ಜೈಪುರ ​(ಒಡಿಶಾ):ಈ ಬಾರಿ ‘ಪದ್ಮ’ ಪ್ರಶಸ್ತಿ ಪುರಸ್ಕೃತರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಪುರಸ್ಕರಿಸುವ ಸಮಯದಲ್ಲಿ ಅಪರೂಪದ ವ್ಯಕ್ತಿಗಳಂತೆ ಕಂಡ ಕೆಲವರಲ್ಲಿ ಒಡಿಶಾದ ಜೈಪುರ ಜಿಲ್ಲೆಯ ಕಂಠೀರ ಗ್ರಾಮದಲ್ಲಿ ನಂದಕಿಶೋರ್ ಪ್ರಸ್ಟಿ (ನಂದಾ ಮಾಸ್ಟರ್​​) ಕೂಡ ಒಬ್ಬರು. 104 ವರ್ಷದ ಇವರು, ರಾಷ್ಟ್ರಪತಿಯವರಿಗೆ ಆಶೀರ್ವದಿಸಿ ಅವರ ಕೈಯಿಂದ ಪದ್ಮಶ್ರೀ ಪಡೆದಾಗ ಹಲವರು ಭಾವುಕರಾಗಿದ್ದರು.
ಅಕ್ಷರ ಸಂತ ಎಂದೇ ಖ್ಯಾತಿ ಪಡೆದಿದ್ದ ನಂದಾ ಸರ್‌, ತಮ್ಮ ತುಂಬು ಜೀವನವನ್ನು ಮುಗಿಸಿ ಇಹಲೋಕ ತ್ಯಜಿಸಿದ್ದಾರೆ. 75 ವರ್ಷಗಳವರೆಗೆ ಅಕ್ಷರ ಸೇವೆಯಲ್ಲಿ ತೊಡಗಿಸಿಕೊಂಡು ಲಕ್ಷಾಂತರ ಬಡವರಿಗೆ ಅಕ್ಷರ ದಾನ ಮಾಡಿದ್ದ ಇವರನ್ನು ಕೋವಿಡ್‌ ಬಲಿ ಪಡೆದುಕೊಂಡಿದೆ.
ಕರೊನಾ ಸೋಂಕಿಗೊಳಗಾಗಿ ನವೆಂಬರ್​​​ 30ರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನಂದಾ ಸರ್‌, ನಂದಾ ಮಾಸ್ಟರ್‌ ಎಂದೇ ಪರಿಚಿತರಾಗಿರುವ ಈ ಅಕ್ಷರ ಸಂತ ಕಳೆದ 75 ವರ್ಷಗಳಿಂದ ತಮ್ಮ ಗ್ರಾಮದ ಮಕ್ಕಳಿಗೆ ಹಾಗೂ ಹಿರಿಯ ನಾಗರಿಕರಿಗೆ ಉಚಿತವಾಗಿ ಪಾಠ ಮಾಡುತ್ತಿದ್ದರು.
1946ರಿಂದಲೂ ಉಚಿತವಾಗಿ​​ ಶಿಕ್ಷಣ ನೀಡುತ್ತ ಬಂದಿದ್ದ ಇವರು,ವಯಸ್ಸು 100 ದಾಟಿದ್ದರೂ ಇವರ ಉತ್ಸಾಹಕ್ಕೆ ಸಾಟಿಯೇ ಇರಲಿಲ್ಲ. ಮರದ ಕೆಳಗೆ ಕುಳಿತು ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಇದಾಗಲೇ ಲಕ್ಷಾಂತರ ಮಕ್ಕಳಿಗೆ ಉಚಿತವಾಗಿ ಅಕ್ಷರದಾನ ಮಾಡಿದ್ದಾರೆ. ಇವರ ಸೇವೆಗೆ ಈ ಸಾಲಿನ (2020) ಪದ್ಮಶ್ರೀ ಪ್ರಶಸ್ತಿ ಸಿಕ್ಕಿತ್ತು.
ಆಸ್ಪತ್ರೆಯ ಟಾಯ್ಲೆಟ್‌ ಫ್ಲಷ್‌ನಲ್ಲಿ ಶಿಶು: ಕೊನೆಗೂ ಸಿಕ್ಕಿಬಿದ್ದ ಕಿರಾತಕಿ! ಕರುಳಕುಡಿಯನ್ನೇ ಹೊಸಕಿ ಹಾಕಿದ್ದೇಕೆ ಈ ಅಮ್ಮ?

VIDEO: ವರ ಹಾರ ಹಾಕಲು ಮುಂದಾಗುತ್ತಿದ್ದಂತೆಯೇ ಓಡಿಬಂದು ಸಿಂಧೂರವಿಟ್ಟ ಪ್ರೇಮಿ- ವೈರಲ್‌ ವಿಡಿಯೋಗೆ ದಂಗಾದ ಜನ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 2 =
Remember me
