ಕವಾರ್ಡ (ಛತ್ತೀಸಗಢ):14 ವರ್ಷದ ಬಾಲಕಿಯೊಬ್ಬಳು ಮಾಡಿದ ಎಡವಟ್ಟಿನಿಂದಾಗಿ ಪೊಲೀಸರ ಅಮೂಲ್ಯ ಸಮಯ ವ್ಯರ್ಥವಾಗಿದ್ದೂ ಅಲ್ಲದೇ, ಬಾಲಕಿಯ ಪಾಲಕರು ಸಮಾಜದ ಮುಂದೆ ತಲೆತಗ್ಗಿಸುವಂಥ ಘಟನೆ ಛತ್ತೀಸಗಢದ ಕವಾರ್ಡ ಎಂಬಲ್ಲಿ ನಡೆದಿದೆ.
ರಾತ್ರಿ ಲೇಟಾಗಿ ಮನೆಗೆ ಬಂದಿದ್ದ ಬಾಲಕಿಯನ್ನು ಪಾಲಕರು ಪ್ರಶ್ನಿಸಿದಾಗ, ಜೋರಾಗಿ ಅತ್ತು, ಇನ್ನೇನು ಆತ್ಮಹತ್ಯೆಯೊಂದೇ ತನಗಿರುವ ದಾರಿ ಎಂಬಂತೆ ಬಾಲಕಿ ಉತ್ತರಿಸಿದ್ದಳು. ನಾನು ಮನೆಗೆ ಬರುತ್ತಿರುವ ಸಮಯದಲ್ಲಿ ಒಂದಿಷ್ಟು ಮಂದಿ ನನ್ನನ್ನು ಎತ್ತಿಕೊಂಡು ಹೋಗಿ ಗ್ಯಾಂಗ್​ರೇಪ್​ ಮಾಡಿದ್ರು ಎಂದು ಜೋರಾಗಿ ಅಳತೊಡಗಿದಳು.
ಈ ಘಟನೆ ನಡೆದದ್ದು ನವೆಂಬರ್ 22ರಂದು. ಸ್ನೇಹಿತೆಯರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಹೋಗಿದ್ದಳು ಬಾಲಕಿ. ರಾತ್ರಿ 11 ಗಂಟೆಯಾದರೂ ಮನೆಗೆ ಬರಲಿಲ್ಲ. ಎಲ್ಲೆಡೆ ಹುಡುಕಾಡಿದ ಪಾಲಕರು ಹೆದರಿ ರಾತ್ರಿ 11.30ಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮನೆಗೆ ಬರುವಷ್ಟರಲ್ಲಿ ಬಾಲಕಿ ಬಂದಿದ್ದಳು.
ಇದನ್ನೂ ಓದಿ:ಮಿನಿ ಧರಿಸಿ, ಕೆಳಕ್ಕೆ ಬಗ್ಗಿ ‘ಸೆಕ್ಸಿ ಶಾಪಿಂಗ್’ ಮಾಡೋ​ ಟಿಪ್ಸ್​ ಕೊಟ್ಟಾಕೆ ಸಿಲುಕಿದಳು ಪೇಚಿಗೆ!
ಗಾಬರಿಯಿಂದ ಪಾಲಕರು ಇಷ್ಟು ತಡರಾತ್ರಿ ಏಕಾಯಿತೆಂದು ಕೇಳಿದಾಗ ಗ್ಯಾಂಗ್​ರೇಪ್​ ಆಗಿರುವುದಾಗಿ ಹೇಳಿದಳು. ಅವಳನ್ನು ಗಮನಿಸಿದಾಗಲೂ ಅಸ್ತವ್ಯಸ್ತವಾಗಿದ್ದರಿಂದ ಪಾಲಕರು ಗಾಬರಿಗೊಂಡರು.
ಮಗಳು ವಾಪಸ್​ ಆಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿ ಗ್ಯಾಂಗ್​ರೇಪ್​ ಆಗಿರುವ ಬಗ್ಗೆ ಹೇಳಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪೊಲೀಸರು ಏಳು ತಂಡಗಳನ್ನು ರಚಿಸಿ ತನಿಖೆ ಕೈಗೊಂಡರು. ಆಕೆ ಹೋಗಿದ್ದೇನೆ ಎಂದಿದ್ದ ಸ್ನೇಹಿತೆಯರನ್ನೆಲ್ಲಾ ವಿಚಾರಿಸಿದಾಗ, ಅವಳು ತಮ್ಮಲ್ಲಿ ಬಂದಿಲ್ಲ ಎಂದು ಹೇಳಿದರು.
