ಮುಂಬೈ:ಹಿಂದಿ ಹಾಗೂ ತೆಲಗು ಚಿತ್ರ ಹಾಗೂ ಧಾರಾವಾಹಿಗಳಲ್ಲಿ ನಟಿಸುತ್ತಿರುವ ನಟಿ ಮಾಳವಿ ಮಲ್ಹೋತ್ರಾ ಮೇಲೆ ಚಿತ್ರನಿರ್ಮಾಪಕ ಯೋಗೇಶ್​ ಹಲ್ಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಮಾಳವಿ ಅವರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ನಟಿ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಈ ಹಲ್ಲೆ ನಡೆದಿರುವುದು ಏಕೆ ಎಂದು ಬಹಿರಂಗಪಡಿಸಲು ಪೊಲೀಸರು ನಿರಾಕರಿಸಿದ್ದಾರೆ. ಮಾಳವಿ ಮತ್ತು ಯೋಗೇಶ್ ಫೇಸ್‍ಬುಕ್​ ಸ್ನೇಹಿತರಾಗಿದ್ದಾರೆ. ಯೋಗೇಶ್ ಮಾಳವಿ ಅವರಲ್ಲಿ ಪ್ರೀತಿಯ ನಿವೇದನೆ ಮಾಡಿಕೊಂಡಿದ್ದು, ಮಾಳವಿ ಇದನ್ನು ನಿರಾಕರಿಸಿದ್ದೇ ಹಲ್ಲೆಗೆ ಕಾರಣ ಎಂದು ಕೆಲವರು ಹೇಳುತ್ತಿದ್ದಾರೆ.
ಘಟನೆಯ ಕುರಿತು ಮಾತನಾಡಿರುವ ಮಾಳವಿಯವರು, “ಯೋಗೇಶ್ ಮತ್ತು ನನ್ನ ಪರಿಚಯ ಫೇಸ್‍ಬುಕ್​ನಲ್ಲಿ ಆಗಿತ್ತು. ಹೀಗೆ ಮಾತನಾಡುತ್ತಿದ್ದೆವು. ಒಂದು ದಿನ ಅವರು, ಕಾಫಿ ಕೆಫೆಯಲ್ಲಿ ಭೇಟಿಯಾಗಲು ಹೇಳಿದ್ದರು. ಅವರನ್ನು ಭೇಟಿಯಾಗಿ ಬಂದಿದ್ದೆ. ಮಾತುಕತೆ ನಡೆಸಿದ್ದೆವು ಎಂದು ಹೇಳಿದ್ದಾರೆ. ಆದರೆ ಅಲ್ಲಿ ಏನು ಮಾತುಕತೆಯಾಯಿತು ಹಾಗೂ ಭೇಟಿಯಾಗಲು ಹೇಳಿದ್ದು ಏಕೆ ಎಂಬ ಬಗ್ಗೆ ಅವರು ಯಾವ ಮಾಹಿತಿಯನ್ನೂ ನೀಡಲಿಲ್ಲ.
ಇದನ್ನೂ ಓದಿ:ತಂದೆಯ ಆಸ್ತಿಯನ್ನು ತಾಯಿಯ ಹೆಸರಿಗೆ ವರ್ಗಾಯಿಸುವುದು ಹೇಗೆ?
ನಿನ್ನೆ (ಸೋಮವಾರ) ರಾತ್ರಿ ಮನೆಯಿಂದ ಹೊರಗೆ ಹೋಗಿದ್ದೆ. ಈ ಸಮಯದಲ್ಲಿ ಯೋಗೇಶ್ ತನ್ನ ಅಡಿ ಕಾರ್ ನಿಲ್ಲಿಸಿಕೊಂಡು ಅಲ್ಲಿಯೇ ರಸ್ತೆ ಬಳಿ ನಿಂತಿದ್ದರು. ರಸ್ತೆ ಮಧ್ಯೆ ನನ್ನನ್ನು ತಡೆಯಲು ಮುಂದಾದರು. ಆಗ ನಾನು ವಿರೋಧಿಸಿದೆ. ಇದರಿಂದ ಕೋಪಗೊಂಡ ಅವರು ಚಾಕುವಿನಿಂದ ನಾಲ್ಕು ಬಾರಿ ಹಲ್ಲೆ ನಡೆಸಿದ್ದಾರೆ. ನಂತರ ಘಟನಾ ಸ್ಥಳದಿಂದ ಯೋಗೇಶ್ ಪರಾರಿಯಾಗಿದ್ದಾರೆ’ ಎಂದು ಮಾಳವಿ ಮಲ್ಹೋತ್ರಾ ದೂರು ಸಲ್ಲಿಸಿದ್ದಾರೆ.
ಕೊಲೆ ಯತ್ನದಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಟಿಯ ಮೇಲೆ ಹಲ್ಲೆ ನಡೆದ ಸ್ಥಳದಲ್ಲಿನ ಸಿಸಿಟಿವಿ ಫೂಟೇಜ್ ವಶಕ್ಕೆ ಪಡೆದುಕೊಂಡು, ಆರೋಪಿ ಬಂಧನಕ್ಕಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಘಟನೆಯ ಎಲ್ಲ ದೃಶ್ಯಗಳು ಸೆರೆಯಾಗಿವೆ.
ಹಿಮಾಚಲ ಪ್ರದೇಶದರಾದ ಮಾಳವಿ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ತೆಲುಗಿನ ಕುಮಾರಿ 21 ಎಫ್, ತಮಿಳು ಸಿನಿಮಾ ನದಿಕ್ಕೂ ಎಂಡಿ, ಹಿಂದಿಯ ಹೋಟೆಲ್ ಮಿಲನ್ ಮತ್ತು ಉಡಾನ್ ಧಾರಾವಾಹಿಯಲ್ಲಿ ನಟಿಸಿರುವ ಮಾಳವಿ, ಹಲವು ಜಾಹೀರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಕಾಲೇಜು ಯುವತಿ ಮೇಲೆ ಗುಂಡಿನ ದಾಳಿ- ಸಿಸಿಟಿವಿಯಲ್ಲಿ ದಾಖಲಾಯ್ತು ಭಯಾನಕ ದೃಶ್ಯ

ಮನುಷ್ಯರ ವೃಷಣ ಕತ್ತರಿಸಿ ಹಸಿಹಸಿ ತಿನ್ನುವ ‘ವೈದ್ಯರು’ ಇವರು! ಫ್ರಿಜ್​ನಲ್ಲಿತ್ತು ಭಯಾನಕ ಸತ್ಯ…

ಬೀ ಕೇರ್​ಫುಲ್​: ಮಾಸ್ಕ್​ ಮೇಲೀಗ ಹದ್ದಿನ ಕಣ್ಣು- ಮಾರ್ಷಲ್​ಗಳಿಗೆ ನೀಡಲಾಗಿದೆ ಟಾರ್ಗೆಟ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four − 1 =
Remember me
