ಕ್ಯಾಲಿಫೋರ್ನಿಯಾ:ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು ರುದ್ರನರ್ತನ ಮಾಡುತ್ತಿದೆ. ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಲು ಇನ್ನಿಲ್ಲದ ಸಾಹಸ ಮಾಡುತ್ತಿದ್ದಾರೆ. ಇದರ ನಡುವೆಯೇ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಹೆಲಿಕಾಪ್ಟರ್​ ಒಳಗೆ ಏಕಾಏಕಿ ಗೂಬೆ ಕಾಣಿಸಿಕೊಂಡಿದ್ದು, ಅಲ್ಲಿಯ ಸಿಬ್ಬಂದಿಯನ್ನು ಚಕಿತಗೊಳಿಸಿರುವ ಘಟನೆ ನಡೆದಿದೆ.
ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದ ಹೆಲಿಕಾಪ್ಟರ್​ನಲ್ಲಿ ಇರುವ ಪೈಲಟ್​ಗೆ ಏಕಾಏಕಿ ಒಳಗಡೆ ಏನೋ ಶಬ್ದ ಬಂದಿದೆ. ಏನೆಂದು ಹುಡುಕಾಟ ನಡೆಸಿದಾಗ ಗೂಬೆಯೊಂದು ಬಂದು ಕುಳಿತಿರುವುದನ್ನು ನೋಡಿ ಚಕಿತರಾಗಿದ್ದಾರೆ.
ಈ ಗೂಬೆ ಹೆಲಿಕಾಪ್ಟರ್​ ಒಳಗೆ ಹೇಗೆ ಬಂತು ಎಂದು ತಮಗೆ ತಿಳಿದೇ ಇಲ್ಲ ಎನ್ನುತ್ತಾರೆ ಇಲ್ಲಿಯ ಸಿಬ್ಬಂದಿ. ಕಾಡಿನಲ್ಲಿ ಹಾರಾಟವಾಡುತ್ತಿದ್ದ ಇದು, ರಕ್ಷಣೆಗಾಗಿ ಬಂದು ಕುಳಿತಿರಬೇಕು. ಆರಂಭದಲ್ಲಿ ಗೊಂದಲದಿಂದ ಕೂಡಿದಂತೆ ಕಾಣಿಸಿತು. ಆದರೆ ನಾವ್ಯಾರೂ ಅದಕ್ಕೆ ತೊಂದರೆ ಕೊಡದ ಕಾರಣ, ನಿರಾತಂಕವಾಗಿ ಸ್ವಲ್ಪ ಹೊತ್ತು ಕುಳಿತು ನಂತರ ಹಾರಿಹೋಗಿದೆ ಎಂದರು.
ಇದನ್ನೂ ಓದಿ:ಶೂಟ್​ಔಟ್​ ಪ್ರಕರಣ: ಕೊನೆಗೂ ಬಂಧಿಯಾದ ಬಿಜೆಪಿ ಕಾರ್ಯಕರ್ತ
ಇನ್ನೂ ಅಚ್ಚರಿಯ ಸಂಗತಿ ಎಂದರೆ, ಸುಮ್ಮನೇ ಕುಳಿತಿದ್ದ ಗೂಬೆ, ಪೈಲಟ್​ ನೋಡಿದಾಗ ಅವರು ಕುಳಿತುಕೊಳ್ಳುವ ಕಾಕ್​ಪಿಟ್​ ಸುತ್ತಲೂ 3-4 ಬಾರಿ ಸುತ್ತಿ ಹೋಗಿದೆಯಂತೆ. ಇದು ನನಗೊಂದು ರೀತಿಯಲ್ಲಿ ಅದ್ಭುತ ಅನುಭವ ನೀಡಿತು ಎಂದು ಪೈಲಟ್​ ಹೇಳಿದ್ದಾರೆ. ಗೂಬೆ ಏಕಾಏಕಿ ಹೆಲಿಕಾಪ್ಟರ್​ ಒಳಗೆ ಬಂದು ಕೂತಿದೆ ಎಂದರೆ ಯಾರೂ ನಂಬುವುದಿಲ್ಲ ಎನ್ನುವ ಕಾರಣಕ್ಕೆ ಅದರ ಫೋಟೋ ತೆಗೆದಿದ್ದೇನೆ ಎಂದು ಪೈಲಟ್​ ಹೇಳಿ ಅದನ್ನು ಶೇರ್​ ಮಾಡಿದ್ದಾರೆ.
