ನವದೆಹಲಿ:ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್‌ ಗಲಾಟೆ ಮಿಂಚಿನ ವೇಗದಲ್ಲಿ ಪಾಕಿಸ್ತಾನವನ್ನೂ ತಲುಪಿಬಿಟ್ಟಿದೆ. ಪಾಕಿಗಳೂ ಭಾರತದ ಬಗ್ಗೆ ಮಾತನಾಡಿ, ಇಲ್ಲಿಯವರೆಗೆ ಬುದ್ಧಿ ಹೇಳುತ್ತಿರುವುದು ಹಲವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಹಿಜಾಬ್‌ ವಿವಾದ ಸೃಷ್ಟಿ ಮಾಡಿದ್ದು ಯಾರು, ಹೇಗೆ ಎಂಬ ಬಗ್ಗೆ ಆರೋ‍ಪ, ಪ್ರತ್ಯಾರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಪಾಕಿಸ್ತಾನದಿಂದಲೂ ಈ ಬಗ್ಗೆ ಮಾತುಗಳು ಕೇಳಿಬರುತ್ತಿರುವುದು ಇನ್ನಿಲ್ಲದ ಅನುಮಾನಗಳನ್ನು ಹುಟ್ಟಿಹಾಕಿವೆ.
ಈ ನಡುವೆಯೇ, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ ಖಾನ್‌ ಹೇಳಿಕೆಯೊಂದನ್ನು ನೀಡಿದ್ದರು. ಕಾಲೇಜುಗಳು ನಮಗೆ ಶಿಕ್ಷಣ ಮತ್ತು ಹಿಜಾಬ್ ನಡುವಿನ ಆಯ್ಕೆಯನ್ನು ಹೇರುತ್ತಿವೆ. ಹೆಣ್ಣು ಮಕ್ಕಳನ್ನು ಅವರ ಹಿಜಾಬ್ ಕಾರಣಕ್ಕಾಗಿ ಶಾಲೆಗೆ ಪ್ರವೇಶ ನೀಡದೇ ಇರುವುದು ಅತ್ಯಂತ ಭೀಕರ. ಕಡಿಮೆ ಅಥವಾ ಹೆಚ್ಚು ಬಟ್ಟೆ ಧರಿಸುವುದಕ್ಕಾಗಿ ಮಹಿಳೆಯರನ್ನು ಟೀಕಿಸುವ ಸಂಪ್ರದಾಯ ಮುಂದುವರೆದಿದೆ. ಮುಸ್ಲಿಂ ಮಹಿಳೆಯರನ್ನು ಅಲ್ಪವಾಗಿ ಕಾಣುವ ನೀತಿಯನ್ನು ಭಾರತೀಯ ನಾಯಕರು ನಿಲ್ಲಿಸಬೇಕು ಎಂದು ಅವರು ಟ್ವೀಟ್‌ ಮಾಡಿದ್ದರು. ಇವರಷ್ಟೇ ಅಲ್ಲದೇ, ಪಾಕಿಸ್ತಾನದ ಮಾಹಿತಿ ಇಲಾಖೆ ಸಚಿವರಾಗಿರುವ ಫಾವದ್​ ಚೌಧರಿ ಮತ್ತು ವಿದೇಶಾಂಗ ಇಲಾಖೆ ಸಚಿವ ಷಾ ಮೊಹಮ್ಮದ್​ ಖುರೇಷಿ ಟ್ವೀಟ್ ಮಾಡಿ, ಕರ್ನಾಟಕದ ಈ ಬೆಳವಣಿಗೆ ಬಗ್ಗೆ ಭಾರಿ ಅಸಮಾಧಾನ ಹೊರಹಾಕಿದ್ದರು. ಭಾರತದಲ್ಲಿ ಮುಸ್ಲಿಮರು ಸೇಫಲ್ಲ ಎಂಬ ಅರ್ಥದಲ್ಲಿ ಟ್ವೀಟ್‌ ಮಾಡಿದ್ದರು.
