ನವದೆಹಲಿ:ಭಾರತದ ವಿರುದ್ಧವಾಗಿ ಕೆಲವೊಂದು ಮಾಹಿತಿ ನೀಡಲು ಪಾಕಿಸ್ತಾನ ನಡೆಸಿದ್ದ ಆನ್​ಲೈನ್​ ನೇರಪ್ರಸಾರ ಮೀಟಿಂಗ್​ ಮಧ್ಯೆ ಶ್ರೀರಾಮಚಂದ್ರ, ಹನುಮಾನ ಬಂದುಬಿಟ್ಟರೆ ಹೇಗಿರತ್ತೆ? ಪಾಕಿಸ್ತಾನದ ಗಣ್ಯರ ಸ್ಥಿತಿ ಹೇಗಾಗಿರಬೇಡ?
ಪಾಕಿಸ್ತಾನಿಗಳು ಸುಸ್ತಾಗಿ ಮುಜುಗರ ಪಡುವಂಥ ಘಟನೆ ನಿನ್ನೆ ನಡೆದೇಬಿಟ್ಟಿದೆ. ಇದರ ವಿಡಿಯೋ ಇದೀಗ ವೈರಲ್​ ಆಗಿದ್ದು, ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಅದರ ವಿಡಿಯೋ ಇಲ್ಲಿದೆ ನೋಡಿ…
2 minutes of great patriotic songs.pic.twitter.com/cVV9niQYFe
— VarunReddy2002 (@reddy2002_varun)October 28, 2020

