಸಿದರೆ, ಪ್ಯಾಂಟ್​ ಧರಿಸದೇ ಕುಳಿತುಕೊಳ್ಳುವುದು ಮಾಮೂಲಾಗಿದೆ. ಆದರೆ ಅವರ ದುರಾದೃಷ್ಟಕ್ಕೆ ಅವರ ಅರಿವಿಗೆ ಬಾರದೇ ಎದ್ದೇಳುವ ಸಂದರ್ಭ ಬಂದುಬಿಡುತ್ತದೆ. ಹೀಗೆ ಎದ್ದಾಗ, ಪ್ಯಾಂಟ್​ ಧರಿಸದೇ ಇರುವುದು ತಿಳಿದುಬಿಡುತ್ತದೆ.
ಇಲ್ಲಿ ಆಗಿದ್ದೂ ಹಾಗೇ. ಆನ್​ಲೈನ್​ ಮೀಟಿಂಗ್​ನಲ್ಲಿ ಇದ್ದ ವ್ಯಕ್ತಿಯೊಬ್ಬನ ಮಗ ಮೀಟಿಂಗ್​ ನಡೆಯುತ್ತಿರುವಾಗಲೇ ಬಂದು ಕಿತಾಪತಿ ಮಾಡುತ್ತಾನೆ. ಅವನು ಮತ್ತೆ ಬರಬಾರದು ಎನ್ನುವ ಕಾರಣಕ್ಕೆ ಬಾಗಿಲು ಹಾಕಲು ಈ ಅಪ್ಪ ಏಳುತ್ತಾನೆ. ಆಗ ಅಲ್ಲಿದ್ದ ಇನ್ನೊಬ್ಬ ನೈಸ್ ಷಾರ್ಟ್ಸ್ಸ್ ಎನ್ನುತ್ತಾನೆ. ಆಗಲೇ ಇತನಿಗೆ ತಾನು ಪ್ಯಾಂಟ್​ ಹಾಕದೇ ಇರುವುದು ಎಲ್ಲರಿಗೂ ತಿಳಿದುಹೋಯಿತು ಎಂದು ಮುಜುಗರಕ್ಕೆ ಒಳಗಾಗುತ್ತಾನೆ. ನಂತರ ಈತ ಮುಜುಗರಕ್ಕೆ ಒಳಗಾಗಿದ್ದನ್ನು ಕಂಡು ಇನ್ನೊಬ್ಬಾತ, ನಾನು ಕೂಡ ಪ್ಯಾಂಟ್​ ಹಾಕಿಲ್ಲ ಎಂದು ತೋರಿಸುತ್ತಾರೆ.
ಇದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಜನರು ನಕ್ಕೂ ನಕ್ಕೂ ನಲಿಯುತ್ತಿದ್ದಾರೆ.
ಪಬ್​ಜಿಗಾಗಿ ಅಜ್ಜನ ಜೀವಮಾನದ ಹಣ ಕದ್ದ ಮೊಮ್ಮಗ- ಪಾಸ್​ವರ್ಡ್​ ಹೇಳುವ ಮುನ್ನ ಎಚ್ಚರ!

11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!
11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!
K

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − eleven =
Remember me
