ಬ್ರಿಟನ್‌:ಈ ಜಗತ್ತಿನಲ್ಲಿ ಎಂತೆಂಥ ಚಿತ್ರ ವಿಚಿತ್ರ ವ್ಯಕ್ತಿಗಳು ಕಾಣಸಿಗುತ್ತಾರೆ. ಕೆಲವರು ಸಮಸ್ಯೆಯೇ ಇಲ್ಲದಿದ್ದರೂ ಗೋಳೋ ಎನ್ನುತ್ತಿದ್ದರೆ, ಇನ್ನು ಕೆಲವರು ಪ್ರಾಣ ಹೋಗುತ್ತಿದೆ ಎನ್ನುವ ಸಂದರ್ಭ ಬಂದರೂ ನಗುಮೊಗದಿಂದಲೇ ಇರುತ್ತಾರೆ.
ಎರಡನೆಯ ಸಾಲಿಗೆ ಸೇರಿದ ಅಪೂರ್ವ ವ್ಯಕ್ತಿ ಇದೀಗ ಪ್ರಪಂಚದಾದ್ಯಂತ ಸುದ್ದಿಯಾಗಿದ್ದಾನೆ. ಈತನ ಹೆಸರು ಶ್ಯಾನಿ. 30 ವರ್ಷದ ಬ್ರಿಟನ್‌ನ ಈ ವ್ಯಕ್ತಿಗೆ ಬ್ರೇನ್‌ ಟ್ಯೂಮರ್‌ ಆಗಿತ್ತು. ಅದನ್ನು ತೆಗೆಯುವ ಸಲುವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಅದೆಂಥ ದೊಡ್ಡ ಚಿಕಿತ್ಸೆ ಎಂದು ಎಲ್ಲರಿಗೂ ತಿಳಿದದ್ದೇ.
ಭಾರಿ ನೋವಾಗುವ ಕಾರಣದಿಂದಾಗಿ ವೈದ್ಯರು ಆಪರೇಷನ್​ ಮಾಡುವ ವೇಳೆಯಲ್ಲಿ ರೋಗಿಗೆ ಅರವಳಿಕೆ ಚುಚ್ಚುಮದ್ದು ನೀಡುತ್ತಾರೆ. ರೋಗಿಗೆ ನೋವು ಉಂಟಾಗಬಾರದು ಹಾಗೂ ವಿಪರೀತ ರಕ್ತಸ್ರಾವ ಕಾಣಿಸಬಾರದು ಎನ್ನುವ ಕಾರಣಕ್ಕೆ ಹೀಗೆ ಮಾಡಲಾಗುತ್ತದೆ.
ಆದರೆ ಶ್ಯಾನಿಯ ಮೆದುಳಿನಲ್ಲಿದ್ದ ಗಡ್ಡೆಯನ್ನು ತೆಗೆಯುವಾಗ ಆತ ಜೋಕ್‌ ಮಾಡುತ್ತಿದ್ದು, ವೈದ್ಯರೇ ಅಚ್ಚರಿಗೊಂಡಿದ್ದಾರೆ. ಆಪರೇಷನ್​ ವೇಳೆಯಲ್ಲಿ ಮೆದುಳಿಗೆ ಯಾವುದೇ ಹಾನಿಯಾಗಿಲ್ಲ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ವೈದ್ಯರು ಸಾಧ್ಯವಾದಷ್ಟು ಮಟ್ಟಿಗೆ ಎಚ್ಚರದಿಂದ ಇರುವಂತೆ ಹೇಳಿದ್ದರು. ಆತ ಅದಕ್ಕೆ ಒಪ್ಪಿಗೆ ಸೂಚಿಸಿದ ಮೇಲೆ ಅರವಳಿಕೆ ನೀಡಿರಲಿಲ್ಲ. ಅದೇ ಧೈರ್ಯದ ಮೇಲೆ ಶ್ಯಾನಿಯ ಶಸ್ತ್ರಚಿಕತ್ಸೆಗೆ ವೈದ್ಯರು ಮುಂದಾಗಿದ್ದಾರೆ. ತಲೆಬುರುಡೆಯನ್ನು ತೆರೆದಿದ್ದರೂ ಶ್ಯಾನಿ ಜೋಕ್‌ ಮಾಡುತ್ತಲೇ ಇದ್ದನಂತೆ. ನಂತರ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಇಂಥವರನ್ನು ಇದೇ ಮೊದಲು ನೋಡಿರುವುದು ಎಂದು ಶಸ್ತ್ರಚಿಕಿತ್ಸೆ ಮಾಡಿರುವ ನ್ಯಾಟಿಂಗ್ಯಾಮ್​ನ ಕ್ವೀನ್ಸ್ ಮೆಡಿಕಲ್ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಬಳ್ಳಾರಿಯ ವಿಮ್ಸ್‌ನಲ್ಲಿ ಶುಶ್ರೂಷಾಧಿಕಾರಿಗಳ ನೇಮಕ- 188 ಹುದ್ದೆಗಳಿಗೆ ಆಹ್ವಾನ

ದುಬೈ ಟು ಮುಂಬೈ- 18 ಸಾವಿರ ರೂಪಾಯಿಯಲ್ಲಿ ರೋಚಕ ಅನುಭವ: ಒಂಟಿ ಪ್ರಯಾಣಿಕನಿಗಾಗಿ ಉರಿದದ್ದು 17 ಟನ್ ಇಂಧನ!

ಪುಲ್ವಾಮಾ ಹುತಾತ್ಮ ಪತಿಯ ಶವದ ಎದುರೇ ಪಣತೊಟ್ಟಿದ್ದ ನವವಿವಾಹಿತೆ: ಇಂದು ಸೇನೆಯ ಲೆಫ್ಟಿನೆಂಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 3 =
Remember me
