ನವದೆಹಲಿ:ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಂಸದ ರಾಹುಲ್‌ ಗಾಂಧಿ ಹಿಂದುತ್ವ ಮತ್ತು ಹಿಂದೂಗಳ ಬಗ್ಗೆ ಮಾತನಾಡಿದ್ದರು. ರಾಜಸ್ತಾನದ ಜೈಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು, ಬಿಜೆಪಿ ಸರ್ಕಾರವನ್ನು ಟೀಕಿಸುತ್ತಾ, ದೇಶದಲ್ಲಿ ಹಿಂದುತ್ವವಾದಿಗಳ ಸರ್ಕಾರವಿದೆ ಹೊರತು ಹಿಂದೂಗಳ ಸರ್ಕಾರವಲ್ಲ. ಮುಂದಿನ ಚುನಾವಣೆಯಲ್ಲಿ ಹಿಂದುತ್ವವಾದಿಗಳ ಕಿತ್ತೊಗೆದು ಹಿಂದೂಗಳ ಸರ್ಕಾರ ತರಬೇಕು ಎಂದು ಕರೆ ನೀಡಿದ್ದರು.
ರಾಹುಲ್‌ ಗಾಂಧಿಯವರ ಬಾಯಲ್ಲಿ ಹಿಂದೂ ಸರ್ಕಾರ ಎಂದು ಬಂದಿರುವುದನ್ನು ಕೇಳಿ ಹೈದರಾಬಾದ್​ ಸಂಸದ ಅಸಾದುದ್ದೀನ್​ ಓವೈಸಿ ಕೆಂಡಾಮಂಡಲವಾಗಿದ್ದಾರೆ. ಈ ಕುರಿತು ಟ್ವೀಟ್‌ ಮೂಲಕ ಅವರು ಕಿಡಿ ಕಾರಿದ್ದಾರೆ. ‘ಭಾರತ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ, ಎಲ್ಲಾ ಭಾರತೀಯರಿಗೆ ಸೇರಿದ್ದಾಗಿದೆ. ದೇಶದಲ್ಲಿ ಎಲ್ಲಾ ಧರ್ಮದ ಜನರು ನೆಲೆಸಿದ್ದಾರೆ. ಆದರೆ ರಾಹುಲ್‌ ಅವರು ಹಿಂದೂ ಸರ್ಕಾರ ತರಬೇಕು ಎಂದಿರುವುದು ಸರಿಯಲ್ಲ. ಚುನಾವಣೆಯಲ್ಲಿ ಮತಗಳಿಕೆಗಾಗಿ ಹಿಂದೂಗಳನ್ನು ಓಲೈಕೆ ಮಾಡಲು ರಾಹುಲ್‌ ಗಾಂಧಿ ಈ ರೀತಿ ಮಾತನಾಡಿದ್ದಾರೆ.
ಹಿಂದೂ ಸರ್ಕಾರ ತರಬೇಕು ಎನ್ನುವ ಮೂಲಕ, ಚುನಾವಣಾ ತಂತ್ರದ ಮೊರೆ ಹೋಗಿದ್ದಾರೆ. ಇದೇನು ಜಾತ್ಯಾತೀತ ಅಜೆಂಡಾವೇ ಎಂದು ಅಸಾದುದ್ದೀನ್​ಹರಿಕಾಯ್ದಿದ್ದಾರೆ.
ಜೈಪುರ್‌ದಲ್ಲಿ ರಾಹುಲ್‌ ಅವರು, ’ಎರಡು ಜೀವಗಳಿಗೆ ಒಂದೇ ಆತ್ಮ ಇರುವುದು ಸಾಧ್ಯವಿಲ್ಲ, ಇದೇ ರೀತಿ ಎರಡು ಪದಗಳು ಒಂದೇ ಅರ್ಥವನ್ನು ಹೊಂದಲು ಸಾಧ್ಯವಿಲ್ಲ. ಹಿಂದೂ ಮತ್ತು ಹಿಂದುತ್ವ ಒಂದೇ ಪದವಲ್ಲ, ಇದು ಒಂದೇ ವಿಷಯವೂ ಅಲ್ಲ. ನಾನು ಹಿಂದೂ, ಆದರೆ ಹಿಂದುತ್ವವಾದಿ ಅಲ್ಲ. ಮಹಾತ್ಮ ಗಾಂಧಿ ಹಿಂದೂ… ಗೋಡ್ಸೆ ಹಿಂದುತ್ವವಾದಿ. ಏನೇ ನಡೆದರೂ ಹಿಂದೂ ಸತ್ಯವನ್ನು ಹುಡುಕುತ್ತಾನೆ. ಪ್ರಾಣ ಹೋದರೂ, ಕತ್ತರಿಸಲ್ಪಟ್ಟರು ಹಿಂದೂ ಸತ್ಯವನ್ನೇ ಹುಡುಕುತ್ತಾನೆ. ಅವರ ಮಾರ್ಗ ಸತ್ಯಾಗ್ರಹ. ಅವನು ತನ್ನ ಇಡೀ ಜೀವನವನ್ನು ಸತ್ಯದ ಹುಡುಕಾಟದಲ್ಲಿ ಕಳೆಯುತ್ತಾನೆ’ ಎಂದು ರಾಹುಲ್ ಹೇಳಿದ್ದರು.ಆದ್ದರಿಂದ ಮುಂದಿನ ಬಾರಿ ಹಿಂದೂ ಸರ್ಕಾರ ಬರಬೇಕಿದೆ ಎಂದಿದ್ದರು. ಇದು ಓವೈಸಿ ಅವರನ್ನು ಕೆರಳಿಸಿದೆ.
Rahul & INC fertilised the ground for Hindutva. Now they’re trying to harvest majoritarianism. Bringing “Hindus to power” is a “secular” agenda in 2021. Wah!
India belongs to all Bharatiyas. Not Hindus alone. India belongs to people of all faiths & also those who have no faithpic.twitter.com/9EfpynChqU
— Asaduddin Owaisi (@asadowaisi)December 12, 2021

ಡೆಂಘೆಗೆ ಬಲಿಯಾದ ಶಾಸಕಿ: ಕಾಂಗ್ರೆಸ್‌ನಲ್ಲಿ ಗೆಲುವು ಸಾಧಿಸಿದ್ದ ಇವರು ಬಿಜೆಪಿಯಲ್ಲಿಯೂ ಜಯಭೇರಿ ಬಾರಿಸಿದ್ದರು

‘ಯಾವುದ್ರೀ ಲವ್‌, ಯಾವುದ್ರೀ ಜಿಹಾದ್‌? ಹುಚ್ಮುಂಡೆ ಮದುವೇಲಿ… ಅನ್ನೋ ಹಾಗೆ ಕಿರುಚಾಡುದ್ಯಾಕೆ?’

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 2 =
Remember me
