ಕರಾಚಿ:ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿರುವ ಪಾಕಿಸ್ತಾನದ ಆಂತರಿಕ ಸಚಿವ ಶೇಖ್​ ರಶೀದ್ ಅಹಮದ್ ಇದೀಗ ಹೇಳಿಕೆಯಿಂದ ಅಲ್ಲ, ಬದಲಿಗೆ ಅವರ ಕೃತ್ಯದಿಂದಲೇ ಭಾರಿ ಟ್ರೋಲ್​ ಆಗಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದಲ್ಲಿ ಅಫ್ಘಾನಿಸ್ತಾನದ ರಾಯಭಾರಿಯ ಮಗಳ ಅಪಹರಣವಾಗಿ ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಆದರೆ ಇದೇ ಸಚಿವ ಅಪಹರಣ ಆಗಿಯೇ ಇಲ್ಲ ಎಂಬ ಹೇಳಿಕೆ ಕೊಟ್ಟು ಟ್ರೋಲ್​ಗೆ ಒಳಗಾಗಿದ್ದರು. ಆದರೆ ಈಗ ಅವರು ನಗೆಪಾಟಲಿಗೆ ಈಡಾಗಿರುವುದು ದೋಣಿ ಓಡಿಸಲು ಶ್ರಮಪಟ್ಟ ವಿಡಿಯೋ ನೋಡಿ.
ತಮ್ಮ ಫಾರ್ಮ್‌ಹೌಸ್‌ನಲ್ಲಿ ದೋಣಿಯನ್ನು ಓಡಿಸಲು ಸಾಹಸ ಪಟ್ಟು ಕೊನೆಗೂ ದೋಣಿ ಕದಲದೇ ಅಲ್ಲಿಯೇ ಇರುವ ವಿಡಿಯೋ ಇದಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ. ಮಾತ್ರವಲ್ಲದೇ ಮೀಮ್ಸ್​ಗಳ ಸುರಿಮಳೆಯೇ ಆಗುತ್ತಿದೆ.
ಅಂದಹಾಗೆ, ಈ ವಿಡಿಯೋ ಅನ್ನು ಖುದ್ದು ಅವರೇ ಪೋಸ್ಟ್​ ಮಾಡಿದ್ದಾರೆ. ಫಾರಂ ಹೌಸ್‍ನಲ್ಲಿ ತಾವು ದೋಣಿಯೊಂದರಲ್ಲಿ ಕುಳಿತು ಹುಟ್ಟು ಹಾಕುತ್ತಿರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಆದರೆ ಈ ವಿಡಿಯೋ ನೋಡಿ ಕಮೆಂಟಿಗರಂತೂ ಬಿದ್ದು ಬಿದ್ದು ನಗುತ್ತಿದ್ದಾರೆ. ಈದ್‍ನ ಎರಡನೇ ದಿನ: ಫ್ರೀಡಮ್ ಹೌಸ್‍ನಲ್ಲಿ ದೋಣಿಯಾನ ಮಾಡುತ್ತಿರುವ ಆಂತರಿಕ ಸಚಿವ ಶೇಖ್ ರಶೀದ್ ಅಹಮದ್” ಎಂದು ಅಡಿಬರಹವನ್ನು ಇದಕ್ಕೆ ನೀಡಲಾಗಿದೆ. 49 ಸೆಕೆಂಡ್​ಗಳ ಈ ವಿಡಿಯೋದಲ್ಲಿ ಸಚಿವರು ಎಷ್ಟೇ ಹುಟ್ಟು ಹಾಕಿದರೂ ದೋಣಿ ಮಾತ್ರ ಅಲುಗಾಡದೇ ನಿಂತಲ್ಲೇ ನಿಂತಿದ್ದು, ನೋಡುಗರನ್ನು ನಗೆಗಡಲಿನಲ್ಲಿ ತೇಲಿಸಿದೆ.
ನೀವೂ ನೋಡಿ ಈ ವಿಡಿಯೋ:
https://t.co/Tc0IG0n2DJpic.twitter.com/HWJo4jhI8Y
— Sheikh Rashid Ahmed (@ShkhRasheed)July 24, 2021

ಪಾಲಕರೇ ಎಚ್ಚರ: ಭಗತ್​ಸಿಂಗ್​ ಪಾತ್ರ ಪ್ರಾಕ್ಟೀಸ್​ ಮಾಡುವಾಗ ಪ್ರಾಣಕಳೆದುಕೊಂಡ ಬಾಲಕ!

ಅಪ್ರಾಪ್ತೆಯ ಕೈಹಿಡಿದು ಪ್ರೀತಿ ವ್ಯಕ್ತಪಡಿಸಿದರೆ ಲೈಂಗಿಕ ದೌರ್ಜನ್ಯವಾಗತ್ತಾ? ಕೋರ್ಟ್​ ಏನು ಹೇಳಿದೆ ನೋಡಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine + fifteen =
Remember me
