ಸೌದಿ ಅರೇಬಿಯಾ:ಪಾಕಿಸ್ತಾನಕ್ಕೆ ಇನ್ನು ಮುಂದೆ ಈಗಾಗಲೇ ಘೋಷಣೆ ಮಾಡಿರುವ ಸಾಲವನ್ನೂ ಕೊಡುವುದಿಲ್ಲ, ಅದಕ್ಕೆ ಈಗಾಗಲೇ ವಾಗ್ದಾನ ಮಾಡಿರುವ ತೈಲವನ್ನೂ ಕೊಡುವುದಿಲ್ಲ ಎಂದು ಸೌದಿ ಅರೇಬಿಯಾ ಖಂಡತುಂಡವಾಗಿ ನುಡಿದಿದೆ.
ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಮತ್ತು ಮತ್ತು ಸೌದಿ ಅರೇಬಿಯಾದ ದೋಸ್ತಿ ಮುಕ್ತಾಯವಾಗಿದ್ದು, ಪಾಕಿಸ್ತಾನ ತಲೆತಲೆ ಚಚ್ಚಿಕೊಳ್ಳುವಂತಾಗಿದೆ.
ಈ ಬಗ್ಗೆ ಮಿಡ್ಲ್ ಈಸ್ಟ್ ಮಾನಿಟರ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, ಪಾಕಿಸ್ತಾನ ಮತ್ತು ಸೌದಿ ಅರೇಬಿಯಾ ನಡುವಿನ ಸ್ನೇಹ ಸಂಬಂಧ ಅಂತ್ಯವಾಗಿದೆ ಎಂದು ಹೇಳಿದೆ.
2018ರ ಅಂತ್ಯದಲ್ಲಿ ಸೌದಿ ಅರೇಬಿಯಾವು 6.2 ಬಿಲಿಯನ್ ಡಾಲರ್ ಪ್ಯಾಕೇಜನ್ನು ಪಾಕಿಸ್ತಾನಕ್ಕೆ ನೀಡುವುದಾಗಿ ಘೋಷಿಸಿತ್ತು. ಅದರಲ್ಲಿ 3 ಬಿಲಿಯನ್ ಹಣದ ರೂಪದ ಸಾಲ ಹಾಗೂ 3.2 ಬಿಲಿಯನ್ ಮೊತ್ತದ ತೈಲವನ್ನು ಸಾಲವನ್ನು ನೀಡುವ ಒಪ್ಪಂದವಾಗಿತ್ತು. 2019ರ ಫೆಬ್ರವರಿಯಲ್ಲಿ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದರು.
ಆದರೆ ಈಗ ಪಾಕಿಸ್ತಾನಕ್ಕೆ ತಾನು ಹಣದ ಸಾಲ ಮತ್ತು ಇಂಧನ ಪೂರೈಕೆ ಮಾಡುವುದಿಲ್ಲ ಎಂದು ಸೌದಿ ಘೋಷಣೆ ಮಾಡಿದೆ.
ಇದನ್ನೂ ಓದಿ:ನಕಲಿ ಪಾಸ್‌ಪೋರ್ಟ್‌ನಿಂದ ಚೀನಿಯರ ಎಂಟ್ರಿ- ಸಾವಿರಾರು ಕೋಟಿ ಟೋಪಿ: ಸಿಕ್ಕಿಬಿದ್ದ ಖದೀಮರು
ಅಷ್ಟಕ್ಕೂ ಪಾಕಿಸ್ತಾನ ಮತ್ತು ಸೌದಿ ಅರೇಬಿಯಾದ ನಡುವೆ ಇಷ್ಟೊಂದು ವೈಮನಸ್ಸು ಉಂಟಾಗಲು ಕಾರಣ ಎಂದರೆ ಕಾಶ್ಮೀರ. ಈ ಹಿಂದೆ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನ ಸೌದಿ ಅರೇಬಿಯಾ ವಿರುದ್ಧ ಕಿಡಿಕಾರಿತ್ತು.. ಸೌದಿ ಪಾರಮ್ಯ ಇರುವ ಆರ್ಗನೈಸೇಷನ್ ಆಫ್ ಇಸ್ಲಾಮಿಕ್ ಕೋ- ಆಪರೇಷನ್ (ಓಐಸಿ) ಕಾಶ್ಮೀರ ವಿಚಾರದಲ್ಲಿ ಅಗತ್ಯ ಪ್ರಮಾಣದಲ್ಲಿ ಏನನ್ನೂ ಮಾಡುತ್ತಿಲ್ಲ ಎಂದು ಪಾಕಿಸ್ತಾನ ಕಟುವಾಗಿ ಟೀಕೆ ಮಾಡಿತ್ತು. ಈ ವಿಚಾರವಾಗಿಯೇ ಒಂದು ಹಂತದಲ್ಲಿ ಓಐಸಿಯನ್ನೇ ವಿಭಜಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಸಚಿವರು ಬೆದರಿಕೆಯೊಡ್ಡಿದ್ದರು.