ಈ ಬಗ್ಗೆ ಅಚ್ಚರಿಯ ಬೆಳವಣಿಗೆಯಲ್ಲಿ, ಸಂಸದ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಇವರೆಲ್ಲರ ವಿರುದ್ಧ ಕಿಡಿಕಾರಿದ್ದಾರೆ. ಈ ಪಾಕಿಸ್ತಾನ ನರಕಕ್ಕೆ ಹೋಗಲಿ ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿದ ಅಸಾದುದ್ದೀನ್ ಓವೈಸಿ ಮಾತನಾಡಿ, ಕರ್ನಾಟಕದಲ್ಲಿ ಭುಗಿಲೆದ್ದಿರುವ ಹಿಜಾಬ್‌ ಗಲಾಟೆಯ ಮಧ್ಯೆ ಪಾಕಿಸ್ತಾನ ಮೂಗು ತೂರಿಸುವುದನ್ನು ನಿಲ್ಲಿಸಲಿ ಎಂದಿದ್ದಾರೆ. ಮಲಾಲಾ ಮೇಲೆ ದಾಳಿಯಾದದ್ದು ಪಾಕಿಸ್ತಾನದಲ್ಲಿಯೇ, ಅದಕ್ಕಾಗಿಯೇ ಅವರು ಪಾಕಿಸ್ತಾನ ಬಿಡಬೇಕಾಯಿತು. ನಮ್ಮ ದೇಶದಲ್ಲಿ ನಮ್ಮ ಹೆಣ್ಣುಮಕ್ಕಳು ಇಲ್ಲಿಯೇ ಧೈರ್ಯವಾಗಿ ಶಿಕ್ಷಣ ಕಲಿಯುತ್ತಿದ್ದಾರೆ. ಆ ದೇಶದಲ್ಲಿ ಮುಸ್ಲಿಮೇತರರು ಪ್ರಧಾನಿಯಾಗಲು ಸಂವಿಧಾನದಲ್ಲಿ ಅವಕಾಶವನ್ನೇ ಕೊಟ್ಟಿಲ್ಲ. ಇಷ್ಟೆಲ್ಲ ಸಮಸ್ಯೆಗಳು ಇವೆ. ಭಾರತದ ಬಗ್ಗೆ ಮಾತನಾಡಲು ಬರಬೇಡಿ ಎಂದು ಕಿಡಿ ಕಾರಿದ್ದಾರೆ.
ಪಾಕಿಸ್ತಾನ ನರಕಕ್ಕೆ ಹೋಗಲಿ. ನಾವ್ಯಾವತ್ತೂ ಜಿನ್ನಾ ಹೆಸರನ್ನು ಉಲ್ಲೇಖಿಸುವುದಿಲ್ಲ. ಮತ್ತೆ ನೀವ್ಯಾಕೆ ಭಾರತದ ಆಂತರಿಕ ವಿಚಾರಕ್ಕೆ ಮೂಗು ತೂರಿಸುತ್ತೀರಿ? ಮೊದಲು ನಿಮ್ಮ ಬಲೂಚಿಸ್ತಾನ ಪ್ರತಿಭಟನೆಯಂಥ ಇನ್ನೂ ಅನೇಕ ಜಂಜಾಟಗಳನ್ನು ಮೊದಲು ಸರಿಪಡಿಸಿಕೊಳ್ಳಿ. ಭಾರತದಲ್ಲಿ ಇರುವ ಆಂತರಿಕ ಸಮಸ್ಯೆಗಳನ್ನು ನಾವೆಲ್ಲ ಸೇರಿ ಸರಿಪಡಿಸುತ್ತೇವೆ ಎಂದಿದ್ದಾರೆ.
VIDEO: ಬುರ್ಕಾಧಾರಿ ಹಿಂದೆ ಹೋದ ಎಸ್‌ಪಿ ಕಾರ್ಯಕರ್ತ ಮಾಡಿದ್ದೇನು ನೋಡಿ! ಜಾಲತಾಣದಲ್ಲಿ ಆಕ್ರೋಶ

ಪಕ್ಕದ ಮನೆಯ ಮಹಿಳೆಯನ್ನು ಎಳೆದೊಯ್ದ ಪತಿ- ರೇಪ್‌ ಮಾಡುವಾಗ ವಿಡಿಯೋ ಮಾಡಿದ ಪತ್ನಿ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nineteen − 1 =
Remember me
