ತ್ರಿಶೂರ್ (ಕೇರಳ):ಕದ್ದ ವಾಹನಗಳು, ಸರಿಯಾದ ದಾಖಲೆಗಳು ಇಲ್ಲದ ವಾಹನಗಳು ಅಥವಾ ಇನ್ನಾವುದೋ ಕಾರಣಕ್ಕೆ ಮಾಲೀಕರು ತೆಗೆದುಕೊಂಡು ಹೋಗದ ವಾಹನಗಳು ಪೊಲೀಸ್​ ಠಾಣೆಗಳಲ್ಲಿ ವರ್ಷಗಟ್ಟಲೆ ಹಾಗೇ ತುಕ್ಕುಹಿಡಿಯುತ್ತ ಬಿದ್ದಿರುವುದು ಮಾಮೂಲಾಗಿದೆ.
ಪೊಲೀಸರು ಜಪ್ತಿ ಮಾಡುವ ವಾಹನಗಳತ್ತ ಎಷ್ಟೋ ವರ್ಷ ಮಾಲೀಕರು ತಲೆಎತ್ತಿಯೂ ನೋಡುವುದಿಲ್ಲ. ಇವುಗಳನ್ನು ಇಂತಿಷ್ಟು ವರ್ಷಗಳಲ್ಲಿ ಹರಾಜು ಮಾಡಲು ಪೊಲೀಸ್ ಇಲಾಖೆಗೆ ಅನುಮತಿ ಇದ್ದರೂ, ಹಾಗೆ ಮಾಡುವುದರಲ್ಲಿ ಸಾಕಷ್ಟು ಕಾನೂನು ಸಮಸ್ಯೆಗಳಿವೆ. ಈ ವಾಹನಗಳಿಗೆ ಹೆಚ್ಚು ಖರೀದಿದಾರರೂ ಇರುವುದಿಲ್ಲ. ಅದೇ ಕಾರಣಕ್ಕೆ ವಾಹನಗಳು ಪೊಲೀಸ್​ ಠಾಣೆ ಆವರಣದಲ್ಲಿಯೇ ತುಕ್ಕುಹಿಡಿಯುತ್ತಾ ಬಿದ್ದಿರುತ್ತವೆ.
ಇದು ಬಹುತೆಕ ಎಲ್ಲಾ ಪೊಲೀಸ್​ ಠಾಣೆಗಳಲ್ಲಿ ಮಾಮೂಲು ದೃಶ್ಯವಾಗಿದೆ. 2019ರ ವರದಿಯ ಪ್ರಕಾರ, ಕೇರಳ ರಾಜ್ಯದ ಪೊಲೀಸ್ ಠಾಣೆಗಳಲ್ಲಿ 40 ಸಾವಿಕ್ಕೂ ಹೆಚ್ಚು ವಾಹನಗಳು ತುಕ್ಕು ಹಿಡಿಯುತ್ತಿವೆ.
ಹೀಗೆ ತುಕ್ಕು ಹಿಡಿಯುತ್ತ ಬಿದ್ದಿರುವುದನ್ನು ನೋಡಲಾಗದ ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೊಲೀಸರು ಅದನ್ನೇ ಸದ್ಬಳಕೆ ಮಾಡಿಕೊಳ್ಳುವ ಯೋಚನೆ ಮಾಡಿದರು. ಅದರ ಪ್ರಯತ್ನವಾಗಿ ಇದೀಗ ಸಾವಯವ ಕೃಷಿ ಶುರು ಮಾಡಿದ್ದಾರೆ!
ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್, ರಘು ಮತ್ತು ಅನಿಲ್ ಅವರೊಂದಿಗೆ ಕೃಷಿಕರೂ ಆಗಿರುವ ಸಿವಿಲ್ ಪೊಲೀಸ್ ಅಧಿಕಾರಿ ರಂಗರಾಜ್ ಕೃಷಿಯನ್ನು ನೋಡಿಕೊಳ್ಳುತ್ತಾರೆ. ಇದು ಸಂಪೂರ್ಣ ಯಶಸ್ವಿಯಾಗಿದ್ದು, ಮೊದಲ ಬೆಳೆಯ ಕಟಾವು ಕೂಡ ಆಗಿದೆ.
‘ಹೆಚ್ಚಾಗಿ ಮಿನಿ ಲಾರಿಗಳಲ್ಲಿ ಸಾವಯವ ಬೆಳೆಗಳನ್ನು ಬೆಳೆಯುತ್ತಿದ್ದೇವೆ. ಮರಳು ಮತ್ತು ಮಣ್ಣಿನ ಕಳ್ಳಸಾಗಣೆ ಮಾಡುವ ಲಾರಿಗಳನ್ನು ಸಾಕಷ್ಟು ಹಿಡಿದಿರುತ್ತೇವೆ. ಆದರೆ ಅವುಗಳೆಲ್ಲ ಕೆಲವು ಕಾರಣಗಳಿಂದ ಹರಾಜು ಆಗದೇ ಠಾಣೆಯಲ್ಲಿಯೇ ತುಕ್ಕುಹಿಡಿಯುತ್ತ ಕುಳಿತುಕೊಳ್ಳುತ್ತಿವೆ. ಇದನ್ನು ಮನಗಂಡು ಏನಾದರೊಂದು ಹೊಸ ಪ್ರಯೋಗ ಮಾಡೋಣ ಎಂದುಕೊಂಡು ಸಾವಯವ ಕೃಷಿ ಶುರು ಮಾಡಿದ್ದೇವೆ. ಅದರ ಫಲವಾಗಿ ಕೆಲವೊಂದು ತರಕಾರಿಗಳ ಮೊದಲ ಕಟಾವು ಕೂಡ ನಡೆದಿದೆ’ ಎನ್ನುತ್ತಾರೆ ಪೊಲೀಸ್ ಅಧಿಕಾರಿ ಸಿಂಪ್ಸನ್ ಪಿಟಿ.
