ವಾಷಿಂಗ್ಟನ್​:ಮರ್ಲಿನ್‌ ಮನ್ರೋ… ಯಾರಿಗೆ ತಾನೇ ಈ ಹೆಸರು ಗೊತ್ತಿಲ್ಲ? ಅಮೆರಿಕದ ನಟಿ, ಗಾಯಕಿ ಮತ್ತು ರೂಪದರ್ಶಿಯಾಗಿದ್ದ .ಈಕೆ 50ರ ದಶಕದಿಂದಲೂ ಜಗತ್ಪ್ರಸಿದ್ಧಿ ಹೊಂದಿದಾಕೆ. ಅದರಲ್ಲಿ 1954ರಲ್ಲಿ ಈಕೆ ಕೊಟ್ಟ ಒಂದು ಪೋಸ್​ನಿಂದ ರಾತ್ರೋರಾತ್ರಿ ಮನೆಮಾತಾದವಳು.
Marilyn Monrowlpic.twitter.com/3YqOK5beD3
— living morganism 🌱 (@ok_girlfriend)February 7, 2021

ಸಬ್‌ವೇ ಗ್ರೇಟ್ ಒಂದರ ಮೇಲೆ ನಿಂತುಕೊಂಡು ಈಕೆ ಕೊಟ್ಟಿರುವ ಪೋಸ್​ ಇಂದಿಗೂ ಎಲ್ಲೆಡೆ ಕಾಣಬಹುದಾಗಿದೆ. ಹಲವಾರು ಮಂದಿಯ ಮನೆಗಳ ಗೋಡೆಗಳ ಮೇಲೆಯೂ ಈಕೆಯ ಇದೇ ಭಂಗಿಯ ಫೋಟೋ ಇದ್ದರೆ, ಹಲವಾರು ಕಡೆಗಳಲ್ಲಿ ಇದೇ ಭಂಗಿಯ ಮೂರ್ತಿಗಳನ್ನೂ ಕೆತ್ತಲಾಗಿದೆ.
ಕೇವಲ 36 ವರ್ಷ ಬದುಕಿದ್ದ ಈ ಮಾದಕನಟಿ ಅಷ್ಟು ಚಿಕ್ಕವಯಸ್ಸಿನಲ್ಲಿಯೇ ಇಷ್ಟೊಂದು ವಿಖ್ಯಾತಿ ಗಳಿಸಿದ್ದಳು. ಇವಳ ಇದೇ ರೀತಿಯ ಪೋಸ್​ನಂತ ತಮ್ಮ ಫೋಟೋ ಕ್ಲಿಕ್ಕಿಸಿಕೊಳ್ಳಬೇಕು ಎಂದು ಹಪಹಪಿಸುವವರು ಸಹಸ್ರಾರು ಮಂದಿ. ಆದರೆ ಆ ಪೋಸ್​ ಮಾತ್ರ ಇದುವರೆಗೂ ಯಾರಿಂದಲೂ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ.

ಆದರೆ ಗೂಬೆಯೊಂದು ಇದೀಗ ಫೋಟೋಗೆ ಪೋಸ್​ ನೀಡಿದ್ದು, ಅದು ಮರ್ಲಿನ್​ ಮನ್ರೋಳನ್ನೇ ನೆನಪಿಸುವಂತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದೆ. ಹಾಗೆ ನೋಡಿದರೆ ಮರ್ಲಿನ್​ ನಿಂತ ಭಂಗಿಗೂ ಈ ಗೂಬೆ ಕುಳಿತ ಭಂಗಿಗೂ ಅಂಥದ್ದೇನು ಹೋಲಿಕೆಯಿಲ್ಲ. ಆದರೆ ಕೆಲ ಸೆಕೆಂಡುಗಳ ಕಾಲ ಮರ್ಲಿನ್​ ಪೋಸ್​ ಕೊಟ್ಟ ಜಾಗದ ಸಮೀಪ ಕೂತಲ್ಲೇ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡಿರುವುದು ಅನೇಕ ಮಂದಿಯ ಕಣ್ಣಿಗೆ ಮರ್ಲಿನ್​ನನ್ನು ನೆನಪಿಸುತ್ತಿದೆಯಂತೆ.
ಖುದ್ದು ಮನುಷ್ಯರಲ್ಲೇ ಸಾಕಷ್ಟು ಮಂದಿ ಇದೇ ಪೋಸ್ ‌ಅನ್ನು ಅನುಕರಿಸಲು ವಿಫಲರಾಗಿರುವಾಗ ಗೂಬೆಯೊಂದು ಹೀಗೆ ಪರ್ಫೆಕ್ಟ್‌ ಆಗಿ ಪೋಸ್‌ ಕೊಟ್ಟಿದೆ ಎಂದು ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. 37 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಗೂಬೆಯು ತನ್ನ ರೆಕ್ಕೆಗಳನ್ನು ಸೊಗಸಾಗಿ ಹರಡಿರುವುದನ್ನು ಇಲ್ಲಿ ನೋಡಬಹುದಾಗಿದೆ.
ತಂಗಿಯ ಮದುವೆಗೆ ಮೃತಪಟ್ಟ ತಂದೆಯನ್ನು ಕರೆತಂದ ಅಕ್ಕ- ಸಹೋದರಿ ಪ್ರೀತಿಗೆ ವಿವಾಹ ಮಂಟಪದಲ್ಲಿ ಕಣ್ಣೀರಧಾರೆ

‘ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವ ಹೆಮ್ಮೆ ನನ್ನದು- ಸ್ನೇಹಪರತೆ ಮೋದಿಯಿಂದ ಕಲಿಯಬೇಕು’

ಕೈದಿ ಜತೆ ಲವ್​, ಅಧಿಕಾರಿಯ ಕೈ ಬೆಚ್ಚಗೆ ಮಾಡಿ ಜೈಲಲ್ಲೇ ಸೆಕ್ಸ್​, ಮುಂದೆ ಆದದ್ದೆಲ್ಲಾ ಅನಾಹುತ…!

ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + 5 =
Remember me