ಗೂಬೆ ಕಾಣಿಸುವುದು ಎಂದರೆ ಅದು ಶುಭಸೂಚಕ ಎಂದು ಹಲವು ಕಡೆಗಳಲ್ಲಿ ನಂಬಿಕೆ ಇದೆ. ಅದೇ ಕಾರಣಕ್ಕೆ ಪೈಲಟ್​ ಹಾಗೂ ರಕ್ಷಣಾ ಸಿಬ್ಬಂದಿಗೆ ಆಶೀರ್ವಾದ ಮಾಡಲು ಈ ಗೂಬೆ ಬಂದಿರಬಹುದು ಎಂದು ಹಲವಾರು ಮಂದಿ ಕಮೆಂಟ್​ ಮಾಡಿದ್ದಾರೆ. ಅದರಲ್ಲಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಯ ಕೆಲಸ ಅಷ್ಟು ಸುಲಭವಲ್ಲ, ಇಂಥ ಉತ್ತಮ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಒಳತಿಗಾಗಿ ಅದು ಬಂದು ಹೋಗಿದೆ ಎಂದೇ ನೂರಾರು ಕಮೆಂಟ್​ಗಳು ಬಂದಿವೆ.ಇದಕ್ಕೆ ಪುಷ್ಟಿ ನೀಡಲು ಎಂಬಂತೆ ಕಾಕ್​ಪಿಟ್​ನಲ್ಲಿ ಮೂರ್ನಾಲ್ಕು ಬಾರಿ ಸುತ್ತಿ ಅದು ಹೋಗಿದೆ ಎಂದು ಪೈಲಟ್​ ಹೇಳಿರುವುದು ಕೂಡ ಈ ನಂಬಿಕೆಯನ್ನು ಇನ್ನಷ್ಟು ಹೆಚ್ಚು ಮಾಡಿಸಿದೆ.
ಶನಿವಾರದ ಹೊತ್ತಿಗೆ, ಕ್ಯಾಲಿಫೋರ್ನಿಯಾದ ಮಡೆರಾ ಮತ್ತು ಫ್ರೆಸ್ನೊ ಕೌಂಟಿಗಳಲ್ಲಿ 541 ಚದರ ಮೈಲಿಗಿಂತಲೂ ಹೆಚ್ಚು ಅರಣ್ಯ ಪ್ರದೇಶ ಸುಟ್ಟುಹೋಗಿದೆ. ಬೆಂಕಿಯಿಂದ 23 ಜನರು ಗಾಯಗೊಂಡಿದ್ದಾರೆ ಮತ್ತು 900 ಕ್ಕೂ ಹೆಚ್ಚು ಮಂದಿ ನಿರಾಶ್ರಿತರಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಸಾಕುಮಗನಿಗೆ ಆಸ್ತಿಯಲ್ಲಿ ಹಕ್ಕು ಇದೆಯೆ? ಕಾನೂನು ಏನು ಹೇಳುತ್ತದೆ?

ನಟ, ಬರಹಗಾರ ಕೃಷ್ಣ ನಾಡಿಗ್​ ಇನ್ನಿಲ್ಲ- ಶೂಟಿಂಗ್​ ವೇಳೆ ಹೃದಯಾಘಾತ

VIDEO: ಆಗಸದಲ್ಲಿ ವಿಚಿತ್ರ ವಿದ್ಯಮಾನ- ಒಂದೇ ಬಾರಿ ಮೂರು ಸೂರ್ಯನ ಉದಯ!

ಭಾರತದ ಸೇನೆ ಯುದ್ಧಕ್ಕೆ ಸದಾ ರೆಡಿ- ಚೀನಾಕ್ಕೆ ತಿವಿದ ಅಮಿತ್​ ಷಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 2 =
Remember me
