ಬಗ್ದಾದ್:ಕರೊನಾದ ಬಿಕ್ಕಟ್ಟಿನ ಈ ದಿನಗಳಲ್ಲಿ ಆಕ್ಸಿಜನ್‌ ಅನಿವಾರ್ಯವಾಗಿದ್ದು, ಬಹುತೇಕ ಆಸ್ಪತ್ರೆಗಳಲ್ಲಿ ಇವುಗಳನ್ನು ಸ್ಟಾಕ್‌ ಮಾಡಿಟ್ಟುಕೊಳ್ಳಲಾಗುತ್ತಿದೆ. ಆದರೆ ಪ್ರಾಣದಾಯಕವಾಗಿರುವ ಆಕ್ಸಿಜನ್‌ ಸ್ಫೋಟಗೊಂಡು ಪ್ರಾಣವನ್ನು ಕಸಿದುಕೊಳ್ಳುತ್ತಿರುವ ಘಟನೆಗಳು ಇತ್ತೀಚೆಗೆ ನಡೆಯುತ್ತಿವೆ.
ಅಂಥದ್ದೇ ಒಂದು ವರದಿ ಇರಾಕ್‌ ಬಗ್ದಾದ್‌ನಿಂದಲೂ ಬಂದಿದೆ. ಆಕ್ಸಿಜನ್ ಟ್ಯಾಂಕ್‌ಗಳು ಸ್ಫೋಟಗೊಂಡ ಪರಿಣಾಮ ಅಗ್ನಿ ದುರಂತ ಸಂಭವಿಸಿದ್ದು, ಕನಿಷ್ಠ 27 ಜನರು ಸಜೀವವಾಗಿ ದಹಿಸಿರುವ ಘಟನೆ ಬಗ್ದಾದ್‌ನ ಇಬನ್‌ ಅಲ್ ಖತೀಬ್‌ನಲ್ಲಿ ನಡೆದಿದೆ.
ಬೆಂಕಿ ಅವಘಡ ಸಂಭವಿಸುವ ಹೊತ್ತಿಗೆ ಈ ಆಸ್ಪತ್ರೆಯಲ್ಲಿ ಕನಿಷ್ಠ 120 ರೋಗಿಗಳಿದ್ದರು. ಸದ್ಯ 27 ಮಂದಿ ಮೃತಪಟ್ಟಿರುವುದಾಗಿ ತಿಳಿದುಬಂದಿದ್ದು, ಸಾವಿನ ಸಂಖ್ಯೆ ಹೆಚ್ಚೂ ಆಗಿರಬಹುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಳ್ಳಲು ಆಮ್ಲಜನಕದ ಸಿಲಿಂಡರ್ ಸ್ಪೋಟವೇ ಕಾರಣವಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.
ವೀಕೆಂಡ್‌ ಕರ್ಫ್ಯೂ ಜತೆ ಲಾಕ್‌ಡೌನೂ ವಿಸ್ತರಣೆ ಆಗುತ್ತಾ? ತಜ್ಞರು ಏನು ಹೇಳಿದ್ದಾರೆ ನೋಡಿ…

ಮದ್ವೆಗೆ ಒಂದಿಬ್ರು ಹೆಚ್ಚಿಗೆ ಹೋದ್ರೆ ಗೊತ್ತಾಗಲ್ಲಾ ಅಂದ್ಕೊಂಡ್ರಾ? ಬ್ಯಾಂಡ್‌ ಇದ್ರಷ್ಟೇ ಎಂಟ್ರಿ…. ನೋಡಿ ಹೊಸ ಪ್ಲ್ಯಾನ್‌!

ನಮಗೆ ಸಿಕ್ಕನೊಬ್ಬ ಕಾಂಟ್ರ್ಯಾಕ್ಟರ್‌… ಎಲ್ಲದಕ್ಕೂ ಹೂಂ ಗುಟ್ಟಿದ: ದುಡ್ಡು ತಗೊಂಡು ತೀರ್ಥಯಾತ್ರೆಗೆ ಎಸ್ಕೇಪ್‌ ಆದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
