ಭೋಪಾಲ್:ಅಂತಿಮ ಪರೀಕ್ಷೆಗಳಲ್ಲಿ ಕಾಪಿ ಮಾಡಿ ಸಿಕ್ಕಿಬಿದ್ದು ಡಿಬಾರ್​ ಆಗುವುವವರು ಎಷ್ಟೋ ಮಂದಿ. ಕಾಪಿ ನಡೆಯಬಾರದು ಎನ್ನುವ ಕಾರಣಕ್ಕೆ ವಿಧಿಸುವ ಷರತ್ತುಗಳ ಅದೆಷ್ಟೋ. ಆದರೆ ಕರೊನಾದಿಂದಾಗಿ ಇದೀಗ ಕುಳಿತಲ್ಲಿಯೇ ಕಾಪಿ ಮಾಡಿ ಪರೀಕ್ಷೆ ಪಾಸಾಗಲು ಸರ್ಕಾರ ಅನುಮತಿ ನೀಡಿದೆ!
ಅರ್ಥಾತ್​ ಇದು ಓಪನ್​ ಬುಕ್​ ಎಕ್ಸಾಂ. ತೆರೆದ ಪುಸ್ತಕದ ಪರೀಕ್ಷೆ. ಇಲ್ಲಿ ವಿದ್ಯಾರ್ಥಿಗಳು ಕೊಟ್ಟ ಅವಧಿಯಲ್ಲಿ ಪುಸ್ತಕ ನೋಡಿಕೊಂಡು ಉತ್ತರ ಬರೆಯಬಹುದು. ಇದರಿಂದ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರುವ ಅಗತ್ಯವಿಲ್ಲ. ಅವರು ಇರುವಲ್ಲಿಯೇ ಇಂಥದ್ದೊಂದು ಪರೀಕ್ಷೆಯನ್ನು ನೀಡಲಾಗುತ್ತದೆ. ಆನ್​ಲೈನ್​ ಮೂಲಕ ಪ್ರಶ್ನೆಗಳನ್ನು ನೀಡಲಾಗುತ್ತದೆ. ನಿಗದಿ ಮಾಡಿರುವ ಅವಧಿಯೊಳಗೆ ವಿದ್ಯಾರ್ಥಿಗಳು ಪುಸ್ತಕ, ನೋಟ್ಸ್​ ಇಲ್ಲವೇ ಯಾವುದಾದರೂ ರೀತಿಯಲ್ಲಿ ಆ ಅವಧಿಯೊಳಕ್ಕೆ ಪರೀಕ್ಷೆ ಮುಗಿಸಿ ಉತ್ತರವನ್ನು ಅಪ್​ಲೋಡ್​ ಮಾಡಬೇಕು.
ಇಂಥ ಅವಕಾಶ ಕಲ್ಪಿಸಿರುವುದು ಮಧ್ಯಪ್ರದೇಶ ಸರ್ಕಾರ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ಪದವಿ ಪೂರ್ವ ಹಾಗೂ ಸ್ನಾತಕೋತ್ತರ ಪದವಿಗಳನ್ನು ವ್ಯಾಸಂಗ ಮಾಡುತ್ತಿರುವ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಓಪನ್ ಬುಕ್ ಎಕ್ಸಾಂಗೆ ಇಲ್ಲಿಯ ಸರ್ಕಾರ ನಿರ್ಧರಿಸಿದೆ. ಈ ಮೊದಲು ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೂ ಇದೇ ರೀತಿ ಪರೀಕ್ಷೆ ಘೋಷಣೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಮಧ್ಯಪ್ರದೇಶದ ಶಿಕ್ಷಣ ಸಚಿವ ಮೋಹನ್ ಯಾದವ್, ಕಾಲೇಜು ಹಾಗೂ ವಿಶ್ವ ವಿದ್ಯಾಲಯದಲ್ಲಿ ಯಾವುದೇ ರೀತಿಯ ದೈಹಿಕ ಪರೀಕ್ಷೆಗಳು ಇರುವುದಿಲ್ಲ. ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಮೊದಲ ಹಾಗೂ ಎರಡನೇ ವರ್ಷದ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಿದಂತೆಯೇ, ಪದವಿ ಮತ್ತು ಸ್ನಾತಕೋತ್ತರ ಪದವಿ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಓಪನ್ ಬುಕ್ ಪರೀಕ್ಷೆ ನಡೆಸಲಾಗುತ್ತದೆ. ಆದರೆ ಕಾಲೇಜಿನಲ್ಲಿ ಯಾವುದೇ ಪರೀಕ್ಷೆ ಇರುವುದಿಲ್ಲ ಎಂದಿದ್ದಾರೆ.
ಮಧ್ಯ ಪ್ರದೇಶದ ಶಾಲಾ ಶಿಕ್ಷಣ ಇಲಾಖೆ ಈಗಾಗಲೇ 9 ಮತ್ತು 11ನೇ ತರಗತಿಯ ಅಂತಿಮ ಪರೀಕ್ಷೆಗಳನ್ನು ಇದಾಗಲೇ ರದ್ದುಗೊಳಿಸಿದೆ. ಕರ್ನಾಟಕದಲ್ಲಿ 10ನೇ ತರಗತಿಯ ಪರೀಕ್ಷೆಗಳನ್ನು ರದ್ದು ಮಾಡಬೇಕೇ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳಲು ಸರ್ಕಾರ ಗೊಂದಲದಲ್ಲಿ ಸಿಲುಕಿದ್ದು, ಇಲ್ಲಿಯೂ ಈ ರೀತಿ ಓಪನ್​ ಬುಕ್​ ಎಕ್ಸಾಂ ಬಂದರೆ ಅಚ್ಚರಿ ಇಲ್ಲ.
ಪತ್ನಿಯ ವಾಟ್ಸ್​ಆ್ಯಪ್​ನಲ್ಲಿ ಪ್ರಿಯಕರನ ಮೆಸೇಜ್​ ನೋಡಿ ದಂಗಾಗಿದ್ದೇನೆ- ವಿಚ್ಛೇದನಕ್ಕೆ ಇದು ಆಧಾರವಾಗಬಹುದಾ?

ಶುರುವಾಯ್ತು ರಸಗೊಬ್ಬರ ಫೈಟ್​: ಸಿದ್ದರಾಮಯ್ಯ ಟ್ವೀಟ್​ಗೆ ಸಚಿವರು ಗರಂ ಗರಂ…

ಸರ್ಪದೋಷ ಪರಿಹಾರಕ್ಕಾಗಿ ಹೆತ್ತ ಹಸುಗೂಸಿನ ಗಂಟಲು ಸೀಳಿದ ಮಹಿಳೆ ಸಂತೋಷದಿಂದ ಕುಣಿದಾಡಿದಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
