ಕೊಚ್ಚಿ (ಕೇರಳ): ಮದುವೆಯಾಗುವುದಾಗಿ ಮಹಿಳೆಯೊಬ್ಬಳ ಜತೆ ಸಂಬಂಧ ಬೆಳೆಸಿದ ವ್ಯಕ್ತಿಯೊಬ್ಬ ನಂತರ ಆಕೆಯ ಕಿಡ್ನಿಯನ್ನು ಮಾರಿ ಎಂಟು ಲಕ್ಷ ರೂಪಾಯಿಗಳ ಜತೆ ಪರಾರಿಯಾಗಿರುವ ಭಯಾನಕ ಘಟನೆ ಕೊಚ್ಚಿಯಲ್ಲಿ ನಡೆದಿದೆ.
ಕೆಲ ವರ್ಷಗಳಿಂದ ಲಿವ್‌ ಇನ್‌ ರಿಲೇಷನ್‌ಶಿಪ್‌ನಲ್ಲಿ ಇದ್ದ ವ್ಯಕ್ತಿ ವಂಚಿಸಿ ಬಲವಂತವಾಗಿ ತಮ್ಮ ಮೂತ್ರಪಿಂಡವನ್ನು ಮಾರಾಟ ಮಾಡಿರುವುದಾಗಿ ಮಹಿಳೆ ಈಗ ದೂರಿದ್ದಾರೆ. ಸದ್ಯ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿ ಮೊಹಮ್ಮದ್ ರನೀಶ್ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ.
43 ವರ್ಷದ ಮಹಿಳೆ ಸೋಫಿಯಾ, ಮೊಹಮ್ಮದ್​ ಜತೆ ವರ್ಷದಿಂದ ಲಿವ್​ ಇನ್​ ರಿಲೇಷನ್​ನಲ್ಲಿ ಇದ್ದರು. ಹಣದ ಸಮಸ್ಯೆ ಇದ್ದ ಕಾರಣ, ಅದನ್ನು ಕೊನೆಗಾಣಿಸಲು ಕಿಡ್ನಿ ಮಾರಲು ಸೋಫಿಯಾರನ್ನು ಈತ ಒಪ್ಪಿಸಿದ್ದಾನೆ. ನಾಲ್ಕನೆಯ ತರಗತಿಯವರೆಗೆ ಮಾತ್ರ ಕಲಿತಿರುವ ಸೋಫಿಯಾಳದಿಂದ ಯಾವ್ಯಾವುದೋ ದಾಖಲೆಗಳಿಗೆ ಆತ ಸಹಿ ಹಾಕಿಸಿಕೊಂಡಿದ್ದಾನೆ. ಸ್ವ ಇಚ್ಛೆಯಿಂದ ಮೂತ್ರಪಿಂಡ ದಾನ ಮಾಡುತ್ತಿರುವುದಾಗಿ ಒಪ್ಪಿಗೆ ಸೂಚಿಸುವ ದಾಖಲೆ ಅದಾಗಿವೆ. ನಂತರ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿ ತೆಗೆಸಿರುವ ಆತ, ಅದನ್ನು ಎಂಟು ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾನೆ.
ಸಿಕ್ಕ ಹಣವನ್ನು ತನ್ನ ಬ್ಯಾಂಕ್ ಖಾತೆಗೆ ಈಕೆಯಿಂದ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಆತ ಎಲ್ಲಿಯೂ ಸಿಗದಾಗ ಮಹಿಳೆಗೆ ತಾನು ಮೋಸ ಹೋಗಿರುವುದು ತಿಳಿದಿದ್ದು, ಈಗ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ರಾತ್ರಿ ಓಡಾಡುವವರು ವೇಶ್ಯೆಯರು, ರೇಪ್​ಗೆ​ ಅರ್ಹರು ಎಂದು ಭೀಕರ ಕೊಲೆ ಸಮರ್ಥಿಸಿಕೊಂಡ ಪಾದ್ರಿ!

VIDEO: ಜೋಕಾಲಿ ಆಡುವಾಗ ಅವಘಡ: 6,300 ಅಡಿ ಕೆಳಕ್ಕೆ ಬಿದ್ದ ಮಹಿಳೆಯರು- ವಿಡಿಯೋ ವೈರಲ್​

ಹೀಗೊಂದು ಭಯಾನಕ ಆದೇಶ: ಪಾಕ್​ಗೆ ರವಾನಿಸಲು ಹೆಣ್ಣುಮಕ್ಕಳ, ವಿಧವೆಯರ ಪಟ್ಟಿ ಮಾಡಲು ಸೂಚನೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 10 =
Remember me