ಇದರಿಂದ ಪೊಲೀಸರಿಗೆ ಅನುಮಾನ ಹುಟ್ಟಿತು. ಇನ್ನಷ್ಟು ತನಿಖೆ ನಡೆಸಿದಾಗ ಬಾಲಕಿಯ ಸ್ನೇಹಿತ ಸಿಕ್ಕಿಬಿದ್ದ. ಅವನಿಗೆ ವಿಷಯವನ್ನು ಕೇಳಿದಾಗ ತೊದಲುತ್ತಾ ಉತ್ತರ ಕೊಟ್ಟಿದ್ದನ್ನು ಕಂಡು ಪೊಲೀಸರಿಗೆ ಇನ್ನಷ್ಟು ಸಂದೇಹ ಬಂದು ವಿಚಾರಿಸಿದರು.
ನಂತರ ಆತ ಹೇಳಿದ್ದನ್ನು ಕೇಳಿ ಪೊಲೀಸರೇ ಸುಸ್ತಾದರು. ಅಷ್ಟಕ್ಕೂ ಆಗಿದ್ದೇನೆಂದರೆ, ಬಾಲಕಿ ನಿಜವಾಗಿಯೂ ಹೋಗಿದ್ದು ಸ್ನೇಹಿತೆಯನ್ನು ಭೇಟಿಯಾಗುವುದಕ್ಕೆ ಅಲ್ಲ, ಬದಲಿಗೆ ಈ ಸ್ನೇಹಿತನನ್ನು ಸಿಗಲು. ತಡ ರಾತ್ರಿಯವರೆಗೆ ಅವನ ಜತೆಯೇ ಇದ್ದು, ಬೇಡದ್ದನ್ನೆಲ್ಲವನ್ನೂ ಮಾಡುವಷ್ಟದಲ್ಲಿ 11 ಗಂಟೆಯಾಗಿಬಿಟ್ಟಿದೆ. ಲೇಟಾಗಿದ್ದಕ್ಕೆ ಪಾಲಕರಿಗೆ ಏನು ಹೇಳಬೇಕು ಎಂದು ತಿಳಿಯದೇ ಗ್ಯಾಂಗ್​ರೇಪ್​ ಆಗಿದೆ ಎಂದು ಸುಳ್ಳು ಹೇಳಿದ್ದಾಳೆ.
ಮರ್ಯಾದೆಗೆ ಅಂಜಿ ಪೊಲೀಸ್​ ಕಂಪ್ಲೇಂಟ್​ ಕೊಡುವುದಿಲ್ಲ ಎನ್ನುವುದು ಅವಳ ಅನಿಸಿಕೆಯಾಗಿತ್ತೋ ಏನೋ. ಸ್ನೇಹಿತನ ಜತೆ ಲೈಂಗಿಕ ಕ್ರಿಯೆಯಲ್ಲಿಯೂ ತೊಡಗಿದ್ದರಿಂದ ಗ್ಯಾಂಗ್​ರೇಪ್​ ಆಗಿದ್ದು ಹೌದು ಎಂದು ಸಾಬೀತು ಆಗುತ್ತದೆ ಎಂದುಕೊಂಡಿದ್ದಳೋ ಏನೋ… ಒಟ್ಟಿನಲ್ಲಿ ಸ್ನೇಹಿತ ನಿಜ ಬಾಯಿಬಿಟ್ಟಿದ್ದ.
ವಿಷಯ ತಿಳಿದ ಪಾಲಕರಿಗೂ ತಲೆಸುತ್ತುಬಂದಂತಾಗಿದೆ. ಒಟ್ಟಿನಲ್ಲಿ ಯುವಕನ ವಿರುದ್ಧ ಈಗ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆ ಜತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಯುವಕನನ್ನು ಬಂಧಿಸಲಾಗಿದೆ.
ಕಚೇರಿಯಲ್ಲಿಯೇ ಕಿಸ್​ ಕೊಟ್ಟು ಕೆಲಸ ಕಳೆದುಕೊಂಡ ಕೊಪ್ಪಳ ತಹಶೀಲ್ದಾರ್​!

ರೇಪ್​ ಮಾಡಿದ್ರೆ ಪುರುಷತ್ವವೇ ಹರಣ- ಪಾಕ್​ ಸಚಿವಸಂಪುಟದಿಂದ ಗ್ರೀನ್​ ಸಿಗ್ನಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 − nine =
Remember me
