ಚೆನ್ನೈ:ದಂಪತಿಯೊಬ್ಬರಿಗೆ ಬಾಡಿಗೆ ನೀಡಿದ ಮನೆ ಮಾಲೀಕ ಪದೇ ಪದೇ ಬಾಡಿಗೆದಾರ ಮಹಿಳೆಗೆ ಕಿರುಕುಳ ನೀಡುತ್ತಿದ್ದು, ಇದೀಗ ಜೈಲಿನಲ್ಲಿ ಇರುವ ಘಟನೆ ಚೆನ್ನೈನ ಕೊಡುಂಗೈಯೂರ್‌ನಲ್ಲಿ ನಡೆದಿದೆ.ಜಯಕುಮಾರ್ ಎಂಬ ಮಾಲೀಕನ ವಿರುದ್ಧ ದೂರು ದಾಖಲಿಸಿದ್ದ ಮಹಿಳೆ, ಪದೇ ಪದೇ ತಮ್ಮ ಪತಿ ಇಲ್ಲದಾಗ ಈತ ಬಂದು ಕಿಸ್‌ ಕೊಡು, ಬಾಡಿಗೆ ಕೊಡುವುದು ಬೇಡ ಎಂದು ಪೀಡಿಸುತ್ತಿದ್ದುದಾಗಿ ಆರೋಪಿಸಿದ್ದಾರೆ. ಇದರ ಆಧಾರದ ಮೇಲೆ ಜಯಕುಮಾರ್‌ ವಿರುದ್ಧ ದೂರು ದಾಖಲಿಸಿರುವ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಜಯಕುಮಾರ್‌ ಆಟೋ ಚಾಲಕರಾಗಿರುವರೊಬ್ಬರಿಗೆ ಮನೆ ಬಾಡಿಗೆ ನೀಡಿದ್ದಾರೆ. ಚಾಲಕ ಮತ್ತು ದಂಪತಿ ಮಾತ್ರ ಆ ಮನೆಯಲ್ಲಿ ವಾಸವಾಗಿದ್ದರು. ಗಂಡ ಕೆಲಸಕ್ಕೆ ಹೋದ ಸಮಯದಲ್ಲಿ ಪದೇ ಪದೇ ಬಂದು ಜಯಕುಮಾರ್‌ ಕಿಸ್‌ ಕೊಡು, ಕಿಸ್‌ ಕೊಡು ಎಂದು ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಮಹಿಳೆ ಪತಿಗೆ ಕೂಡ ಹೇಳಿದ್ದರು. ನಂತರ ಅವರ ಪತಿ ಮಾಲೀಕನಿಗೆ ವಾರ್ನ್‌ ಕೂಡ ಮಾಡಿದ್ದರು.
ಆದರೆ ಇನ್ನೂ ಮುಂದುವರೆದ ಜಯಕುಮಾರ್‌, ನಿನ್ನೆ ಮಹಿಳೆ ಒಬ್ಬರೇ ಇರುವಾಗ ಏಕಾಏಕಿ ಮನೆಗೆ ನುಗ್ಗಿ ಮಹಿಳೆಯನ್ನು ಬಲವಂತವಾಗಿ ಹಿಡಿದು ಬಾಡಿಗೆ ಕೊಡುವುದು ಬೇಡ, ಕಿಸ್‌ ಕೊಡು ಸಾಕು ಎಂದು ಪೀಡಿಸಿದ. ಮಹಿಳೆ ಆತನನ್ನು ಹೊರಕ್ಕೆ ತಳ್ಳಿ ಪೊಲೀಸರಲ್ಲಿ ದೂರು ದಾಖಲಿಸಿದರು. ಸದ್ಯ ಜಯಕುಮಾರ್‌ನನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
VIDEO: ಸೃಜನ್‌ ಖುಷಿಗಾಗಿ ನಾನು ಮದುವೆ ಮುರಿದೆ: ಯಾವ ಬೀದಿಗೆ ಬಂದೆ ಅಂತ ಹೇಳ್ತೀರಾ? ನಟಿ ವಿಜಯಲಕ್ಷ್ಮಿ ಕಣ್ಣೀರು

ಸುಮಲತಾ v/s ಎಚ್‌ಡಿಕೆ: ಹುಲಿ ಮುಂದೆ ಇಲಿಯಂತೆ ನಿಂತವರು ಯಾರು? ಜಾಲತಾಣದಲ್ಲಿ ಟ್ರೋಲ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − three =
Remember me
