ಕರಾಚಿ:ಅತ್ಯಾಚಾರದ ಪ್ರಕರಣಗಳ ವರದಿಯಾದಾಗಲೆಲ್ಲ, ಮಹಿಳಾ ಸಂಘಟನೆಗಳು ಸೇರಿದಂತೆ ಬಹುತೇಕ ಮಂದಿ ಹೇಳುವುದು ಒಂದೇ ಒಂದು ಶಿಕ್ಷೆ, ಅದೇ ಅತ್ಯಾಚಾರ ಮಾಡಿದ ಭಾಗವನ್ನೇ ಕಟ್​ ಮಾಡಬೇಕು ಎನ್ನುವುದು.
ಅತ್ಯಾಚಾರದ ವಿರುದ್ಧದ ಆಕ್ರೋಶ, ಅಸಹನೆ, ಸಂತ್ರಸ್ತೆಯ ನರಕದ ಬಾಳು ಎಲ್ಲವನ್ನೂ ನೋಡಿದಾಗ ಅತ್ಯಾಚಾರಿಗೆ ಗಲ್ಲುಶಿಕ್ಷೆಗಿಂತಲೂ ಘೋರವಾದದ್ದು ಈ ಶಿಕ್ಷೆ ಎನ್ನುವ ಮಾತೇ ಎಲ್ಲೆಡೆ ಕೇಳಿಬರುತ್ತದೆ.
ಆದರೆ ಕೆಲವು ಕಾನೂನು ತೊಡಕುಗಳಿಂದಾಗಿ ಇಂಥ ನಿಯಮ ಜಾರಿ ಕಷ್ಟವೆಂದೇ ಹೇಳಲಾಗುತ್ತಿತ್ತು. ಆದರೆ ಸದಾ ಕೆಟ್ಟ ಸುದ್ದಿಗಳಿಗೇ ಹೆಸರುವಾಸಿಯಾಗಿರುವ ಪಾಕಿಸ್ತಾನದಿಂದ ಒಂದು ಖುಷಿಯ ವಿಚಾರ ಬಂದಿದೆ. ಅದೇನೆಂದರೆ, ಅತ್ಯಾಚಾರಿಗಳ ‘ಕೆಮಿಕಲ್ ಕ್ಯಾಸ್ಟ್ರೇಷನ್’ಗೆ (ರಾಸಾಯನಿಕ ಬಳಸಿ ವೃಷಣಬೀಜ ಒಡೆಯುವುದು) ಅವಕಾಶ ಮಾಡಿಕೊಡುವ ಕಾನೂನಿಗೆ ಪ್ರಧಾನಿ ಇಮ್ರಾನ್ ಖಾನ್ ತಾತ್ವಿಕ ಒಪ್ಪಿಗೆ ನೀಡಿದ್ದಾರೆ.
ಇದನ್ನೂ ಓದಿ:ವಿಧ್ವಂಸಕ ಕೃತ್ಯಕ್ಕೆ ಯೋಜನೆ ರೂಪಿಸಿದ್ದು ನಿಜ ಎಂದು ಬಾಯ್ಬಿಟ್ಟ ಉಗ್ರ
ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ, ಕಲ್ಲು ಹೊಡೆದು ಸಾಯಿಸುವುದು, ಜೀವಾವಧಿ ಜೈಲು ಶಿಕ್ಷೆ ಹೀಗೆ ವಿವಿಧ ರೀತಿಯ ಶಿಕ್ಷೆ ಬೇರೆ ಬೇರೆ ದೇಶಗಳಲ್ಲಿ ನೀಡಲಾಗುತ್ತದೆ. ಯಾವ ಶಿಕ್ಷೆಗೂ ಬಗ್ಗದ ಅತ್ಯಾಚಾರಿಗಳು ಗಡಗಡ ಎನ್ನುವಂಥ ಕಾನೂನು ಇದಾಗಿದೆ. ಇಂಥದ್ದೊಂದು ಕಾನೂನನ್ನು ನೈಜೇರಿಯಾ ಇದಾಗಲೇ ಜಾರಿಗೊಳಿಸಿದ್ದು, ಇದೀಗ ಪಾಕಿಸ್ತಾನವೂ ಇದಕ್ಕೆ ಮುಂದಾಗಿರುವುದಾಗಿ ವರದಿಯಾಗಿದೆ.
ಅತ್ಯಾಚಾರಿಯ ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ, ಆತ ಇನ್ನೆಂದೂ ಸೆಕ್ಸ್​ ಮಾಡುವ ಸಾಹಸಕ್ಕೆ ಕೈಹಾಕದಂತೆ ಮಾಡಲಾಗುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದ ಅಪರಾಧಿ ಎಂದಿಗೂ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗುವುದಿಲ್ಲ.
ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕಾನೂನು ಸಚಿವಾಲಯ ಪ್ರಸ್ತಾಪಿಸಿದ ಈ ಅತ್ಯಾಚಾರ ನಿಗ್ರಹ ಕುರಿತ ಕರಡು ಸುಗ್ರೀವಾಜ್ಞೆಗೆ ಅನುಮೋದನೆ ನೀಡಲಾಗಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಇದುವರೆಗೆ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.
ಪೊಲೀಸಿಂಗ್‌ನಲ್ಲಿ ಮಹಿಳೆಯರ ಪಾತ್ರ ಹೆಚ್ಚಿಸುವುದು, ಅತ್ಯಾಚಾರ ಪ್ರಕರಣಗಳ ತ್ವರಿತಗತಿ ವಿಚಾರಣೆ ನಡೆಸುವುದು ಮತ್ತು ಸಾಕ್ಷಿಗಳ ಸುರಕ್ಷೆ ಮತ್ತಿತರ ಅಂಶಗಳು ಕರಡು ಮಸೂದೆಯಲ್ಲಿ ಸೇರಿವೆ ಎಂದು ಹೇಳಲಾಗಿದೆ. ಇದು ಗಂಭೀರ ವಿಷಯವಾಗಿರುವುದರಿಂದ ಇದರಲ್ಲಿ ವಿಳಂಬ ಸಹಿಸಲಾಗದು. ನಮ್ಮ ನಾಗರಿಕರಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದು ಅಗತ್ಯ ಎಂದು ಇಮ್ರಾನ್ ‌ಖಾನ್ ಅಭಿಪ್ರಾಯ ಪಟ್ಟಿರುವುದಾಗಿ ತಿಳಿದುಬಂದಿದೆ.
ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿಯೇ ಗಲ್ಲಿಗೇರಿಸುವ ಕಾನೂನು ಜಾರಿಗೊಳಿಸುವಂತೆ ಕೆಲ ಸಚಿವರು ಸಲಹೆ ಮಾಡಿದ್ದಾರೆ. ಆದರೆ ಕ್ಯಾಸ್ಟ್ರೇಷನ್‌ನಿಂದ ಶಿಕ್ಷೆ ಆರಂಭವಾಗಲಿ ಎಂದು ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ.
ಹೊರಗಡೆ ಇಂಟೀರಿಯರ್​ ಡಿಸೈನಿಂಗ್​ ಬೋರ್ಡ್​- ಒಳಗಡೆ ಅಂಗಾಂಗ ಪ್ರದರ್ಶನದ ತರಬೇತಿ!

ಗಾಂಧಿ ಕುಟುಂಬದಲ್ಲಿ ತಲ್ಲಣ ಸೃಷ್ಟಿಸಿರುವ ಒಬಾಮಾ ಪುಸ್ತಕ ವಾರದಲ್ಲಿ 17 ಲಕ್ಷ ಕಾಪಿ ಸೇಲ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 + thirteen =
Remember me
