ಭೋಪಾಲ್:ಕರೊನಾ ಅಬ್ಬರ ಎಲ್ಲೆಡೆ ಹೆಚ್ಚಾಗಿದೆ. ಎರಡನೆಯ ಅಲೆ ಮೊದಲಿನ ಅಲೆಗಿಂತಲೂ ಅಧಿಕ ಪ್ರಮಾಣದಲ್ಲಿ ಸಾವು ನೋವನ್ನು ತಂದಿದೆ. ರೋಗಿಗಳು ಹೆಚ್ಚಾಗುತ್ತಿದ್ದಂತೆಯೇ ಆಸ್ಪತ್ರೆಯಲ್ಲಿ ಒಂದೆಡೆ ಹಾಸಿಗೆ ಸಮಸ್ಯೆ ಶುರುವಾದರೆ, ಇನ್ನೊಂದೆಡೆ ಆಕ್ಸಿಜನ್​ ಇಲ್ಲದೇ ಆಸ್ಪತ್ರೆಯವರು ಪರದಾಡುವಂತಾಗಿದೆ.
ಇದೀಗ ಮಧ್ಯಪ್ರದೇಶ ರಾಜಧಾನಿ ಭೋಪಾಲ್​ನಲ್ಲಿಯೂ ಈ ಸಮಸ್ಯೆ ಶುರುವಾಗಿದೆ. ಸೋಂಕಿತರು ಹೆಚ್ಚಾಗುತ್ತಿದ್ದು, ಆಕ್ಸಿಜನ್​ ಇಲ್ಲದೇ ಆಸ್ಪತ್ರೆಯಲ್ಲಿ ಪರದಾಡುವಂತಾಗಿದೆ.
ಇದೇ ಕಾರಣಕ್ಕೆ ಇಲ್ಲಿ ಪ್ರವೇಶ ಪಡೆಯಬೇಕು ಎಂದು ಆಕ್ಸಿಜನ್ ಸಿಲಿಂಡರ್ ತರಬೇಕು, ಒಂದು ವೇಳೆ ಚಿಕಿತ್ಸೆ ನೀಡುವ ಮಧ್ಯೆ ಆಕ್ಸಿಜನ್​ ಸಿಲಿಂಡರ್​ ಖಾಲಿಯಾದರೆ ಆಗುವ ಅನಾಹುತಕ್ಕೆ ನಾವು ಜವಾಬ್ದಾರರಲ್ಲ ಎಂದು ಬಹುತೇಕ ಆಸ್ಪತ್ರೆಗಳಲ್ಲಿ ಹೇಳಲಾಗುತ್ತಿದೆ.
ಆಸ್ಪತ್ರೆಗೆ ಎಂಟ್ರಿ ಪಡೆಯುವ ಸಮಯದಲ್ಲಿ ಭರ್ತಿ ಮಾಡುವ ಅರ್ಜಿಯಲ್ಲಿ ಇರುವ ಇದನ್ನು ಸೋಂಕಿತರು ಭರ್ತಿ ಮಾಡಬೇಕಿದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್ ಮತ್ತು ರೆಮ್‍ಡೆಸಿವರ್ ಕೊರತೆ ಇದೆ. ಒಂದು ವೇಳೆ ಚಿಕಿತ್ಸೆ ಮಧ್ಯೆ ಆಕ್ಸಿಜನ್ ಪೂರೈಕೆ ನಿಂತರೆ ಅದಕ್ಕೆ ಆಸ್ಪತ್ರೆ ಜವಾಬ್ದಾರರಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಪ್ರತಿದಿನ ಸುಮಾರು 18 ರೋಗಿಗಳಿಗೆ 20 ರಿಂದ 25 ಆಕ್ಸಿಜನ್ ಸಿಲಿಂಡರ್ ಅವಶ್ಯಕತೆ ಇದೆ. ಆದ್ರೆ ನಮಗೆ 10 ರಿಂದ 12 ಸಿಲಿಂಡರ್ ಗಳು ಮಾತ್ರ ಸಿಗುತ್ತಿವೆ. ಆದ್ದರಿಂದ ಇದು ಅನಿವಾರ್ಯ ಎಂದು ಆಸ್ಪತ್ರೆಗಳು ಹೇಳುತ್ತಿವೆ.
ತಾಯಿ, ಅಣ್ಣ ಸೇರಿ ಮೋಸದಿಂದ ಹೊಲ ಮಾರಿದ್ದಾರೆ- ಅಮ್ಮ ತೀರಿಕೊಂಡಿದ್ದಾರೆ: ನನ್ನ ಆಸ್ತಿ ಹೇಗೆ ಪಡೆಯಲಿ?

ಕೊನೆಗೂ ಸಿಕ್ಕಿಬಿದ್ದ ಡಬಲ್ ಮರ್ಡರ್‌ ಆರೋಪಿ: ಎಸ್ಕೇಪ್‌ ಆಗಹೋಗಿ ಕಾಲಿಗೆ ಗುಂಡು ಹಾಕಿಸಿಕೊಂಡ‌

ಬಿಇ ಪದವಿಧರರೆ? ಕೇಂದ್ರ ಸರ್ಕಾರದಲ್ಲಿವೆ 40 ಹುದ್ದೆಗಳು- 1.80 ಲಕ್ಷ ರೂ.ವರೆಗೆ ಸಂಬಳ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − two =
Remember me