ಆದರೆ, ಭಾರತದೊಂದಿಗೆ ಸಹಭಾಗಿತ್ವ ವಿಸ್ತರಣೆಯಲ್ಲಿ ತೊಡಗಿರುವ ಸೌದಿ ಅರೇಬಿಯಾವು ಕಾಶ್ಮೀರ ವಿಚಾರಕ್ಕೆ ಪ್ರತ್ಯೇಕ ಚರ್ಚೆ ಆಯೋಜಿಸುವುದಕ್ಕೆ ಸಾಧ್ಯವಿಲ್ಲ ಎಂದಿತ್ತು. ಕಳೆದ ವಾರ ಪಾಕಿಸ್ತಾನದ ವಿದೇಶಾಂಗ ಸಚಿವ ಷಾ ಮೆಹ್ಮೂದ್ ಖುರೇಷಿ ಮಾಧ್ಯಮಗಳೊಂದಿಗೆ ಇದೇ ವಿಚಾರ ಮಾತನಾಡಿದ್ದರು.
ಓಐಸಿಗೆ ನಾನು ಮತ್ತೊಮ್ಮೆ ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ. ವಿದೇಶಾಂಗ ಸಚಿವರ ಸಮಿತಿಯ ಸಭೆ ಕರೆಯಬೇಕು ಎಂಬುದು ನಮ್ಮ ನಿರೀಕ್ಷೆ. ನೀವು ಅದನ್ನು ಕರೆಯಲು ಸಾಧ್ಯವಿಲ್ಲದಿದ್ದರೆ ಇಸ್ಲಾಮಿಕ್ ರಾಷ್ಟ್ರಗಳ ಸಭೆ ಕರೆಯುವಂತೆ ನಾನು ಪ್ರಧಾನಿ ಇಮ್ರಾನ್ ಖಾನ್ ಅವರನ್ನೇ ಒತ್ತಾಯಿಸುತ್ತೇನೆ. ಕಾಶ್ಮೀರ ವಿಷಯದಲ್ಲಿ ಹಾಗೂ ದಮನಿತ ಕಾಶ್ಮೀರಿಗಳ ಬೆಂಬಲಕ್ಕೆ ನಿಲ್ಲಲು ಇಸ್ಲಾಮಿಕ್ ರಾಷ್ಟ್ರಗಳು ಸಿದ್ಧವಾಗಿವೆ ಎಂದು ಖುರೇಷಿ ಹೇಳಿದ್ದರು.
ಜತೆಗೆ, ಮಾಧ್ಯಮಗಳು ಈ ವಿಷಯಕ್ಕೆ ಸಂಬಂಧಿಸಿದಂತೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದ ಖುರೇಷಿ, ಇನ್ನಷ್ಟು ಸಮಯ ಕಾಯಲು ಪಾಕಿಸ್ತಾನ ಸಿದ್ಧವಿಲ್ಲ. ಒಂದು ವೇಳೆ ವಿದೇಶಾಂಗ ಸಚಿವರ ಸಮಿತಿ ಸಭೆಯನ್ನು ಕರೆಯಲು ಸಾಧ್ಯವಾಗದಿದ್ದಲ್ಲಿ ಓಐಸಿ ಹೊರಗೆ ಸೆಷನ್ ನಡೆಸಲು ಪಾಕಿಸ್ತಾನವು ಸಿದ್ಧವಿದೆ ಎಂದಿದ್ದರು. ಇದು ಪಾಕ್‌ಗೆ ಸಹಿಸಲು ಸಾಧ್ಯವಾಗಿರಲಿಲ್ಲ.
ಎಚ್ಚರ! ನಿಮ್ಮ ಮೇಲೆ ಕಣ್ಣಿಟ್ಟಿದೆ ಫೇಸ್‌ಬುಕ್‌- 7 ದಶಲಕ್ಷ ಪೋಸ್ಟ್‌ ಡಿಲೀಟ್‌

ಪಿಯುಸಿ ಟಾಪರ್‌ ಅಪಘಾತದಲ್ಲಿ ಸಾವು: ಘಟನೆಯ ಹಿಂದಿದೆ ಕಾಣದ ಕೈ?

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ನಕಲಿ ಪಾಸ್‌ಪೋರ್ಟ್‌ನಿಂದ ಚೀನಿಯರ ಎಂಟ್ರಿ- ಸಾವಿರಾರು ಕೋಟಿ ಟೋಪಿ: ಸಿಕ್ಕಿಬಿದ್ದ ಖದೀಮರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 8 =
Remember me