ಇದನ್ನೂ ಓದಿ:ವಿಮಾ ಹಣ ಪಡೆಯಲು ಕೈಯನ್ನೇ ತುಂಡರಿಸಿಕೊಂಡಳು! ಆದರೆ ಆದದ್ದೇ ಬೇರೆ…
ಇದರ ಯಶಸ್ಸಿನ ಬೆನ್ನಲ್ಲೇ ಇದೀಗ ಎಲ್ಲಾ ವಾಹನಗಳನ್ನು ಬಳಸಿ ಕೃಷಿ ಕಾರ್ಯಕ್ಕೆ ಪೊಲೀಸರು ಮುಂದಾಗಿದ್ದಾರೆ. ಕಳ್ಳಸಾಗಣೆ ವಾಹನಗಳನ್ನು ಜಪ್ತು ಮಾಡಿದಾಗ ಅದರ ಮಾಲೀಕರು ಅದನ್ನು ಎಂದಿಗೂ ಪಡೆಯಲು ಬಯಸುವುದಿಲ್ಲ, ಅಪಘಾತವಾಗಿರುವ ವಾಹನಗಳ ವಿಷಯದಲ್ಲಿ, ನ್ಯಾಯಾಲಯದ ಆದೇಶದ ನಂತರವೂ ಅವುಗಳನ್ನು ಮಾಲೀಕರು ಹಿಂದಕ್ಕೆ ಪಡೆಯಲು ಬರುವುದಿಲ್ಲ. ಏಕೆಂದರೆ ಅವರು ಅಪಘಾತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕಾರಣ, ಆ ವಾಹನವೇ ಬೇಡ ಎನ್ನುತ್ತಾರೆ. ಇನ್ನು ಕೆಲವು ಕೇಸ್​ಗಳಲ್ಲಿ ತೀರ್ಪು ಬರಲು ಬಹಳ ವರ್ಷವಾಗುವ ಕಾರಣ, ಅಲ್ಲಿಯವರೆಗೆ ವಾಹನಗಳು ಠಾಣೆಯಲ್ಲಿಯೇ ತುಕ್ಕು ಹಿಡಿಯುತ್ತ ಕುಳಿತುಬಿಡುತ್ತವೆ. ತೀರ್ಪು ಬರುವ ಹೊತ್ತಿಗೆ ಅವು ಸಂಪೂರ್ಣ ನಿಷ್ಪ್ರಯೋಜನವಾಗಿರುತ್ತವೆ. ಆ ಸಮಯದಲ್ಲಿ ತೀರ್ಪು ತಮ್ಮ ಕಡೆ ಬಂದರೂ ವಾಹನ ಮಾಲೀಕರು ಅದನ್ನು ವಾಪಸ್​ ಪಡೆಯುವುದಿಲ್ಲ. ಈ ಎಲ್ಲಾ ವಾಹನಗಳನ್ನು ನಾವೀಗ ಸಾವಯವ ಕೃಷಿಗಾಗಿ ತೊಡಗಿಸಿಕೊಂಡಿದ್ದೆವೆ ಎನ್ನುತ್ತಾರೆ ಪೊಲೀಸರು.
ಮುಟ್ಟುಗೋಲು ಹಾಕಿಕೊಂಡ ವಾಹನಗಳನ್ನು ಪೊಲೀಸ್ ಠಾಣೆಗಳಿಂದ ತೆರವುಗೊಳಿಸುವಂತೆ 2018 ರಲ್ಲಿ ಪೊಲೀಸ್ ಮಹಾನಿರ್ದೇಶಕ ಲೋಕನಾಥ್ ಬೆಹೆರಾ ಎಲ್ಲಾ ಎಸ್‌ಎಚ್‌ಒಗಳಿಗೆ ನಿರ್ದೇಶನ ನೀಡಿದ್ದರು, ಆದರೆ ಅದು ಯಶಸ್ವಿಯಾಗಲಿಲ್ಲ. ಕೆಲವು ಕಡೆಗಳಲ್ಲಿ ಹೀಗೆ ವರ್ಷಾನುಗಟ್ಟಲೆ ನಿಲ್ಲಿಸುವ ವಾಹನಗಳಲ್ಲಿ ಅಕ್ರಮ ಚಟುವಟಿಕೆಗಳೂ ನಡೆಯುತ್ತಿರುವ ಆತಂಕಕಾರಿ ವಿಷಯ ಪೊಲೀಸರಿಗೆ ತಿಳಿದುಬಂದಿತ್ತು. ಇವೆಲ್ಲವುಗಳಿಗೆ ಇದೀಗ ಫುಲ್​ಸ್ಟಾಪ್​ ಬಿದ್ದಿದೆ ಎನ್ನುತ್ತಾರೆ ಪೊಲೀಸ್​ ಅಧಿಕಾರಿಗಳು.
ಕಿತ್ತಳೆ ಬಣ್ಣಕ್ಕೆ ತಿರುಗಿದೆ ಅಮೆರಿಕದ ಆಗಸ: ಹಗಲಲ್ಲೂ ಕತ್ತಲು! ಒಬಾಮಾ ಆತಂಕ

ಕೇವಲ 58 ಮತದಾರರ ಕಷ್ಟಸುಖ ಅರಿಯಲು 24 ಕಿ.ಮೀ ನಡೆದ ಸಿಎಂ ಯಾರು ಗೊತ್ತಾ?

https://www.vijayavani.net/s-sonia-rahul-to-americak-for-health-checkup/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eleven − five =
Remember me
