ನವದೆಹಲಿ:ವಿಮಾನಗಳಲ್ಲಿ ಪ್ರಯಾಣಿಸುವವರಿಗಾಗಿ ಹೊಸ ನಿಯಮವನ್ನು ಇದೀಗ ಜಾರಿಗೊಳಿಸಲಾಗಿದೆ. ಅದೇನೆಂದರೆ ಯಾರೇ ಆಗಲೇ ಒಂದೇ ಒಂದು ಹ್ಯಾಂಡ್ ಬ್ಯಾಗ್ ಮಾತ್ರ ತೆಗೆದುಕೊಂಡು ಹೋಗಬಹುದು. ಅದಕ್ಕಿಂತ ಹೆಚ್ಚು ಹ್ಯಾಂಡ್‌ ಬ್ಯಾಗ್‌ ಕೊಂಡೊಯ್ಯುವಂತಿಲ್ಲ ಎಂದು ನಾಗರಿಕ ವಿಮಾನಯಾನ ಸುರಕ್ಷತಾ ಬ್ಯೂರೋ (ಬಿಸಿಎಎಸ್) ಹೇಳಿದೆ.
ಈ ಬಗ್ಗೆ ಟಿಕೆಟ್‌ ಕೌಂಟರ್‌ ಮತ್ತು ಏರ್‌ಪೋರ್ಟ್‌ಗಳಲ್ಲಿ ಮಾಹಿತಿ ನೀಡಬೇಕು. ಯಾವುದೇ ಪ್ರಯಾಣಿಕರೂ ಒಂದಕ್ಕಿಂತ ಹೆಚ್ಚು ಹ್ಯಾಂಡ್‌ಬ್ಯಾಗ್‌ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಬೇಕು ಎಂದು ಬಿಸಿಎಎಸ್‌ ಹೇಳಿದೆ.
ಇದಕ್ಕೆ ಕಾರಣ ನೀಡಿರುವ ಬಿಸಿಎಎಸ್‌, ಹೆಚ್ಚೆಚ್ಚು ಹ್ಯಾಂಡ್‌ಬ್ಯಾಗ್ ಕೊಂಡೊಯ್ದರೆ ಅದರ ತಪಾಸಣೆ ಇತ್ಯಾದಿಗಾಗಿ ಬ್ಯಾಗ್ ಪರಿಶೀಲನೆಗೆ ಹೆಚ್ಚು ಸಮಯ ವ್ಯರ್ಥವಾಗುತ್ತದೆ. ಕೋವಿಡ್‌ನ ಈ ಸಮಯದಲ್ಲಿ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಆರೋಗ್ಯ ಪ್ರೋಟೋಕಾಲ್‍ಗಳನ್ನು ಖಚಿತಪಡಿಸಿಕೊಳ್ಳಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದೆ.
ಆಂಧ್ರ ಪ್ರದೇಶದ ಮುಖ್ಯಮಂತ್ರಿಗೆ ಕೊಲೆ ಬೆದರಿಕೆ: ಖ್ಯಾತ ನಟ ಪವನ್‌ ಕಲ್ಯಾಣ‌ ಅಭಿಮಾನಿ ಅರೆಸ್ಟ್‌

ಸಿಎಂ ಸ್ಥಾನಕ್ಕೆ ನಾನಲ್ದೇ ಬೇರೆ ಮುಖ ಕಾಣಿಸ್ತದಾ ಎಂದಿದ್ದ ಪ್ರಿಯಾಂಕಾ ಯೂಟರ್ನ್‌! ಅದು ಹಾಗಲ್ಲ… ಹೀಗೆ… ಎಂದು ಸ್ಪಷ್ಟನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − twelve =
Remember me
