ಗೋಸುಂಬೆಅಥವಾ ಊಸರವಳ್ಳಿ ಎಂದರೆ ತನ್ನ ಅಗತ್ಯಕ್ಕೆ ತಕ್ಕಂತೆ ಬಣ್ಣ ಬದಲಿಸುವ ಜೀವಿ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಅದಕ್ಕಾಗಿಯೇ ದಿನಕ್ಕೊದ್ದರಂತೆ ಮಾತನಾಡುವವರಿಗೆ ಗೋಸುಂಬೆ ಎಂದು ಕರೆಯುತ್ತಾರೆ. ಇದೀಗ ಇದೇ ಊಸರವಳ್ಳಿ ಭಾರಿ ಸುದ್ದಿ ಮಾಡಿದೆ.
ಸಾಮಾನ್ಯವಾಗಿ ಎಲ್ಲ ಜಾತಿಯ ಊಸರವಳ್ಳಿಗಳು ಮೊಟ್ಟೆಗಳನ್ನು ಇಡುತ್ತದೆ. ಇದು ಸಸ್ತನಿ ಜಾತಿಗೆ ಸೇರಿದ್ದು ಅಲ್ಲ. ಆದ್ದರಿಂದ ಇದು ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಆದರೆ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಗೋಸುಂಬೆಯು ಮರಿ ಹಾಕಿದ್ದನ್ನು ನೋಡಬಹುದಾಗಿದೆ.
ಸೃಷ್ಟಿಯ ವೈಚಿತ್ರ್ಯಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಬಣ್ಣ ಬದಲಿಸೋ ಊಸರವಳ್ಳಿ, ಇದೀಗ ಅಗತ್ಯ ಬಂದರೆ ಮೊಟ್ಟೆ ಬದಲು ಮರೀನೂ ಹಾಕಬಲ್ಲುದು ಎಂಬುದನ್ನು ಸಾಬೀತು ಮಾಡಿದೆ. ನೇಚರ್ ಈಸ್ ಸ್ಕೇರಿ ಎಂಬ ಟ್ವಿಟರ್‌ ಸಂಸ್ಥೆ ಈ ವಿಡಿಯೋ ಶೇರ್‌ ಮಾಡಿದೆ. 30 ಸೆಕೆಂಡುಗಳ ವೀಡಿಯೊ ಇದಾಗಿದೆ. ಇದರಲ್ಲಿ ಮರವನ್ನು ಏರುತ್ತಿರುವ ಊಸರವಳ್ಳಿ ತನ್ನ ಮರಿಗೆ ಜನ್ಮ ನೀಡುವುದನ್ನು ನೋಡಬಹುದು.ಮೊದಲಿಗೆ ಇದು ಮರಿ ಎಂದು ಎನಿಸುವುದಿಲ್ಲ. ಚಿಕ್ಕ ಬಾಲ್‌ನಂತೆ ಗೋಚರಿಸುತ್ತದೆ. ನಂತರ ಅದನ್ನು ಕೆಳಕ್ಕೆ ಬೀಳುತ್ತಿದ್ದಂತೆಯೇ ಊಸರವಳ್ಳಿಯ ಮರಿ ಎನ್ನುವುದು ಕಾಣಿಸುತ್ತದೆ. ಅಚ್ಚರಿ ಎಂದರೆ, ಮರಿ ಕೆಳಕ್ಕೆ ಬೀಳುತ್ತಿದ್ದಂತೆಯೇ ಚಲಿಸುವುದನ್ನು ವಿಡಿಯೋದಲ್ಲಿ ನೋಡಬಹುದು.
ಹಲವು ತಳಿಯ ಊಸರವಳ್ಳಿಗಳು ಮೊಟ್ಟೆಯನ್ನಿಡುತ್ತವೆ. ಆದರೆ ಕೆಲವು ದೇಹದಲ್ಲೇ ಮೊಟ್ಟೆಯನ್ನಿಟ್ಟು ಕೆಲವು ದಿನ ಕಾವು ಕೊಟ್ಟು ಆಮೇಲೆ ಮೊಟ್ಟೆಯೊಡೆದು ನೇರವಾಗಿ ಮರಿಗಳನ್ನು ಹಾಕುತ್ತದೆ, ಜಾಕ್ಸನ್ ಎಂಬ ಜಾತಿಯ ಊಸರವಳ್ಳಿ ನೇರವಾಗಿ ಮರಿ ಹಾಕುತ್ತದೆ ಎನ್ನಲಾಗಿದೆ. ಅಂದಹಾಗೆ ಪ್ರಪಂಚದಾದ್ಯಂತ ಸುಮಾರು 160 ಜಾತಿಯ ಊಸರವಳ್ಳಿಗಳಿದ್ದು, ಈ ಪೈಕಿ ಕೆಲವು ಜಾತಿಯ ಊಸರವಳ್ಳಿಗಳು ಮಾತ್ರ ಬಣ್ಣ ಬದಲಾಯಿಸುತ್ತವೆ.
ಸಣ್ಣ ಗಾತ್ರದ ಊಸರವಳ್ಳಿಗಳು ಒಂದು ಸಮಯದಲ್ಲಿ 4 ರಿಂದ 5 ಮೊಟ್ಟೆಗಳನ್ನು ಇಡುತ್ತವೆ, ಆದರೆ ದೊಡ್ಡ ಗಾತ್ರದ ಊಸರವಳ್ಳಿಗಳು 100 ಮೊಟ್ಟೆಗಳನ್ನು ಇಡುತ್ತವೆ.
ಇಲ್ಲಿದೆ ನೋಡಿ ವಿಡಿಯೋ:
https://twitter.com/CrazyCreator14/status/1431078105591029763
ಪಾರ್ಟಿಯಲ್ಲಿದ್ದಾಗ ಏನೋ ಬಂದಂಗಾಯ್ತು… ನೋಡಿದ್ರೆ ಡೆಲಿವರಿ ಆಗಿತ್ತು, ಗರ್ಭಿಣಿ ಎಂದೇ ಗೊತ್ತಿರಲಿಲ್ಲ ಎಂದ ಮಹಿಳೆ!

ಗಂಡ ಪ್ರೀತಿಯಿಂದ ತಂದ ಪಾನಿಪುರಿಯೇ ಪತ್ನಿಯ ಆತ್ಮಹತ್ಯೆಗೆ ಕಾರಣವಾಯ್ತು! ಅಷ್ಟಕ್ಕೂ ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