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತದ ವಿರುದ್ಧ ಝೂಮ್​ ಆ್ಯಪ್​ನಲ್ಲಿ ಆನ್​ಲೈನ್​ ಮೀಟಿಂಗ್​ ನಡೆದಿತ್ತು. ‘ಭಾರತದಿಂದ ಕಾಶ್ಮೀರ ಆಕ್ರಮಣಕ್ಕೆ 72 ವರ್ಷಗಳು’ ಎಂಬ ಬಗ್ಗೆ ಚರ್ಚೆ ನಡೆದಿತ್ತು. ಮೂಲೆಮೂಲೆಗಳ ಪರಿಣತರು ಭಾರತದ ವಿರುದ್ಧ ತಮ್ಮ ತಮ್ಮ ನಿರ್ಣಯ ಮಂಡಿಸಲು ಕಂಪ್ಯೂಟರ್​ ಮುಂದೆ ಕಾದು ಕುಳಿತಿದ್ದರು.
ಅಷ್ಟೇ… ಮೀಟಿಂಗ್​ ಶುರುವಾಗುತ್ತಿದ್ದಂತೆಯೇ ಶ್ರೀರಾಮಚಂದ್ರ ಮತ್ತು ಹನುಮಾನ್‌ನ ಹಾಡುಗಳು ಮೊಳಗಿಬಿಟ್ಟವು. ಅಯ್ಯಯ್ಯೋ ಇದೇನಪ್ಪಾ ಎಂದು ಗಣ್ಯರೆಲ್ಲರೂ ಕಕ್ಕಾಬಿಕ್ಕಿಯಾದರು. ಮತ್ತೆ ಮೀಟಿಂಗ್​ ಶುರು ಮಾಡಿದರು. ಮೀಟಿಂಗ್​ ಶುರುವಾಗುತ್ತಿದ್ದಂತೆಯೇ ಮತ್ತೆ ಹಾಡು ಮೊಳಗಿತು. ಸಭೆಯಲ್ಲಿ ಇದ್ದವರು ತಲೆತಲೆ ಚಚ್ಚಿಕೊಳ್ಳುವಂತಾಯಿತು.
ಅಷ್ಟಕ್ಕೂ ಆಗಿದ್ದೇನೆಂದರೆ, ಈ ಮೀಟಿಂಗ್​ ಇರುವುದನ್ನು ತಿಳಿದ ಕೆಲವು ಭಾರತೀಯ ಹ್ಯಾಕರ್ಸ್​ಗಳು ಕಿಲಾಡಿ ಮಾಡಿದ್ದಾರೆ. ಭಾರತ ವಿರೋಧಿ ಸಭೆ ನಡೆಯುವುದನ್ನು ಗಮನಿಸಿದ್ದ ಇವರು, ಆನ್‌ಲೈನ್ ಮೀಟಿಂಗ್‌ಅನ್ನು ಹ್ಯಾಕ್ ಮಾಡಿಬಿಟ್ಟಿದ್ದಾರೆ.
ಇದನ್ನೂ ಓದಿ:ಅಬ್ಬಾ! ಶ್ರೀರಾಮನ ಮೇಲೆ ಇದೆಂಥ ಪ್ರೀತಿ… ಕೋಲಾರದ ಪಾಚಾಸಾಬ್​ರ ಭಕ್ತಿಗೆ ಅವರೇ ಸಾಟಿ…
ಅತ್ತ ಮೀಟಿಂಗ್​ ಶುರುವಾಗುತ್ತಿದ್ದಂತೆಯೇ ಶ್ರೀರಾಮ ಮತ್ತು ಹನುಮಾನ್ ಹಾಡುಗಳನ್ನು ಬಿತ್ತರಿಸಿದ್ದಾರೆ.ಸಭೆಯನ್ನು ಮೊದಲು ಸುಮಾರು 17 ನಿಮಿಷಗಳವರೆಗೆ ಹ್ಯಾಕ್ ಮಾಡಲಾಗಿದೆ. ಆಗ ಹನುಮಾನ್ ದೇವರ ಭಕ್ತಿಗೀತೆಗಳನ್ನು ಪ್ರಸಾರ ಮಾಡಲಾಯಿತು. ನಂತರ ಸಭೆ ನಡೆಯುತ್ತಿದ್ದ ಮಧ್ಯೆಯೇ ಅಂದರೆ 47 ನಿಮಿಷ ಆದ ಮೇಲೆ ಮತ್ತೆ ಹ್ಯಾಕ್​ ಮಾಡಿ ‘ಏಕ್ ಹಿ ನಾರಾ, ಏಕ್ ಹಿ ನಾಮ್, ಜೈ ಶ್ರೀರಾಮ್, ಜೈ ಶ್ರೀರಾಮ್’ ಎಂಬ ಹಾಡು ಪ್ರಸಾರ ಮಾಡಿದರು.
ಈ ಹಾಡು ಕೇಳಿಬರುತ್ತಿದ್ದಂತೆಯೇ ಭಾಷಣಕಾರರಲ್ಲಿ ಒಬ್ಬರು, ‘ನಾವು ಈ ರೀತಿ ಆಗುವುದನ್ನು ನಿರೀಕ್ಷಿಸಿದ್ದೆವು’ ಎಂದು ಹೇಳಿದ್ದಾರೆ. ಇದು ವಿಡಿಯೋದಲ್ಲಿ ಕೇಳಿಬಂದಿದೆ. ಅದಕ್ಕೆ ಉತ್ತರವಾಗಿ ಹ್ಯಾಕರ್​ಗಳು ‘ನಾವು ಭಾರತೀಯರು. ಒದ್ದು ಹೊರಹಾಕುತ್ತೇವೆ’ ಎಂದು ಹೇಳಿದ್ದಾರೆ.
ನನ್ನ ಸೇವೆ ಮಾಡಿ ಸದ್ಗತಿ ಪಡೆಯಿರಿ ಎಂದು ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ‘ಗುರು’ಗೆ 120 ವರ್ಷ ಜೈಲು!

ಮನೆಯಲ್ಲಿರೋ ವಸ್ತು ಮಾರಿ ಗೇಮ್​ ಆಡ್ತಾನೆ, ನೀವೇ ಶಿಕ್ಷೆ ಕೊಡಿ… ಮಗನ ವಿರುದ್ಧ ಪೊಲೀಸ್​ ಕಂಪ್ಲೇಂಟ್​!

ಮಾಸ್ಕ್​ ಏಕೆ ಧರಿಸಿಲ್ಲ ಎಂದು ಕೇಳಿದವನನ್ನು 27 ಬಾರಿ ಚಾಕುವಿನಿಂದ ತಿವಿದ ಅಕ್ಕ-ತಂಗಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − 1 =
Remember me
