ಕರಾಚಿ:ಪಾಕಿಸ್ತಾನದ ಖ್ಯಾತ ಪರಮಾಣು ವಿಜ್ಞಾನಿ, ಪರಮಾಣು ಕಾರ್ಯಸೂಚಿಯ ಪಿತಾಮಹ ಎಂದೇ ಕರೆಯಲ್ಪಡುವ ಡಾ. ಅಬ್ದುಲ್​ ಖಾದಿರ್​ ಖಾನ್ ಇಂದು ನಿಧನರಾಗಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು.
ಎ.ಕ್ಯೂ.ಖಾನ್ ಎಂದೇ ಖ್ಯಾತರಾಗಿದ್ದ ಅವರು ಪಾಕಿಸ್ತಾನಕ್ಕೆ ಪರಮಾಣು ಬಾಂಬ್ ತಯಾರಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2004ರಲ್ಲಿ ನ್ಯೂಕ್ಲಿಯರ್ ತಂತ್ರಜ್ಞಾನ ಅಭಿವೃದ್ದಿಯ ಜವಾಬ್ದಾರಿ ವಹಿಸಿಕೊಂಡಿದ್ದರು. ಇತ್ತೀಚೆಗೆ ಅವರಿಗೆ ಆರೋಗ್ಯ ಸಮಸ್ಯೆ ಕಾಡಿತ್ತು. ವೃಷಣ ಕ್ಯಾನ್ಸರ್‌ನಿಂದಲೂ ಅವರು ಬಳಲುತ್ತಿದ್ದರು. ಕಳೆದ ಆಗಸ್ಟ್‌ನಲ್ಲಿ ಕರೊನಾ ಕೂಡ ಅವರಿಗೆ ಬಾಧಿಸಿತ್ತು. ಶ್ವಾಸಕೋಶದ ಸಮಸ್ಯೆ ಉಂಟಾಗಿ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.
1936ರಲ್ಲಿ ಅವಿಭಜಿತ ಭಾರತದ ಮಧ್ಯ ಪ್ರದೇಶದ ಭೂಪಾಲ್‍ನಲ್ಲಿ ಜನಿಸಿದ್ದ ಖಾನ್, 1947ರಲ್ಲಿ ದೇಶ ವಿಭಜನೆಯಾದಾಗ ಪಾಲಕರ ಜತೆ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದರು. ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿ ವಸ್ತುಗಳನ್ನು ಖರೀದಿಸಲು ಡಾ. ಖಾದಿರ್​ ಸಹಾಯ ಮಾಡಿದ್ದರು. ಅದನ್ನವರು 2004ರಲ್ಲಿ ಒಪ್ಪಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಜನರಲ್ ಪರ್ವೇಜ್‌ ಮುಶ್ರಫ್ ಮಿಲಿಟರಿ ಆಡಳಿತದಲ್ಲಿ ಖಾನ್‍ ಅವರನ್ನು ಭದ್ರತಾ ಸಿಬ್ಬಂದಿಗಳ ಕಣ್ಗಾವಲಿನಲ್ಲಿಟ್ಟು ಗೃಹ ಬಂಧನ ಮಾಡಲಾಗಿತ್ತು. ಇದರ ಬಗ್ಗೆ ತೀವ್ರ ಅಸಮಧಾನ ಹೊಂದಿದ್ದ ಅವರು ಈ ದೇಶದಲ್ಲಿ ವಿಜ್ಞಾನಿಗಳಿಗೆ ಅವರ ಅರ್ಹತೆ ತಕ್ಕಂತೆ ಗೌರವ ಸಿಗುವುದಿಲ್ಲ ಎಂದು ವಿಷಾದಿಸಿದ್ದರು. ನಂತರ 2009ರಲ್ಲಿ ಇಸ್ಲಾಮಾಬಾದ್ ಹೈಕೋರ್ಟ್ ಇವರನ್ನು ಗೃಹ ಬಂಧನದಿಂದ ಮುಕ್ತಿಗೊಳಿಸಿ ಸ್ವತಂತ್ರ ಓಡಾಟಕ್ಕೆ ಅನುವು ಮಾಡಿಕೊಟ್ಟಿತ್ತು.
ಪಾಕಿಸ್ತಾನ ಪೂರ್ಣ ಪ್ರಮಾಣದಲ್ಲಿ ನ್ಯೂಕ್ಲಿಯರ್ ಶಕ್ತಿ ಹೊಂದಿದೆ. ಸಂಶೋಧನಾ ಕೇಂದ್ರ ಇರುವ ರಾವಲ್‍ಪಿಂಡಿ ಸಮೀಪದ ಕಹುಟಾದಿಂದ ಭಾರತದ ದೆಹಲಿಗೆ ಐದು ನಿಮಿಷದಲ್ಲಿ ಗುರಿ ಇಡುವ ಸಾಮರ್ಥ್ಯ ಹೊಂದಿದೆ ಎಂದು 2016ರಲ್ಲಿ ಇವರು ಹೇಳಿಕೆ ನೀಡಿ ಭಾರತದ ಕೆಂಗಣ್ಣಿಗೂ ಗುರಿಯಾಗಿದ್ದರು. ಯಾಂತ್ರಿಕ ಬಾಂಬ್‍ಗಳನ್ನು ತಯಾರಿಸಿ ಕೂಡ ಇವರು ಇನ್ನಷ್ಟು ವಿವಾದದ ಸುಳಿಯಲ್ಲಿ ಸಿಲುಕಿದ್ದರು.
ಪಾಕಿಸ್ತಾನದ ಪರಮಾಣು ಕ್ಷೇತ್ರಕ್ಕೆ ಅವರು ನೀಡಿರುವ ಅಪಾರ ಕೊಡುಗೆಯಿಂದ ಇಡೀ ದೇಶಕ್ಕೇ ಪ್ರೀತಿ ಪಾತ್ರರಾಗಿದ್ದರು. ಅವರು ಈ ದೇಶದ ಐಕಾನ್​ ಆಗಿದ್ದರು ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಸಂತಾಪ ಸೂಚಿಸಿದ್ದಾರೆ. ನಮ್ಮ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಅಪಾರ ಕೊಡುಗೆ ನೀಡಿದ್ದಾರೆ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಫರ್ವೇಜ್​ ಖಟ್ಟಕ್​ ಸಂತಾಪ ಸೂಚಿಸಿದ್ದಾರೆ.
ರಾಮ ನಮ್ಮ ಆತ್ಮ, ಆತನಿಲ್ಲದ ಭಾರತ ಅಪೂರ್ಣ- ರಾಷ್ಟ್ರೀಯ ಸಮ್ಮಾನ್‌ ಸಿಗುವ ಕಾನೂನಾಗಲಿ: ಹೈಕೋರ್ಟ್‌

ಫಿಲ್ಮಿ ಸ್ಟೈಲ್‌ನಲ್ಲಿ ಉದ್ಯಮಿಯ ಅಪಹರಿಸಿ ಸಿಕ್ಕಿಬಿದ್ದ ನಿರ್ಮಾಪಕ! ಐಟಿ ಅಧಿಕಾರಿ ಸೋಗಲ್ಲಿ ಪ್ಲ್ಯಾನ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 1 =
Remember me
