ಕರಾಚಿ:ಪಾಕಿಸ್ತಾನ ಎಂದರೆ ಸದಾ ಕೆಟ್ಟ ಸುದ್ದಿಗಳೇ ಬರುತ್ತವೆ. ಉಗ್ರರು ಎಂದಾಕ್ಷಣ ಮೊದಲು ನೆನಪಿಗೆ ಬರುವುದೇ ಪಾಕಿಸ್ತಾನ. ಆದರೆ ಅಪರೂಪ ಎನ್ನುವಂತೆ ಪಾಕಿಸ್ತಾನದಿಂದ ಬಲು ಸಂತೋಷದಾಯಕ ವಿಷಯವೊಂದು ಹೊರಕ್ಕೆ ಬಂದಿದೆ.
ಅತ್ಯಾಚಾರಿಗಳ ಸಂಖ್ಯೆ ವಿಪರೀತ ಆಗಿರುವ ಪಾಕಿಸ್ತಾನದಲ್ಲೊಂದು ರೇಪಿಸ್ಟ್​ಗಳು ಗಡಗಡ ನಡುವಂಥ ಕಾನೂನಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.
ಅದೇ ಅತ್ಯಾಚಾರಿಗಳ ಪುರುಷತ್ವವನ್ನೇ ಹರಣ ಮಾಡುವಂಥ ಕಾನೂನು ಇದು. ಅತ್ಯಾಚಾರಿಗಳ ‘ಕೆಮಿಕಲ್ ಕ್ಯಾಸ್ಟ್ರೇಷನ್’ಗೆ (ರಾಸಾಯನಿಕ ಬಳಸಿ ವೃಷಣಬೀಜ ಒಡೆಯುವುದು) ಅವಕಾಶ ಮಾಡಿಕೊಡುವ ಕಾನೂನಿಗೆ ಸಚಿವಸಂಪುಟ ಪ್ರಧಾನಿ ಇಮ್ರಾನ್ ಖಾನ್ ತಾತ್ವಿಕ ಒಪ್ಪಿಗೆ ನೀಡಿದ್ದರು. ಅದನ್ನೀಗ ಸಚಿವ ಸಂಪುಟ ಅನುಮೋದನೆ ನೀಡಿದೆ.
ಇದನ್ನೂ ಓದಿ:ಮಾತಿಲ್ಲ… ಕಥೆಯಿಲ್ಲ… ಚಿಕ್ಕಮಗಳೂರಲ್ಲೊಂದು ಅಪರೂಪದ ಪ್ರೇಮ್​ ಕಹಾನಿ…
ಮಾತ್ರವಲ್ಲದೇ ಅತ್ಯಾಚಾರ ಪ್ರಕರಣಗಳನ್ನು ನಡೆಸಲು ವಿಶೇಷ ಕೋರ್ಟ್​ಗಳ ಸ್ಥಾಪನೆಗೂ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ. ಈ ಎರಡು ವಿಷಯಗಳಲ್ಲೀಗ ಸದ್ಯ ಪಾಕಿಸ್ತಾನವನ್ನು ಎಲ್ಲ ರಾಷ್ಟ್ರಗಳು ಹೊಗಳುವಂತಾಗಿದೆ.
ಅತ್ಯಾಚಾರಿಯ ವೃಷಣವನ್ನು ಶಸ್ತ್ರಚಿಕಿತ್ಸೆ ಮೂಲಕ ಕತ್ತರಿಸಿ, ಆತ ಇನ್ನೆಂದೂ ಸೆಕ್ಸ್​ ಮಾಡುವ ಸಾಹಸಕ್ಕೆ ಕೈಹಾಕದಂತೆ ಮಾಡಲಾಗುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆಗೆ ಒಳಗಾದ ಅಪರಾಧಿ ಎಂದಿಗೂ ಲೈಂಗಿಕ ಕ್ರಿಯೆ ನಡೆಸಲು ಶಕ್ತನಾಗುವುದಿಲ್ಲ. ನೈಜೇರಿಯಾದಲ್ಲಿ ಇದಾಗಲೇ ಇಂಥದ್ದೊಂದು ಕಾನೂನು ತರಲಾಗಿದೆ.
ಕಾಂಡೋಮ್​ನಲ್ಲಿ ರಂಧ್ರ ಮಾಡಿ ಸೆಕ್ಸ್​ ಮಾಡಿದ ಪ್ರಿಯಕರ: ಕೋರ್ಟ್​ ನೀಡಿತು ಶಿಕ್ಷೆ!

ಕಚೇರಿಯಲ್ಲಿಯೇ ಕಿಸ್​ ಕೊಟ್ಟು ಕೆಲಸ ಕಳೆದುಕೊಂಡ ಕೊಪ್ಪಳ ತಹಶೀಲ್ದಾರ್​!

ಕರೊನಾ ಬಿಕ್ಕಟ್ಟಿನಲ್ಲೂ ಈ ಶಿಕ್ಷಕಿಯಾದರು ಕೋಟ್ಯಧಿಪತಿ!

ಮಾತಿಲ್ಲ… ಕಥೆಯಿಲ್ಲ… ಚಿಕ್ಕಮಗಳೂರಲ್ಲೊಂದು ಅಪರೂಪದ ಪ್ರೇಮ್​ ಕಹಾನಿ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:5 − four =
Remember me
